
shimoga crime news | ಶಿವಮೊಗ್ಗ : ಚಿನ್ನದ ನಾಣ್ಯ ಕೊಡುವುದಾಗಿ ನಂಬಿಸಿ ಮಂಗಳೂರು ವ್ಯಕ್ತಿಗೆ 2 ಲಕ್ಷ ರೂ. ವಂಚನೆ!
ಶಿವಮೊಗ್ಗ (shivamogga), ಆಗಸ್ಟ್ 7: ಚಿನ್ನದ ನಾಣ್ಯ ನೀಡುವುದಾಗಿ ನಂಬಿಸಿದ ವಂಚಕರ ತಂಡವೊಂದು, ಮಂಗಳೂರಿನ ವ್ಯಕ್ತಿಯೋರ್ವರಿಗೆ 2 ಲಕ್ಷ ರೂ. ಮೋಸ ಮಾಡಿದ ಘಟನೆ ಸಂಬಂಧ, ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೂಡಯ್ಯ ಆಚಾರ್ಯ (67) ವಂಚನೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರ ಮೊಬೈಲ್ ಫೋನ್ ಗೆ ಅನಾಮಧೇಯ ವಂಚಕ ವ್ಯಕ್ತಿಯೋರ್ವರು ಕರೆ ಮಾಡಿ, ನೆಲ ಅಗೆಯುವಾಗ ಚಿನ್ನದ ನಾಣ್ಯಗಳು ಸಿಕ್ಕಿವೆ. ಇವುಗಳನ್ನು ಮಾರಾಟ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದ್ದ.
ಇದನ್ನು ನಂಬಿದ ಚೂಡಯ್ಯ ಆಚಾರ್ಯ ಅವರು, ವಂಚಕರ ಸೂಚನೆಯಂತೆ ಶಿವಮೊಗ್ಗದ ಹೊರವಲಯ ಈಶ್ವರ ವನದ ಬಳಿ 30-07-2025 ರಂದು ಬೆಳಿಗ್ಗೆ 06.30 ಗಂಟೆಗೆ ಆಗಮಿಸಿದ್ದಾರೆ. ಈ ವೇಳೆ ವಂಚಕನು ಮಹಿಳೆಯೋರ್ವರೊಂದಿಗೆ ಆಗಮಿಸಿದ್ದ.
ಚೀಲವೊಂದರಲ್ಲಿ ನಾಣ್ಯ ಕೊಟ್ಟು 2 ಲಕ್ಷ ರೂ. ಪಡೆದುಕೊಂಡಿದ್ದಾರೆ. ಈ ವೇಳೆ ಬೈಕ್ ನಲ್ಲಿ ಆಗಮಿಸಿದ ವಂಚಕರ ಕಡೆಯವರು, ಬ್ಯಾಗ್ ಚೆಕ್ ಮಾಡಬೇಕೆಂದು ಬೆದರಿಸಿದ್ದಾರೆ. ತದನಂತರ ಎಲ್ಲರೂ ಸ್ಥಳದಿಂದ ಪರಾರಿಯಾಗಿದ್ಧಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
Shimoga, August 7: A group of fraudsters, who believed that they were giving gold coins, extorted Rs 2 lakh from each person. A case has been registered at the Vinobanagar Police Station in Shimoga regarding the incident of cheating.