thirthahalli news | ತೀರ್ಥಹಳ್ಳಿ : ಗ್ಯಾಸ್ ಲಾರಿ – ಬೈಕ್ ನಡುವೆ ಡಿಕ್ಕಿ, ಇಬ್ಬರು ಕಟ್ಟಡ ಕಾರ್ಮಿಕರ ಸಾವು!

thirthahalli : Collision between gas lorry and bike, two construction workers died! ತೀರ್ಥಹಳ್ಳಿ : ಗ್ಯಾಸ್ ಲಾರಿ – ಬೈಕ್ ನಡುವೆ ಡಿಕ್ಕಿ, ಇಬ್ಬರು ಕಟ್ಟಡ ಕಾರ್ಮಿಕರ ಸಾವು!

ತೀರ್ಥಹಳ್ಳಿ (thirthahalli), ನವೆಂಬರ್ 25: ಗ್ಯಾಸ್ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ, ಬೈಕ್ ನಲ್ಲಿದ್ದ ಇಬ್ಬರು ಮೃತಪಟ್ಟ ಘಟನೆ ತೀರ್ಥಹಳ್ಳಿ ಪಟ್ಟಣದ ಬಾಳೇಬೈಲು ಸಮೀಪದ ಆರ್.ಎಂ.ಸಿ ಯಾರ್ಡ್ ಬಳಿ ತಡರಾತ್ರಿ 1.30 ರ ವೇಳೆ ನಡೆದಿದೆ.

ತೀರ್ಥಹಳ್ಳಿಯ ಇಂದಿರಾನಗರದ ನಿವಾಸಿಗಳಾದ ಸುದೀಪ್ (23) ಹಾಗೂ ಸುದೇಶ್ (34) ಮೃತಪಟ್ಟ ಯುವಕರು ಎಂದು ಗುರುತಿಸಲಾಗಿದೆ. ಮೃತರಿಬ್ಬರು ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದಾರೆ.

ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.

ಬೈಕ್ ನಲ್ಲಿ ಇಬ್ಬರು ಮನೆಗೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಈ ಕುರಿತಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thirthahalli, November 25: Two people on the bike died in a horrific accident between a gas lorry and a bike. The incident took place at 1.30 am near the RMC yard near Balebailu in Thirthahalli town.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →