A person from Bhadravati taluk was sentenced to 10 years in rigorous imprisonment!: What is the reason? ಭದ್ರಾವತಿ ತಾಲೂಕಿನ ವ್ಯಕ್ತಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ! : ಕಾರಣವೇನು?

bhadravati news | ಭದ್ರಾವತಿ ತಾಲೂಕಿನ ವ್ಯಕ್ತಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ! : ಕಾರಣವೇನು?

ಭದ್ರಾವತಿ (bhadravathi), ಆಗಸ್ಟ್ 6: ಮಹಿಳೆಯೋರ್ವರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ವ್ಯಕ್ತಿಗೆ, 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಭದ್ರಾವತಿ ತಾಲೂಕು ಕೋಮಾರನಹಳ್ಳಿ ತಾಂಡಾದ ನಿವಾಸಿ ತಾವರನಾಯ್ಕ್ (62) ಜೈಲು ಶಿಕ್ಷೆಗೆ ಗುರಿಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಅಪರಾಧಿಗೆ 35 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದಲ್ಲಿ, ಹೆಚ್ಚುವರಿಯಾಗಿ 3 ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ ಅವರು ಆಗಸ್ಟ್ 4 ರಂದು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ರತ್ನಮ್ಮ ಪಿ ಅವರು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ : 27-3-2021 ರಂದು ಶಿಕ್ಷೆಗೊಳಗಾದ ತಾವರನಾಯ್ಕ್’ನು, ನೆರೆಮನೆಯ ನಿವಾಸಿ ಜಯಾಬಾಯಿ ಎಂಬ ಮಹಿಳೆಯೊಂದಿಗೆ ಜಗಳ ಮಾಡಿಕೊಂಡಿದ್ದನು. ಈ ವೇಳೆ ಮಚ್ಚಿನಿಂದ ಮಹಿಳೆಯ ಕುತ್ತಿಗೆ ಹಾಗು ತಲೆಗೆ ಮಾರಣಾಂತಿಕ ಹಲ್ಲೆ ಮಾಡಿದ್ದ.

ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಎಸ್ಐ ಮಂಜೇಶ್ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.

Bhadravati, August 6: The 4th Additional District and Sessions Court has sentenced a man to 10 years rigorous imprisonment for fatally attacking a woman with a machete.

A bogie uncoupled the Talaguppa - Mysore intercity train in shimoga..! ಶಿವಮೊಗ್ಗ ನಗರದಲ್ಲಿ ತಾಳಗುಪ್ಪ – ಮೈಸೂರು ಇಂಟರ್ ಸಿಟಿ ರೈಲು ಸಂಚಾರದ ವೇಳೆಯೇ ಬೇರ್ಪಟ್ಟ ಬೋಗಿ..! Previous post shimoga | BREAKING NEWS | ಶಿವಮೊಗ್ಗ ನಗರದಲ್ಲಿ ತಾಳಗುಪ್ಪ – ಮೈಸೂರು ಇಂಟರ್ ಸಿಟಿ ರೈಲು ಸಂಚಾರದ ವೇಳೆಯೇ ಬೇರ್ಪಟ್ಟ ಬೋಗಿ..!
Shivamogga : Accused robbed a teacher by pretending to be a Reels fan! ಶಿವಮೊಗ್ಗ : ರೀಲ್ಸ್ ಅಭಿಮಾನಿ ಎಂದು ಕರೆಯಿಸಿಕೊಂಡು ಶಿಕ್ಷಕನ ದರೋಡೆ ಮಾಡಿದ ಆರೋಪಿಗಳು! Next post shimoga crime news | ಶಿವಮೊಗ್ಗ : ಚಿನ್ನದ ನಾಣ್ಯ ಕೊಡುವುದಾಗಿ ನಂಬಿಸಿ ಮಂಗಳೂರು ವ್ಯಕ್ತಿಗೆ 2 ಲಕ್ಷ ರೂ. ವಂಚನೆ!