shimoga news | ಶಿವಮೊಗ್ಗ : ನೇರ – ನಿರ್ಭೀಡ ವ್ಯಕ್ತಿತ್ವದ ಪತ್ರಕರ್ತರಾಗಿದ್ದ ಕಾಮ್ರೇಡ್ ಎಂ ಲಿಂಗಪ್ಪ ; ಗಣ್ಯರ ಗುಣಗಾನ  

Shivamogga : Comrade M. Lingappa – A Journalist of Direct and Fearless Personality ; Tributes from Eminent Figuresಶಿವಮೊಗ್ಗ : ನೇರ – ನಿರ್ಭೀಡ ವ್ಯಕ್ತಿತ್ವದ ಪತ್ರಕರ್ತರಾಗಿದ್ದ ಕಾಮ್ರೇಡ್ ಎಂ ಲಿಂಗಪ್ಪ ; ಗಣ್ಯರ ಗುಣಗಾನ

ಶಿವಮೊಗ್ಗ (shivamogga), ಏಪ್ರಿಲ್ 09: ‘ಕಾಮ್ರೇಡ್ ಎಂ ಲಿಂಗಪ್ಪರವರು ಸಾಮಾಜಿಕ ಕಳಕಳಿ, ಬದ್ದತೆವುಳ್ಳ, ನೇರ-ನಿರ್ಭೀಡ ವ್ಯಕ್ತಿತ್ವದ ಪತ್ರಕರ್ತರಾಗಿದ್ದರು’ ಎಂದು ಅಕ್ಷರ ಎಜುಕೇಷನ್ ಟ್ರಸ್ಟ್ ಸಂಸ್ಥಾಪಕರಾದ ಡಿ ರವಿಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಶಿವಮೊಗ್ಗ ನಗರದ ಆರ್’ಟಿಓ ಕಚೇರಿ ರಸ್ತೆಯಲ್ಲಿರುವ ಶ್ರೀ ಕಲಾ ಕೌಶಲ್ಯ ಅಭಿವೃದ್ದಿ ಕೇಂದ್ರ ಆವರಣದಲ್ಲಿ ಏಪ್ರಿಲ್ 09 ರ ಸಂಜೆ ‘ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ’ ಸಂಘಟನೆವತಿಯಿಂದ ಆಯೋಜಿಸಿದ್ದ ದಿವಂಗತರಾದ ಹಿರಿಯ ಪತ್ರಕರ್ತ ‘ಕಾಮ್ರೇಡ್ ಎಂ ಲಿಂಗಪ್ಪ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಿಂದುಳಿದ ಜನಜಾಗೃತಿ ಸಮಿತಿ ಸಂಚಾಲಕರಾದ ಆರ್ ಟಿ ನಟರಾಜ್ ಅವರು ಮಾತನಾಡಿ, ‘ಕಾಮ್ರೇಡ್ ಎಂ ಲಿಂಗಪ್ಪರೊಂದಿಗೆ ತಮಗೆ ಹಲವು ದಶಕಗಳ ಒಡನಾಟವಿತ್ತು. ಯಾವುದೇ ಮರ್ಜಿ – ಮುಲಾಜಿಗೂ ಒಳಗಾಗುತ್ತಿರಲಿಲ್ಲ. ನೊಂದವರಿಗೆ ನ್ಯಾಯ ಕೊಡಿಸುತ್ತಿದ್ದರು. ಹೋರಾಟದ ದೊಡ್ಡ ಧ್ವನಿಯಾಗಿದ್ದರು’ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಮಾಜಿ ಕಾರ್ಪೋರೇಟರ್ ಐಡಿಯಲ್ ಗೋಪಿ ಅವರು ಮಾತನಾಡಿ, ‘ತಾವೊಬ್ಬ ರಾಜಕಾರಣಿಯಾಗಲು ಕಾಮ್ರೇಡ್ ಅವರು ಕಾರಣಕರ್ತರಾಗಿದ್ದಾರೆ. ದುರ್ಗಿಗುಡಿ ರಸ್ತೆಯ ತಮ್ಮ ಮನೆಯ ಬಳಿಯೇ ಅವರ ಮನೆಯಿತ್ತು.  ಬಾಲ್ಯದಿಂದಲೇ ತಮ್ಮಲ್ಲಿ ನಾಯಕತ್ವ ಗುಣ ಬೆಳೆಸಿದ್ದರು. ಅವರು ಚುನಾವಣೆಗೆ ನಿಂತಾಗ ತಾವು ಅವರೊಂದಿಗೆ ಪ್ರಚಾರಕ್ಕೆ ತೆರಳುತ್ತಿದ್ದೆ. ಅವರಂತಹ ಕೆಚ್ಚೆದೆಯ ಹೋರಾಟಗಾರರನ್ನು ತಾವು ನೋಡಿಲ್ಲ’ ಎಂದು ಅವರ ವ್ಯಕ್ತಿತ್ವದ ಗುಣಗಾನ ಮಾಡಿದರು.

