shimoga news | ಶಿವಮೊಗ್ಗ : ಕಾರ್ ಡೆಕೋರ್ ಶಾಪ್ ನಲ್ಲಿ ಬೆಂಕಿ ಅವಘಡ!

Shivamogga: Fire accident at car decor shop! ಶಿವಮೊಗ್ಗ : ಕಾರ್ ಡೆಕೋರ್ ಶಾಪ್ ನಲ್ಲಿ ಬೆಂಕಿ ಅವಘಡ!

ಶಿವಮೊಗ್ಗ (shivamogga), ನವೆಂಬರ್ 27: ಶಿವಮೊಗ್ಗ ನಗರದ ಸವಾರ್ ಲೈನ್ ರಸ್ತೆಯಲ್ಲಿರುವ ಎಸ್ ಎಸ್ ಕಾರ್ ಡೆಕೋರ್ ಶಾಪ್ ನಲ್ಲಿ, ನವೆಂಬರ್ 27 ರ ಸಂಜೆ ಬೆಂಕಿ ಅವಘಡ ಸಂಭವಿಸಿದ ಘಟನೆ ನಡೆದಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದು, ಘಟನೆಯಲ್ಲಿ ಕಾರುಗಳಿಗೆ ಸಂಬಂಧಿಸಿದ ಬಿಡಿಭಾಗಗಳು ಬೆಂಕಿಗಾಹುತಿಯಾಗಿವೆ. ಹಾನಿಯಾದ ವಸ್ತುಗಳು, ಮೌಲ್ಯದ ಪ್ರಮಾಣ ಸೇರಿದಂತೆ ಮತ್ತೀತರ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಎರಡು ವಾಹನಗಳು ಸ್ಥಳಕ್ಕಾಗಮಿಸಿ, ಅಂಗಡಿಗೆ ಹೊತ್ತಿದ್ದ ಬೆಂಕಿ ನಂದಿಸುವಲ್ಲ ಸಫಲವಾಗಿವೆ.

ಅಗ್ನಿಶಾಮಕ ದಳದ ಎಫ್ಎಸ್ಓ ಮುಕ್ದಂ ಹುಸೇನ್, ಎಎಫ್ಎಸ್ಓ ವಿಲ್ಪ್ರೇಡ್, ಸಿಬ್ಬಂದಿಗಳಾದ ಸುನೀಲ್, ಸತೀಶ್, ಯರ್ರೀಸ್ವಾಮಿ, ಮನೋಜ್ ಕುಮಾರ್, ಲೋಹಿತ್, ನಿಹಾರ್ ಮೊದಲಾದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Shivamogga, November 27: A fire broke out at SS Car Decor Shop in the Garden Area of ​​Shivamogga city on the evening of November 27.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →