ಹೊಸನಗರ (hosanagara), ಮಾರ್ಚ್ 28: ಆಕಸ್ಮಿಕವಾಗಿ ಕೆರೆಗೆ ಕಾಲು ಜಾರಿ ಬಿದ್ದು ಎಸ್ಎಸ್ಎಲ್’ಸಿ ವಿದ್ಯಾರ್ಥಿಯೋರ್ವ ಮೃತಪಟ್ಟ ದಾರುಣ ಘಟನೆ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್’ಪೇಟೆ ಸಮೀಪದ ಬರುವೆ ಗ್ರಾಮದಲ್ಲಿ ಮಾರ್ಚ್ 27 ರಂದು ನಡೆದಿದೆ.
ರಿಪ್ಪನ್’ಪೇಟೆಯ ಮದೀನಾ ಕಾಲೋನಿ ನಿವಾಸಿ ಮಹಮ್ಮದ್ ತಮೀಮ್ (16) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಟ್ಯೂಷನ್ ಗೆ ತೆರಳಿದ್ದ ವಿದ್ಯಾರ್ಥಿಯು ಸ್ನೇಹಿತರೊಂದಿಗೆ ಬರುವೆ ಗ್ರಾಮ ಸಮೀಪದ ದಿಬ್ಬದ ಬಳಿ ತೆರಳಿದ್ದು, ಈ ವೇಳೆ ಕೆರೆ ಏರಿ ಮೇಲೆ ನಡೆದು ಬರುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ.
ಸ್ಥಳೀಯರು ವಿದ್ಯಾರ್ಥಿಯನ್ನು ಕೆರೆ ನೀರಿನಿಂದ ಹೊರತೆಗೆದು ರಿಪ್ಪನ್’ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ವಿದ್ಯಾರ್ಥಿ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಈ ಸಂಬಂಧ ರಿಪ್ಪನ್’ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Ripponpete: SSLC Student Dies After Slipping into Lake
Hosanagar, March 28: A tragic incident occurred on March 27 in Baruve village near Ripponpete, Hosanagar taluk, Shivamogga district, where an SSLC student accidentally slipped into a lake and died.
The deceased has been identified as Mohammad Tamim (16), a resident of Madina Colony, Ripponpete. The student, who had gone for tuition, later visited the area near Baruve village along with friends. While walking on the bund near the lake, he accidentally slipped and fell into the water.
Locals immediately rescued him from the lake and rushed him to the Ripponpete Primary Health Center. However, doctors confirmed that the student had already passed away. A case has been registered at the Ripponpete Police Station in connection with the incident.

