
soraba news | ಚಂದ್ರಗುತ್ತಿ ದೇವಾಲಯ ಬಳಿ ಮಗುವಿಗೆ ಜನ್ಮವಿತ್ತ ಯುವತಿ!
ಶಿವಮೊಗ್ಗ (shivamogga), ಆಗಸ್ಟ್ 11: ರೇಣುಕಾಂಬೆ ದೇವರ ದರ್ಶನಕ್ಕೆ ಕುಟುಂಬ ಸದಸ್ಯರೊಂದಿಗೆ ಆಗಮಿಸಿದ್ದ ಅವಿವಾಹಿತ ಯುವತಿಯೋರ್ವಳು, ಮಗುವಿಗೆ ಜನ್ಮವಿತ್ತ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಪ್ರಸಿದ್ದ ಚಂದ್ರಗುತ್ತಿ ದೇವಾಲಯ ಸಮೀಪ ಕಳೆದ ಶನಿವಾರ ನಡೆದಿದೆ.
ಹಾವೇರಿ ಜಿಲ್ಲೆಯ ನಿವಾಸಿಯಾದ ಯುವತಿಯು, ನೂಲು ಹುಣ್ಣಿಮೆ ನಿಮಿತ್ತ ತನ್ನ ಕುಟುಂಬದ ಇಬ್ಬರು ಸದಸ್ಯರೊಂದಿಗೆ ಚಂದ್ರಗುತ್ತಿ ದೇವಾಲಯಕ್ಕೆ ಆಗಮಿಸಿದ್ದರು.
ದೇವಾಲಯದ ಮೆಟ್ಟಿಲು ಹತ್ತಲು ಸಾಧ್ಯವಾಗದ ಕಾರಣದಿಂದ, ಯುವತಿಯನ್ನು ದೇವಾಲಯ ಸಮೀಪದ ತೇರು ಮನೆಯಲ್ಲಿ ಬಿಟ್ಟು ದೇವರ ದರ್ಶನಕ್ಕೆ ಸಂಬಂಧಿಕರು ತೆರಳಿದ್ದರು. ಈ ವೇಳೆ ಯುವತಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.
ಕೆಲ ನಿಮಿಷಗಳಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ಧಾಳೆ. ತಕ್ಷಣವೇ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು ಆಂಬುಲೆನ್ಸ್ ಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿ, ಸೊರಬ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ವೇಳೆ ಯುವತಿಗೆ ಮದುವೆಯಾಗಿಲ್ಲವೆಂಬ ಮಾಹಿತಿ ಹಿನ್ನೆಲೆಯಲ್ಲಿ, ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತದನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಖಿ ಕೇಂದ್ರದವರು ಮಹಿಳೆ ಹಾಗೂ ಮಗುವನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Shivamogga, August 11: An unmarried young woman, who had come with her family members to have darshan of Lord Renukamba, gave birth to a baby boy last Saturday near the famous Chandragutti Temple in Sorab taluk of Shivamogga district.