Heavy vehicle traffic restrictions on these roads in Shivamogga city - changes in vehicle parking system! ಶಿವಮೊಗ್ಗ ನಗರದ ಈ ರಸ್ತೆಗಳಲ್ಲಿ ಭಾರೀ ವಾಹನಗಳ ಸಂಚಾರ ನಿರ್ಬಂಧ - ವಾಹನಗಳ ನಿಲುಗಡೆ ವ್ಯವಸ್ಥೆಯಲ್ಲಿ ಬದಲಾವಣೆ!

shimoga | ಶಿವಮೊಗ್ಗ ನಗರದ ಈ ರಸ್ತೆಗಳಲ್ಲಿ ಭಾರೀ ವಾಹನಗಳ ಸಂಚಾರ ನಿರ್ಬಂಧ, ವಾಹನಗಳ ನಿಲುಗಡೆ ವ್ಯವಸ್ಥೆಯಲ್ಲಿ ಬದಲಾವಣೆ!

ಶಿವಮೊಗ್ಗ (shivamogga), ನವೆಂಬರ್ 12: ಶಿವಮೊಗ್ಗ ನಗರದ ಗೋಪಿ ಸರ್ಕಲ್‌ನಿಂದ ಜೆಪಿಎನ್ ರಸ್ತೆ, ಜ್ಯುವೆಲ್ ರಾಕ್ ಹೊಟೇಲ್ ರಸ್ತೆ ಮಾರ್ಗವಾಗಿ ಕುವೆಂಪು ರಸ್ತೆ ಮತ್ತು ಜೈಲ್ ರಸ್ತೆ ಮೂಲಕ ಲಕ್ಷ್ಮೀ ಟಾಕೀಸ್ ವರೆಗೆ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಭಾರೀ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಈ ಕುರಿತಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಹಾಗೂ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

ಕೇಂದ್ರ ಮೋಟಾರು ವಾಹನ ಕಾಯ್ದೆ – 1998 ಕಲಂ 115 ರ ಅನ್ವಯ ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಾಮವಳಿಗಳು – 1989 ರ ನಿಯಮ 221 (ಎ) (5) ರ ಅನ್ವಯ ಈ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ (shimoga), ನವೆಂಬರ್ 12 : ನಗರದ ಮುಖ್ಯ ರಸ್ತೆಗಳಲ್ಲಿ ವಾಹನ ನಿಲುಗಡೆ ತಡೆಯಾಜ್ಞೆಯನ್ನು ಜಾರಿಗೊಳಿಸುವುದು ಹಾಗೂ ಬಹುಹಂತದ ಕಾರ್ ಪಾರ್ಕಿಂಗ್ ಕಟ್ಟಡದಲ್ಲಿ ವಾಹನಗಳ ಪಾರ್ಕಿಂಗ್ ಮಾಡಲು ಕ್ರಮ ಕೈಗೊಳ್ಳುವ ಬಗ್ಗೆ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆಯವರು ಆದೇಶಿಸಿದ್ದಾರೆ.

ಬಿ ಹೆಚ್ ರಸ್ತೆ(ರಾಯಲ್ ಆರ್ಕಿಡ್ ದಿಂದ ಕರ್ನಾಟಕ ಸಂಘ ಸಿಗ್ನಲ್‌ವರೆಗೆ) ಶಿವಪ್ಪನಾಯಕ ಪ್ರತಿಮೆಯಿಂದ ಗಾಂಧಿ ಬಜಾರ್ ನಾಲ್ಕನೇ ಅಡ್ಡರಸ್ತೆವರೆಗೆ, ಗೋಪಿ ವೃತ್ತದಿಂದ ಅಮೀರ್ ಅಹ್ಮದ್ ವೃತ್ತದವರೆಗೆ,

ಹಳೇ ತೀರ್ಥಹಳ್ಳಿ ರಸ್ತೆ, ಎಂಕೆಕೆ ರಸ್ತೆ, ಕೆಆರ್ ಪುರಂ ರಸ್ತೆಗಳಲ್ಲಿ ವಾಹನದ ದಟ್ಟಣೆ ಅಧಿಕವಾಗಿರುವುದರಿಂದ ಹಾಗೂ ಸುಗಮ ಸಂಚಾರಕ್ಕೆ ಅಡಚಣೆಯಾಗಿತ್ತಿರುವ ಹಿನ್ನೆಲೆ, ಈ ಕೆಳಕಂಡಂತೆ ವಾಹನ ನಿಲುಗಡೆ ಕುರಿತು ಹಾಗೂ ಪಾಲಿಕೆಯಿಂದ ನಿರ್ವಹಿಸುತ್ತಿರುವ ಬಹುಹಂತದ  ಪಾರ್ಕಿಂಗ್ ಕಟ್ಟಡದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಲು ಆದೇಶಿಸಿರುತ್ತಾರೆ.