ವಕೀಲರಾದ ಗೀತಾ ಮಾನೆ ಅವರು ಮಾತನಾಡಿ, ‘ಕಾಮ್ರೇಡ್ ಅವರ ಹೆಸರಿನಲ್ಲಿ ಸಮಾಜದ ವಿವಿಧ ವರ್ಗಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಿಜಕ್ಕೂ ಅಭಿನಂದನೀಯ, ಮಾದರಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಸಂಘಟನೆಯ ಅಧ್ಯಕ್ಷ ಗಾರಾ ಶ್ರೀನಿವಾಸ್ ಅವರು ಮಾತನಾಡಿದರು. ‘ಕಾಮ್ರೇಡ್ ದೈಹಿಕವಾಗಿ ದೂರವಾಗಿರಬಹುದು. ಆದರೆ ಅವರ ಹೋರಾಟದ ಜೀವನ ಅವಿಸ್ಮರಣೀಯ. ಅವರ ನೆನಪು ಸದಾ ಕಾಲವಿರಬೇಕೆಂಬ ಉದ್ದೇಶದಿಂದ ಅವರ ಹೆಸರಿನಲ್ಲಿ ಪ್ರತಿ ವರ್ಷ ಸಮಾಜದ ವಿವಿಧ ವರ್ಗಗಳ ಸಾಧಕರನ್ನು ಗುರುತಿಸಿ ಸಂಘಟನೆಯಿಂದ ಗೌರವಿಸಲಾಗುವುದು’ ಎಂದು ತಿಳಿಸಿದರು.

ಜೆಎನ್’ಎನ್’ಸಿಇ ಉಪನ್ಯಾಸಕ ಸುರೇಶ್ ಹೆಚ್ ಬಿ ಅವರು ಕಾಮ್ರೇಡ್ ಒಡನಾಟದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ದಯಾನಂದ್, ಕಾಮ್ರೇಡ್ ಅವರ ಮೊಮ್ಮಗ ಅಶೋಕ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಪರಮೇಶ್, ಪ್ರಧಾನ ಕಾರ್ಯದರ್ಶಿ ನವೀನ್ ತಲಾರಿ, ನಿರ್ದೇಶಕರಾದ ಚಿರಂಜೀವಿ ಬಾಬು, ಶೃತಿ ಶೇಟ್, ಅನಿಲ್ ಕುಮಾರ್, ಎಂ ಎನ್ ಸಿಗ್ಬತುಲ್ಲಾ, ಕರವೇ ಕಿರಣ್ ಕುಮಾರ್, ಪತ್ರಿಕಾ ವಿತರಕ ಸಂಘಟನೆ ಮುಖಂಡ ಮಾಲತೇಶ್ ಸೇರಿದಂತೆ ಮೊದಲಾದವರಿದ್ದರು. 

