
shimoga news | ಶಿವಮೊಗ್ಗ : ಸಚಿವ ಜಮೀರ್ ಅಹಮದ್ ಖಾನ್ ಅವರ ಜನ್ಮ ದಿನಾಚರಣೆ
ಶಿವಮೊಗ್ಗ (shivamogga), ಆಗಸ್ಟ್ 1: ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ಜನ್ಮ ದಿನಾಚರಣೆ ಸಮಾರಂಭವನ್ನು, ಆಗಸ್ಟ್ 1 ರಂದು ಶಿವಮೊಗ್ಗ ನಗರದ ಆಶಾ ಕಿರಣ ಬುದ್ದಿಮಾಂದ್ಯ ಶಾಲೆಯಲ್ಲಿ ಬೆಂಬಲಿಗರು ಹಮ್ಮಿಕೊಂಡಿದ್ದರು.
ಶಾಲೆಯ ಮಕ್ಕಳೊಂದಿಗೆ ಬೆಂಬಲಿಗರು ಕೇಕ್ ಕತ್ತರಿಸಿದರು. ನಂತರ ಮಕ್ಕಳಿಗೆ ಉಪಹಾರ, ಚಾಕೋಲೆಟ್ ಸೇರಿದಂತೆ ಸಿಹಿ ವಿತರಣೆ ಮಾಡಿದರು.
ನಂತರ ಟಿಪ್ಪು ನಗರದ ಟೀಪು ಮಸೀದಿ ಕಾರ್ಯದರ್ಶಿ ಮೊಹಮ್ಮದ್ ಸಾದತ್ ವುಲ್ಲಾ ಅವರು ಮಾತನಾಡಿ, ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಹಲವು ಸಮಾಜಮುಖಿ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಚಿವರಾಗಿ ಉತ್ತಮ ಕಾರ್ಯನಿರ್ವಹಣೆ ಮಾಡುತ್ತಿದ್ದು, ಜನಮಾನಸದಲ್ಲಿ ಪ್ರಸಿದ್ದಿ ಪಡೆದಿದ್ದಾರೆ.
ಅವರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂಬ ಉದ್ದೇಶದಿಂದ ಆಶಾ ಕಿರಣ ಶಾಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸಮಾರಂಭದಲ್ಲಿ ಗಾಂಧಿ ಬಜಾರ್ ಸುನ್ನಿ ಜಾಮೀಯ ಮಸೀದಿ ಅಧ್ಯಕ್ಷರಾದ ಮುನಾವರ್ ಪಾಶಾ, ಕಾರ್ಯದರ್ಶಿ ಅಶ್ರಫ್ ಅಹ್ಮದ್, ಜೆಪಿ ನಗರದ ಮಸ್ಜೀದೆ ಆಜಂನ ಉಪಾಧ್ಯಕ್ಷರಾದ ಸೈಫುಲ್ಲಾ, ಯುವ ಕಾಂಗ್ರೆಸ್ ಮುಖಂಡರಾದ ಮೊಹಮ್ಮದ್ ಇಮ್ರಾನ್, ಮುಖಂಡರಾದ ಹಮೀದ್, ಜೀಶಾನ್ ಸೇರಿದಂತೆ ಮೊದಲಾದವರಿದ್ದರು.
Shivamogga, August 1: Housing Minister Zameer Ahmed Khan’s birthday celebration was organized by his supporters at the Asha Kiran Mentally Disabled School in Shivamogga city on August 1.
