A life-sentenced prisoner in Shivamogga Central Jail has died! ಶಿವಮೊಗ್ಗ ಸೆಂಟ್ರಲ್ ಜೈಲ್ ನಲ್ಲಿದ್ದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಸಾವು!

shimoga jail news | ಶಿವಮೊಗ್ಗ ಸೆಂಟ್ರಲ್ ಜೈಲ್ ನಲ್ಲಿದ್ದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಸಾವು!

ಶಿವಮೊಗ್ಗ (shivamogga), ನವೆಂಬರ್ 12: ಶಿವಮೊಗ್ಗ ಸೆಂಟ್ರಲ್ ಜೈಲ್ ನಲ್ಲಿದ್ದ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿಯೋರ್ವ, ಅನಾರೋಗ್ಯದಿಂದ ಮೃತಪಟ್ಟಿರುವ ಘಟನೆ ನವೆಂಬರ್ 12 ರಂದು ಮುಂಜಾನೆ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.

ಬಾಬು ಕೆ ಪಿ ಅಲಿಯಾಸ್ ಸಜೆ ಬಾಬು ಮೃತಪಟ್ಟ ಕೈದಿ ಎಂದು ಗುರುತಿಸಲಾಗಿದೆ. ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಬಾಬು ಈ ಹಿಂದೆ ಶಸ್ತ್ರಚಿಕಿತ್ಸೆಗೊಳಗಾಗಿದ್ದ. ನವೆಂಬರ್ 10 ರಂದು ಬಾಬು ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಬು ಮೃತಪಟ್ಟಿದ್ದಾನೆ. ಪ್ರಕರಣವೊಂದರಲ್ಲಿ ಬಾಬುಗೆ ಚಿಕ್ಕಮಗಳೂರಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಚಿಕ್ಕಮಗಳೂರು ಜೈಲ್ ನಲ್ಲಿದ್ದ ಬಾಬುವನ್ನು, ಕಳೆದ ಆಗಸ್ಟ್ ತಿಂಗಳಲ್ಲಿ ಶಿವಮೊಗ್ಗ ಸೆಂಟ್ರಲ್ ಜೈಲ್ ಗೆ ರವಾನಿಸಲಾಗಿತ್ತು.

Shivamogga, November 11: A life-sentenced prisoner in Shivamogga Central Jail died of illness in the early hours of November 12 at the Government Meggan Hospital.

shimoga APMC vegetable prices | Details of vegetable prices for November 09 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ನವೆಂಬರ್ 12 ರ ತರಕಾರಿ ಬೆಲೆಗಳ ವಿವರ Previous post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ನವೆಂಬರ್ 12 ರ ತರಕಾರಿ ಬೆಲೆಗಳ ವಿವರ
Heavy vehicle traffic restrictions on these roads in Shivamogga city - changes in vehicle parking system! ಶಿವಮೊಗ್ಗ ನಗರದ ಈ ರಸ್ತೆಗಳಲ್ಲಿ ಭಾರೀ ವಾಹನಗಳ ಸಂಚಾರ ನಿರ್ಬಂಧ - ವಾಹನಗಳ ನಿಲುಗಡೆ ವ್ಯವಸ್ಥೆಯಲ್ಲಿ ಬದಲಾವಣೆ! Next post shimoga | ಶಿವಮೊಗ್ಗ ನಗರದ ಈ ರಸ್ತೆಗಳಲ್ಲಿ ಭಾರೀ ವಾಹನಗಳ ಸಂಚಾರ ನಿರ್ಬಂಧ, ವಾಹನಗಳ ನಿಲುಗಡೆ ವ್ಯವಸ್ಥೆಯಲ್ಲಿ ಬದಲಾವಣೆ!