Shimoga: 'Doddamma Devi National Award' for a person from Indore Madhya Pradesh ಶಿವಮೊಗ್ಗ : ಮಧ್ಯಪ್ರದೇಶದ ಇಂದೋರ್ ನ ವ್ಯಕ್ತಿಗೆ ‘ದೊಡ್ಡಮ್ಮ ದೇವಿ ರಾಷ್ಟ್ರೀಯ ಪ್ರಶಸ್ತಿ’

shimoga news | ಶಿವಮೊಗ್ಗ : ಮಧ್ಯಪ್ರದೇಶದ ಇಂದೋರ್ ವ್ಯಕ್ತಿಗೆ ‘ದೊಡ್ಡಮ್ಮ ದೇವಿ ರಾಷ್ಟ್ರೀಯ ಪ್ರಶಸ್ತಿ’

ಶಿವಮೊಗ್ಗ (shivamogga), ಸೆಪ್ಟೆಂಬರ್ 29: ಶಿವಮೊಗ್ಗದ ದೊಡ್ಡಮ್ಮ ಚಾರಿಟೇಬಲ್ ಟ್ರಸ್ಟ್ ನಿಂದ ನೀಡಲಾಗುವ ‘ದೊಡ್ಡಮ್ಮ ದೇವಿ ರಾಷ್ಟ್ರೀಯ ಪ್ರಶಸ್ತಿ’ಯನ್ನು, ಮಧ್ಯಪ್ರದೇಶದ ಇಂದೋರ್ ನ ನಿವಾಸಿಯಾದ ಪರಿಸರ ಪ್ರೇಮಿ ಡಾ. ಶಂಕರ್ ಲಾಲ್ ಗಾರ್ಗ್ (67)  ಅವರಿಗೆ ನೀಡಲಾಗುತ್ತಿದೆ ಎಂದು ಟ್ರಸ್ಟ್ ನ ಸಂಚಾಲಕರಾದ ಎಂ ಎನ್ ಸುಂದರ್ ರಾಜ್ ಅವರು ತಿಳಿಸಿದ್ದಾರೆ.

ಸೆಪ್ಟೆಂಬರ್ 29 ರಂದು ಅವರು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. 2023 ರಿಂದ ಸಮಾಜದ ವಿವಿಧ ವರ್ಗಗಳ ಸಾಧಕರನ್ನು ಗುರುತಿಸಿ ‘ದೊಡ್ಡಮ್ಮ ದೇವಿ ರಾಷ್ಟ್ರೀಯ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿ ಮೊತ್ತವು 1 ಲಕ್ಷ ರೂ.ಗಳಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ವರ್ಷ ಪ್ರಶಸ್ತಿಗೆ ಭಾಜನರಾಗಿರುವ ಡಾ. ಶಂಕರ್ ಲಾಲ್ ಗಾರ್ಗ್ ಅವರು. 22 ಎಕರೆ ವಿಸ್ತೀರ್ಣದ ಬಂಜರು ಬೆಟ್ಟದಲ್ಲಿ ಮರಗಿಡಗಳನ್ನು ಬೆಳೆಸಿ ಅರಣ್ಯವಾಗಿ ಪರಿವರ್ತಿಸಿದ್ದಾರೆ. ಇವರ ಪರಿಸರ ಕಾಳಜಿ ಗಮನಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಹಾಗೆಯೇ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಮಹಿಳೆಯರಿಗೆ ‘ಶ್ರೀ ಲಲಿತಾ ಪುರಸ್ಕಾರ’ ನೀಡಿ ಗೌರವಿಸಲಾಗುತ್ತಿದೆ. ಈ ಬಾರಿ ಆಶಾ ಆರ್ ಕುಮಾರ್ ಎಂಬುವರಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಗುತ್ತಿದೆ. ಪ್ರಶಸ್ತಿ ಮೊತ್ತವು 10 ಸಾವಿರ ರೂ.ಗಳಾಗಿದೆ ಎಂದರು.