ಸಿನಿಮಾ ನಟ, ಪತ್ರಕರ್ತ, ಸಾಹಿತಿ, ವಕೀಲರಿಗೆ ಪ್ರಶಸ್ತಿ ಪ್ರದಾನ

*** ಸಿನಿಮಾ ನಟ ರಘುರಾಜ್ ಮಲ್ನಾಡ್, ಪತ್ರಕರ್ತ ಬಿ ರೇಣುಕೇಶ್, ಸಾಹಿತಿ ಖಲಂದರ್ ರಜ್ಜಿ ಬೆಜ್ಜವಳ್ಳಿ, ಯುವ ವಕೀಲರಾದ ರೇಖೇಶ್ ಮಾನೆ ಅವರಿಗೆ ‘ಕಾಮ್ರೇಡ್ ಎಂ ಲಿಂಗಪ್ಪ’ ಪ್ರಶಸ್ತಿ ನೀಡಿ ಆತ್ಮೀಯವಾಗಿ ಅಭಿನಂದಿಸಲಾಯಿತು. ಪ್ರಶಸ್ತಿ ಪುರಸ್ಕೃತರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಪತ್ರಕರ್ತ ಬಿ ರೇಣುಕೇಶ್ ಅವರು ಮಾತನಾಡಿ, ‘ಕಾಮ್ರೇಡ್ ಅವರು ತಮ್ಮ ಪತ್ರಿಕೋದ್ಯಮದ ಗುರುಗಳಾಗಿದ್ದಾರೆ. ಶೋಷಿತರು, ಬಡವರು, ನೊಂದವರ ಧ್ವನಿಯಾಗಿದ್ದರು. ತಾವು ನಂಬಿದ ತತ್ವ – ಸಿದ್ದಾಂತಗಳಿಗೆ ಬದ್ದರಾಗಿ ಜೀವನ ನಡೆಸಿದ ಅಪರೂಪದ ಪತ್ರಕರ್ತರಾಗಿದ್ದರು’ ಎಂದು ಅವರೊಂದಿಗಿನ ಒಡನಾಟ ಮೆಲುಕು ಹಾಕಿದರು.  

Shivamogga: Comrade M. Lingappa – A Journalist of Direct and Fearless Personality; Tributes from Eminent Figures

Shivamogga, April 09: “Comrade M. Lingappa was a journalist with social concern, commitment, and a direct, fearless personality,” said D. Ravikumar, founder of Akshara Education Trust. He was speaking at the award ceremony organized by The Global Human Rights Forum on April 09 evening at Sri Kala Kaushalya Abhivruddhi Kendra premises, RTO Office Road, Shivamogga, in honor of the late senior journalist Comrade M. Lingappa.

RT Nataraj, convener of the Backward Classes Awareness Committee, recalled his decades-long association with Lingappa: “He never bowed to any pressure or compromise. He stood for justice for the distressed and was a powerful voice of struggle.”

Former municipal corporator Ideal Gopi shared: “Comrade Lingappa was the reason I entered politics. His house was near mine on Durgigudi Road. From childhood, he nurtured leadership qualities in me. When he contested elections, I joined him in campaigning. I have never seen such a fiery fighter.”

Advocate Geeta Mane remarked: “It is truly commendable and exemplary that achievers from various walks of society are being honored in Comrade Lingappa’s name.”

Earlier, organization president Gara Srinivas said: “Comrade may be physically absent, but his life of struggle is unforgettable. To keep his memory alive, achievers from different sections of society will be honored every year in his name.”

JNNCE lecturer Suresh H.B. shared his experiences of association with Comrade Lingappa. On stage were director Dayanand, Lingappa’s grandson Ashok, vice-president Paramesh, general secretary Naveen Talari, directors Chiranjeevi Babu, Shruti Shetty, Anil Kumar, M.N. Sigbatullah, Karave Kiran Kumar, and others.

Awards to Actor, Journalist, Writer, Lawyer

  • Film actor Raghuraj Malnad
  • Journalist B. Renukesh
  • Writer Khalandar Rajji Bejjavalli
  • Young lawyer Rekhesh Mane

All were warmly felicitated with the Comrade M. Lingappa Award. Journalist B. Renukesh said: “Comrade Lingappa was my mentor in journalism. He was the voice of the oppressed, the poor, and the distressed. He lived a rare life of commitment to the principles and ideologies he believed in.”

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *