Shivamogga : Vinobanagar police station visits homes – listens to citizens' concerns! ಶಿವಮೊಗ್ಗ : ವಿನೋಬನಗರ ಠಾಣೆ ಪೊಲೀಸರಿಂದ ಮನೆಗಳಿಗೆ ಭೇಟಿ – ನಾಗರೀಕರ ಅಹವಾಲು ಆಲಿಕೆ!

shimoga police news | ಶಿವಮೊಗ್ಗ | ವಿನೋಬನಗರ ಠಾಣೆ ಪೊಲೀಸರಿಂದ ಮನೆಗಳಿಗೆ ಭೇಟಿ – ನಾಗರೀಕರ ಅಹವಾಲು ಆಲಿಕೆ!

ಶಿವಮೊಗ್ಗ (shivamogga), ಜು. 25: ಶಿವಮೊಗ್ಗ ನಗರದ ಸೋಮಿನಕೊಪ್ಪ ಸುತ್ತಮುತ್ತಲಿನ ಬಡಾವಣೆಗಳಿಗೆ ಜು. 25 ರಂದು ವಿನೋಬನಗರ ಠಾಣೆ ಪೊಲೀಸರು, ಸುರಿಯುವ ಮಳೆಯಲ್ಲಿಯೇ ಮನೆ ಮನೆಗೆ ಭೇಟಿಯಿತ್ತು ನಾಗರೀಕರ ಅಹವಾಲು ಆಲಿಸಿದರು.

ಪೊಲೀಸ್ ಇಲಾಖೆಯ ವಿನೂತನ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇನ್ಸ್’ಪೆಕ್ಟರ್ ಸಂತೋಷ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಸೋಮಿನಕೊಪ್ಪ, ಕೆ ಹೆಚ್ ಬಿ ಪ್ರೆಸ್ ಕಾಲೋನಿ ಸೇರಿದಂತೆ ಸುತ್ತಮುತ್ತಲಿನ ವಸತಿ ಬಡಾವಣೆಗಳಿಗೆ ಖುದ್ದಾಗಿ ಭೇಟಿಯಿತ್ತು ನಾಗರೀಕರ ಅಹವಾಲು ಆಲಿಸಿತು.

ಈ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಇನ್ಸ್’ಪೆಕ್ಟರ್ ಸಂತೋಷ್ ಕುಮಾರ್ ಅವರು ಮಾತನಾಡಿ, ಸಮುದಾಯ ಪೊಲೀಸ್ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಸೌಹಾರ್ದ ಸಮಾಜ ನಿರ್ಮಿಸುವ ಉದ್ದೇಶದಿಂದ ಮನೆ ಮನೆಗೆ ಪೊಲೀಸರು ಎಂಬ ವಿನೂತನ ಕಾರ್ಯುಕ್ರಮವನ್ನು ಪೊಲೀಸ್ ಇಲಾಖೆ ಅನುಷ್ಠಾನಗೊಳಿಸಿದೆ.

ಕಾನೂನು – ಸುವ್ಯವಸ್ಥೆಗೆ ಸಂಬಂಧಿಸಿದಂತೆ ಏನೇ ಸಮಸ್ಯೆಗಳಿದ್ದರೂ ಪೊಲೀಸರ ಗಮನಕ್ಕೆ ತನ್ನಿ. ಅವುಗಳನ್ನು ಕಾಲಮಿತಿಯೊಳಗೆ ಪರಿಹರಿಸಲಾಗುವುದು. ರೌಡಿಸಂ ಚಟುವಟಿಕೆ, ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗುವವರ ಮಾಹಿತಿ ನೀಡಿ. ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಮಾಹಿತಿ ನೀಡುವ ನಾಗರೀಕರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದರು.