ದ್ವಿಚಕ್ರ ವಾಹನ ನಿಲುಗಡೆ : ಮಹಾನಗರ ಪಾಲಿಕೆ ಕಾಂಪ್ಲೆಕ್ಸ್ ಪ್ರಾರಂಭದಿಂದ ಕುಚಲಕ್ಕಿ ಕೇರಿ ಎದುರಿನಿಂದ ಕೋಕಿಲಾ ರೇಡಿಯೋ ಅಂಗಡಿಯವರೆಗೆ ಎಡಬದಿಯಲ್ಲಿ ದ್ವಿಚಕ್ರ ಪಾರ್ಕಿಂಗ್. ಸಂಗಮ್ ಟೈಲರ್ ಶಾಪ್‌ನಿಂದ ಡಯಟ್ ಕಾಲೇಜ್ ಕ್ರಾಸ್(ಸಾವರ್ಕರ್ ನಗರ ಕ್ರಾಸ್)ವರೆಗೆ ಬಲ ಬದಿಯಲ್ಲಿ ದ್ವಿಚಕ್ರ ಪಾರ್ಕಿಂಗ್.

ನಾಲ್ಕು ಚಕ್ರದ ವಾಹನ ನಿಲುಗಡೆ ನಿಷೇಧ: ಬಿ.ಹೆಚ್.ರಸ್ತೆ : ಅಮೀರ್ ಅಹ್ಮದ್ ಸರ್ಕಲ್ ವೆಂಕಟೇಶ್ವರ ಸ್ವೀಟ್ ಹೌಸ್‌ನಿಂದ ಕರ್ನಾಟಕ ಸಂಘ ಸರ್ಕಲ್‌ವರೆಗೆ ರಸ್ತೆಯ ಎಡಬಲ ಬದಿಯಲ್ಲಿ.

ಗಾಂಧಿ ಬಜಾರ್ ಮುಖ್ಯ ರಸ್ತೆ: ಶಿವಪ್ಪನಾಯಕ ಸರ್ಕಲ್‌ನಿಂದ ಗಾಂಧಿಬಜಾರ್ 02ನೇ ಕ್ರಾಸ್‌ವರೆಗೆ ರಸ್ತೆಯ ಎರಡು ಬದಿಯಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ನಿಲುಗಡೆ ನಿಷೇಧ.

ನೆಹರು ರಸ್ತೆ: ನೆಹರು ರಸ್ತೆಯಲ್ಲಿ ಗೋಪಿ ಸರ್ಕಲ್‌ನಿಂದ ಅಮೀರ್ ಅಹ್ಮದ್ ಸರ್ಕಲ್‌ವರೆಗೆ ಶಿವಮೊಗ್ಗ ಸ್ಮಾರ್ಟ್ಸಿಟಿ ವತಿಯಿಂದ ವಾಹನಗಳ ಪಾರ್ಕಿಂಗ್ ಸಲುವಾಗಿ ಅಭಿವೃದ್ದಿಪಡಿಸಿರುವ ಕನ್ಸರ್ವೆನ್ಸಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಜಾರಿಯಾದ ನಂತರ ಈ ರಸ್ತೆಯಲ್ಲಿ ನಾಲ್ಕು ಚಕ್ರದ ವಾಹನಗಳ ಪಾರ್ಕಿಂಗ್ ನಿಷೇಧ ಮಾಡಲಾಗಿದ್ದು ಈ ಅಧಿಸೂಚನೆಯನ್ನು ನವೆಂಬರ್ 11 ರಂದು ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Shivamogga, November 12: Heavy vehicle traffic has been restricted from 7 am to 9 pm from Gopi Circle in Shivamogga city via JPN Road, Jewel Rock Hotel Road, Kuvempu Road and Jail Road to Lakshmi Talkies.

A life-sentenced prisoner in Shivamogga Central Jail has died! ಶಿವಮೊಗ್ಗ ಸೆಂಟ್ರಲ್ ಜೈಲ್ ನಲ್ಲಿದ್ದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಸಾವು! Previous post shimoga jail news | ಶಿವಮೊಗ್ಗ ಸೆಂಟ್ರಲ್ ಜೈಲ್ ನಲ್ಲಿದ್ದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಸಾವು!