Shivamogga : Parking banned – one-way traffic ordered! ಶಿವಮೊಗ್ಗ : ವಾಹನ ನಿಲುಗಡೆ ನಿಷೇಧ – ಏಕಮುಖ ಸಂಚಾರಕ್ಕೆ ಆದೇಶ!

shimoga traffic news | ಶಿವಮೊಗ್ಗ : ವಾಹನ ನಿಲುಗಡೆ ನಿಷೇಧ – ಏಕಮುಖ ಸಂಚಾರಕ್ಕೆ ಆದೇಶ!

ಶಿವಮೊಗ್ಗ (shivamogga), ಸೆಪ್ಟೆಂಬರ್ 29: ಶಿವಮೊಗ್ಗ ನಗರದ ಎರಡು ರಸ್ತೆಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮಹತ್ವದ ಆದೇಶ ಹೊರಡಿಸಿದ್ದರೆ. ವಿವರ ಈ ಕೆಳಕಂಡಂತಿದೆ.

ಏಕಮುಖ ಸಂಚಾರ : ಸಾರ್ವಜನಿಕರ ಮತ್ತು ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ಇಂದಿರಾ ಗಾಂಧಿ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಆದೇಶ ಹೊರಡಿಸಲಾಗಿದೆ. ಬಾಲರಾಜ್ ಅರಸ್ ರಸ್ತೆ ಕಡೆಯಿಂದ ರಾಘವೇಂದ್ರ ಸ್ವಾಮಿ ಮಠದ ಕಡೆಗೆ ಸಂಚರಿಸಲು (ENTRY)  ಅವಕಾಶ ಕಲ್ಪಿಸಲಾಗಿದೆ.

ಇಂದಿರಾ ಗಾಂಧಿ ರಸ್ತೆಯಲ್ಲಿ ರಾಘವೇಂದ್ರ ಸ್ವಾಮಿ ಮಠದ ಕಡೆಯಿಂದ ಬಾಲರಾಜ್ ಅರಸ್ ರಸ್ತೆ ಕಡೆಗೆ ಸಂಚಾರ ನಿಷೇಧಿಸಿ (NO ENTRY),  ಏಕಮುಖ ಸಂಚಾರ ವ್ಯವಸ್ಥೆಗೆ ಅಧಿಸೂಚನೆ ಹೊರಡಿಸಿ ಜಿಲ್ಲಾಧಿಕಾರಿಗಳು ಅದೇಶ ನೀಡಿದ್ದಾರೆ.

ವಾಹನ ನಿಲುಗಡೆಗೆ ನಿಷೇಧ : ಕೆ.ಜಿ.ಐ.ಡಿ. ಕಚೇರಿ ಪ್ರಾರಂಭದಿಂದ ಬಾರ್ ಅಸೋಸಿಯೇಷನ್ ಕಟ್ಟಡದ ನಂತರದಲ್ಲಿರುವ ಗೇಟ್‌ವರೆಗೆ ಇರುವ ರಸ್ತೆಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.

ರಸ್ತೆಯ ಎರಡು ಬದಿ ದ್ವಿ ಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡಲಾಗುತ್ತಿದ್ದು, ನ್ಯಾಯಾಲಯದ ಹಿಂಬದಿಯಲ್ಲಿರುವ ಪಾರ್ಕಿಂಗ್ ಸ್ಥಳಕ್ಕೆ ಓಡಾಡಲು ತೀವ್ರ ಅಡಚಣೆಯಾಗುತ್ತಿದೆ. ಹಾಗೂ ರಸ್ತೆಯು ಕಿರಿದಾಗಿರುವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಕೇಂದ್ರ ಮೋಟಾರು ವಾಹನ ಕಾಯ್ಕೆ 1988 ಕಲಂ 115 ರ ಅನ್ವಯ ಕೆ.ಜಿ.ಐ.ಡಿ. ಕಚೇರಿ ಪ್ರಾರಂಭದಿಂದ ಬಾರ್ ಅಸೋಸಿಯೇಷನ್ ಕಟ್ಟಡದ ನಂತರದಲ್ಲಿರುವ ಗೇಟ್‌ವರೆಗಿನ ರಸ್ತೆಯಲ್ಲಿ ಎರಡು ಬದಿ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳನ್ನು ಪಾರ್ಕಿಂಗ್ ನಿಷೇಧಿಸಿ ಜಿಲ್ಲಾಧಿಕಾರಿಗಳು ಅದೇಶ ನೀಡಿದ್ದಾರೆ.

Shivamogga, September 29: Deputy Commissioner Gurudatta Hegde has issued an important order regarding two roads in Shivamogga city. The details are as follows.

One-way traffic: In order to ensure smooth movement of public and vehicles, one-way traffic has been allowed on Indira Gandhi Road. Entry has been allowed from Balaraj Urs Road towards Raghavendra Swamy Mutt.

Parking is prohibited: Parking is prohibited on the road from the entrance of the K.G.I.D. office to the gate behind the Bar Association building.

Shimoga: 'Doddamma Devi National Award' for a person from Indore Madhya Pradesh ಶಿವಮೊಗ್ಗ : ಮಧ್ಯಪ್ರದೇಶದ ಇಂದೋರ್ ನ ವ್ಯಕ್ತಿಗೆ ‘ದೊಡ್ಡಮ್ಮ ದೇವಿ ರಾಷ್ಟ್ರೀಯ ಪ್ರಶಸ್ತಿ’ Previous post shimoga news | ಶಿವಮೊಗ್ಗ : ಮಧ್ಯಪ್ರದೇಶದ ಇಂದೋರ್ ವ್ಯಕ್ತಿಗೆ ‘ದೊಡ್ಡಮ್ಮ ದೇವಿ ರಾಷ್ಟ್ರೀಯ ಪ್ರಶಸ್ತಿ’
shimoga APMC vegetable prices | Details of vegetable prices for October 10 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಅಕ್ಟೋಬರ್ 10 ರ ತರಕಾರಿ ಬೆಲೆಗಳ ವಿವರ Next post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 30 ರ ತರಕಾರಿ ಬೆಲೆಗಳ ವಿವರ