ಪ್ರತಿಯೊಂದು ಪ್ರದೇಶಗಳಲ್ಲಿಯೂ ಬೀಟ್ ಸಮಿತಿ ರಚಿಸಲಾಗುವುದು. ನಿಯೋಜಿತ ಬೀಟ್ ಪೊಲೀಸರು ನಿಯಮಿತವಾಗಿ ಭೇಟಿ ನೀಡಲಿದ್ದಾರೆ. ನಾಗರೀಕರ ಅಹವಾಲು ಆಲಿಸಿ, ಪರಿಹಾರ ಕ್ರಮಕೈಗೊಳ್ಳಲಿದ್ದಾರೆ ಎಂದು ಇನ್ಸ್’ಪೆಕ್ಟರ್ ಸಂತೋಷ್ ಕುಮಾರ್ ಅವರು ನಾಗರೀಕರಿಗೆ ತಿಳಿಸಿದ್ದಾರೆ.

ಇದೇ ವೇಳೆ ನಾಗರೀಕರು ಮಾತನಾಡಿ, ಹೊರವಲಯದ ವಸತಿ ಬಡಾವಣೆಗಳಲ್ಲಿ ಹಗಲ ಹಾಗೂ ರಾತ್ರಿ ಪೊಲೀಸ್ ಬೀಟ್ ವ್ಯವಸ್ಥೆಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಿನೋಬನಗರ ಪೊಲೀಸ್ ಠಾಣೆ ಸಿಬ್ಬಂದಿಗಳಾದ ಆಕಾಶ್, ಪ್ರವೀಣ್, ವಿಜಯ್, ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಗ್ರೇಡ್ – 1 ಕಾರ್ಯದರ್ಶಿ ಶಿವಾನಾಯ್ಕ್, ಕೆಹೆಚ್’ಬಿ ಪ್ರೆಸ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಪತ್ರಕರ್ತ ಬಿ ರೇಣುಕೇಶ್, ಉಪಾಧ್ಯಕ್ಷ ಮಂಜುನಾಥ್,

ಪ್ರಧಾನ ಕಾರ್ಯದರ್ಶಿ ಅನ್ವರ್ ಬಾಬು, ಪ್ರಮುಖರಾದ ರಮೇಶ್, ಸಚಿನ್, ನಾಗರತ್ನ, ಅನುರಾಧ, ಹರ್ಷಿತ, ಸೌಮ್ಯ ಸೇರಿದಂತೆ ಮೊದಲಾದವರಿದ್ದರು.

Shivamogga, July 25: On Jul. 25, Vinobanagar police station visited the areas around Sominakoppa in Shivamogga city and listened to the grievances of the citizens while visiting houses in the pouring rain.

As part of the police department’s innovative door-to-door policing program, a police team led by Inspector Santosh Kumar personally visited the surrounding residential areas including Sominakoppa and KHB Press Colony and listened to the grievances of the citizens.

Monsoon rains in Malnad: Increased inflow into Tunga – Bhadra – Linganamakki dams! ಮಲೆನಾಡಲ್ಲಿ ಮುಂಗಾರು ಮಳೆ : ತುಂಗ – ಭದ್ರಾ - ಲಿಂಗನಮಕ್ಕಿ ಡ್ಯಾಂಗೆ ಹೆಚ್ಚಿದ ಒಳಹರಿವು! Previous post shimoga rain | ಮಲೆನಾಡಲ್ಲಿ ಮುಂಗಾರು ಮಳೆ : ತುಂಗ, ಭದ್ರಾ, ಲಿಂಗನಮಕ್ಕಿ ಡ್ಯಾಂಗೆ ಹೆಚ್ಚಿದ ಒಳಹರಿವು!
Shivamogga | Power line snapped and fell: Cow dies – a major tragedy averted! ಶಿವಮೊಗ್ಗ | ತುಂಡರಿಸಿ ಬಿದ್ದ ವಿದ್ಯುತ್ ಲೈನ್ : ಹಸು ಸಾವು – ತಪ್ಪಿದ ಭಾರೀ ದುರಂತ! Next post shimoga | ಶಿವಮೊಗ್ಗ | ತುಂಡರಿಸಿ ಬಿದ್ದ ವಿದ್ಯುತ್ ಲೈನ್ : ಹಸು ಸಾವು – ತಪ್ಪಿದ ಭಾರೀ ದುರಂತ!