ಅಕ್ಟೋಬರ್ 2 ರಂದು ನಗರದ ಹೊರವಲಯ ಸೋಮಿನಕೊಪ್ಪದ ಕೆ ಹೆಚ್ ಬಿ ಪ್ರೆಸ್ ಕಾಲೋನಿಯಲ್ಲಿ ನಡೆಯಲಿರುವ ಚಂಡಿಕಾ ಹೋಮ ಕಾರ್ಯಕ್ರಮದಲ್ಲಿ, ಪ್ರಶಸ್ತಿ ವಿತರಣೆ ನಡೆಯಲಿದೆ. ಸಮಾರಂಭವನ್ನು ಹಿರಿಯೂರಿನ ಶಾರದಾಶ್ರಮದ ಅಧ್ಯಕ್ಷರಾದ ಮಾತಾ ಚೈತನ್ಯಮಯಿ ಅವರು ನೆರವೇರಿಸಲಿದ್ದಾರೆ.

ಸಾಹಿತಿ ಎಂ ಎನ್ ಸುಂದರ್ ರಾಜ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ದೊಡ್ಡಮ್ಮ ದೇವಿ ಉಪಾಸಕರಾದ ಸಿದ್ದಪ್ಪಾಜೀಯವರು ಅಧ್ಯಕ್ಷತೆವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಮುಕ್ತಾಭಟ್ ನೇತೃತ್ವದಲ್ಲಿ ದುರ್ಗಾ ಕವಚ ಪಠಣ, ಗಾಯತ್ರಿ ವಿಶ್ವಕರ್ಮ ಭಜನಾ ಮಂಡಳಿಯ ಅನ್ನಪೂರ್ಣ ಕಾಳಾಚರ್ ನೇತೃತ್ವದಲ್ಲಿ ಭಜನೆ, ದೊಡ್ಡಮ್ಮ ದೇವಿ ಉತ್ಸವ ಮೆರವಣಿಗೆ ಹಾಗೂ ತೊಟ್ಟಿಲು ಶಾಸ್ತ್ರ ನೆರವೇರಲಿದೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರು ಯಾವುದೇ ಶುಲ್ಕವಾಗಲಿ, ದೇಣಿಗೆ ನೀಡಬೇಕೆಂಬ ನಿಯಮವಿಲ್ಲ. ಸಮಾಜದಲ್ಲಿ ಸಾಮರಸ್ಯ ಮೂಡಿಸಿ, ಧಾರ್ಮಿಕ ಭಾವನೆ ಮೂಡಿಸುವ ಸದುದ್ದೇಶ ಇದರಲ್ಲಿದೆ ಎಂದು ಹೇಳಿದ್ದಾರೆ.

ಗೋಷ್ಠಿಯಲ್ಲಿ ಪ್ರಮುಖರಾದ ನರಸಿಂಹ, ಗಜೇಂದ್ರ ಕುಡಾಲ್ಕರ್, ಸತೀಶ್, ರವಿಕುಮಾರ್, ಸಚಿನ್, ಪುರುಷೋತ್ತಮ್, ವಿಜಯ್ ಉಪಸ್ಥಿತರಿದ್ದರು.

shivamogga, september 29: The ‘Doddamma Devi National Award’, presented by the Doddamma Charitable Trust in Shimoga, is being presented to environmentalist Dr. Shankar Lal Garg (67), a resident of Indore, Madhya Pradesh, said MN Sundar Raj, the convenor of the trust. He addressed a press conference in Shivamogga on September 29. He informed that since 2023, the ‘Doddamma Devi National Award’ is being given to recognize achievers from various sections of society. The award amount is Rs 1 lakh.

Woman's body found in Bhadra River in Bhadravati city! ಭದ್ರಾವತಿ ನಗರದ ಭದ್ರಾ ನದಿಯಲ್ಲಿ ಮಹಿಳೆಯ ಶವ ಪತ್ತೆ! Previous post bhadravati news | ಭದ್ರಾವತಿ ನಗರದ ಭದ್ರಾ ನದಿಯಲ್ಲಿ ಮಹಿಳೆಯ ಶವ ಪತ್ತೆ!
Shivamogga : Parking banned – one-way traffic ordered! ಶಿವಮೊಗ್ಗ : ವಾಹನ ನಿಲುಗಡೆ ನಿಷೇಧ – ಏಕಮುಖ ಸಂಚಾರಕ್ಕೆ ಆದೇಶ! Next post shimoga traffic news | ಶಿವಮೊಗ್ಗ : ವಾಹನ ನಿಲುಗಡೆ ನಿಷೇಧ – ಏಕಮುಖ ಸಂಚಾರಕ್ಕೆ ಆದೇಶ!