ಶಿವಮೊಗ್ಗ (shivamogga), ಜನವರಿ 22: ಶಿವಮೊಗ್ಗದ ಸಂತೇಕಡೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ, ಜನವರಿ 23 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
ವಿವರ : ಉಂಬ್ಳೇಬೈಲು, ಲಕ್ಕಿನಕೊಪ್ಪ, ಮತ್ತೂರು ಕುಡಿಯುವ ನೀರಿನ ಘಟಕ, ಸಂತೇಕಡೂರು, ಗಣಿದಾಳು ಮತ್ತು ವಿಮಾನ ನಿಲ್ದಾಣ ಮಾರ್ಗಗಳಿಂದ ವಿದ್ಯುತ್ ಸರಬರಾಜು ಪಡೆಯುವ ಸಂತೇಕಡೂರು,
ಶ್ರೀರಾಮನಗರ, ರಾಂಪುರ, ಕೊರಲಹಳ್ಳಿ, ಕಾಚೀನಕಟ್ಟೆ, ಜ್ಯೋತಿನಗರ, ದೊಡ್ಡಿಬೀಳು, ವಿನಾಯಕನಗರ, ಲಕ್ಕಿನಕೊಪ್ಪ, ತೋಟದಕೆರೆ, ಹುರಳಿಹಳ್ಳಿ, ಗಣಿದಾಳು, ಉಂಬ್ಳೆಬೈಲು, ಕಣಗಲಸರ, ಮರಾಠಿ ಕ್ಯಾಂಪ್, ಸಾಲಿಗೆರೆ,
ಕೈತೊಟ್ಟಲು, ಸಿದ್ದಮಾಜಿ ಹೊಸೂರು, ವಿಮಾನ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
Shivamogga: Power outage in airport surrounding areas on January 23 | Shivamogga, January 22: MESCOM has announced that due to quarterly maintenance work at the 66/11 kV power distribution center in Santhekadur village, there will be a scheduled power outage on January 23 from 10:00 AM to 6:00 PM. According to the notification, electricity supply will be disrupted in the following areas: Umbalebailu, Lakkinakoppa, Mattur Drinking Water Plant, Santhekadur, Ganidalu, and regions connected through the airport line including Shriramanagar, Rampura, Koralahalli, Kachinakatte, Jyothinagar, Doddibeelu, Vinayakanagar, Totadakere, Huralihalli, Kanagalasara, Marathi Camp, Saligere, Kaitottalu, Siddamaji Hosuru, the airport and surrounding localities.

