
shimoga | BREAKING NEWS | ಶಿವಮೊಗ್ಗ ನಗರದಲ್ಲಿ ತಾಳಗುಪ್ಪ – ಮೈಸೂರು ಇಂಟರ್ ಸಿಟಿ ರೈಲು ಸಂಚಾರದ ವೇಳೆಯೇ ಬೇರ್ಪಟ್ಟ ಬೋಗಿ..!
ಶಿವಮೊಗ್ಗ, ಆಗಸ್ಟ್ 6: ತಾಂತ್ರಿಕ ಕಾರಣದಿಂದ ತಾಳಗುಪ್ಪ – ಮೈಸೂರು ಇಂಟರ್ ಸಿಟಿ ಎಕ್ಸ್’ಪ್ರೆಸ್ ರೈಲಿನ ಸಂಚಾರದ ವೇಳೆಯೇ, ಕೆಲ ಬೋಗಿಗಳು ಬೇರ್ಪಟ್ಟು ಹಳಿಯಲ್ಲಿಯೇ ನಿಂತ ಕುತೂಹಲಕಾರಿ ಘಟನೆ ಆಗಸ್ಟ್ 6 ಸಂಜೆ ನಡೆದಿದೆ.
ಶಿವಮೊಗ್ಗ ನಗರದ ಹೊಳೆ ಬಸ್ ನಿಲ್ದಾಣ ಸಮೀಪದ ರೈಲ್ವೆ ಸೇತುವೆ ಬಳಿ ಘಟನೆ ನಡೆದಿದೆ. ರೈಲನ್ನು ಹಿಂದಕ್ಕೆ ತರಿಸಿ ಬೇರ್ಪಟ್ಟ ಬೋಗಿಗಳನ್ನು ಮತ್ತೆ ಜೋಡಿಸಲಾಗಿದೆ. ತದನಂತರ ಮೈಸೂರಿನತ್ತ ರೈಲು ಪ್ರಯಾಣ ಮುಂದುವರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸದರಿ ಘಟನೆಯಿಂದ ಹಲವು ನಿಮಿಷಗಳ ಕಾಲ ರೈಲು, ತುಂಗಾ ನದಿ ಸೇತುವೆಯ ಮೇಲೆಯೇ ನಿಂತುಕೊಂಡಿದೆ. ಇದರಿಂದ ಪ್ರಯಾಣಿಕರು ಕೆಲ ಸಮಯ ಆತಂಕ, ಗೊಂದಲಕ್ಕೊಳಗಾಗುವಂತಾಯಿತು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ರೈಲ್ವೆ ಸಿಬ್ಬಂದಿಗಳು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ ಸಮಸ್ಯೆ ಪರಿಹರಿಸಿದ್ದಾರೆ. ಎಂದು ಹೇಳಲಾಗಿದೆ.
ತಾಳಗುಪ್ಪ – ಮೈಸೂರು ಇಂಟರ್ ಸಿಟಿ ರೈಲು, ಶಿವಮೊಗ್ಗ ನಗರದ ಮುಖ್ಯ ರೈಲ್ವೆ ನಿಲ್ದಾಣದಿಂದ ಸಂಜೆ ಸರಿಸುಮಾರು 4. 50 ಕ್ಕೆ ಸಂಚಾರ ಆರಂಭಿಸಿತ್ತು. ತಾಂತ್ರಿಕ ಸಮಸ್ಯೆ ಪರಿಹಾರವಾದ ನಂತರ, 5.45 ಕ್ಕೆ ಸಂಚಾರ ಪುನಾರಾರಂಭಿಸಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ. ಬೋಗಿ ಬೇರ್ಪಡಲು ಕಾರಣವೇನು? ಎಂಬಿತ್ಯಾದಿ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.
Shivamogga, August 6: A curious incident took place on the evening of August 6 when some coaches of the Talaguppa-Mysore Intercity Express train got separated and remained on the tracks due to technical reasons.
The incident took place near the railway bridge near Hole bus stand in Shivamogga city. The train was brought back and the separated coaches were reattached. It is reported that the train then continued its journey towards Mysore.