ಶಿವಮೊಗ್ಗ (shivamogga), ನವೆಂಬರ್ 25: ಶಿವಮೊಗ್ಗ ನಗರದ ಗುರುಪುರದ ನಿವಾಸಿಯಾದ ಶತಾಯುಷಿ ದಾಕ್ಷಾಯಣಮ್ಮ (101) ರವರು, ನವೆಂಬರ್ 25 ರ ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ವಯೋಸಹಜ ಕಾರಣಗಳಿಂದ ವಿಧಿವಶರಾಗಿದ್ದಾರೆ.
ಮೃತರು ಇಬ್ಬರು ಪುತ್ರರು ಸೇರಿದಂತೆ ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ನವೆಂಬರ್ 26 ರಂದು ಬೆಳಿಗ್ಗೆ 11 ಗಂಟೆಗೆ, ಶಿವಮೊಗ್ಗ ತಾಲೂಕಿನ ಯಲವಟ್ಟಿ ಗ್ರಾಮದಲ್ಲಿರುವ ತೋಟದಲ್ಲಿ ದಾಕ್ಷಾಯಣಮ್ಮರವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.
ಪೂರ್ವಾಶ್ರಮದ ಸಂಬಂಧಿ : ಮೃತ ದಾಕ್ಷಾಯಣಮ್ಮರವರು, ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿಗಳ ಪೂರ್ವಾಶ್ರಮದ ಚಿಕ್ಕಮ್ಮರಾಗಿದ್ದಾರೆ.
ಸಂತಾಪ : ಶತಾಯುಷಿ ದ್ರಾಕ್ಷಾಯಣಮ್ಮರ ವಿಧಿವಶಕ್ಕೆ ಸಂಘಸಂಸ್ಥೆಗಳು, ಸಮಾಜದ ವಿವಿಧ ವರ್ಗಗಳ ಪ್ರಮುಖರು ಶೋಕ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಭಗವಂತ ಚಿರಃಶಾಂತಿ ಕರುಣಿಸಲಿ, ಕುಟುಂಬ ಸದಸ್ಯರಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
Shivamogga, November 25: Centenarian Dakshayanamma (101), a resident of Gurupura in Shivamogga city, passed away on the morning of November 25 at her home due to age-related causes.

