shimoga rural rain news | ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ : ಬಿರುಗಾಳಿ ಮಳೆಗೆ ನಲುಗಿದ ಮಲ್ಲಿಗೇನಹಳ್ಳಿ ಗ್ರಾಮ!

shimoga rural rain news | ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ : ಬಿರುಗಾಳಿ ಮಳೆಗೆ ನಲುಗಿದ ಮಲ್ಲಿಗೇನಹಳ್ಳಿ ಗ್ರಾಮ! Shivamogga Rural: Malligenahalli village hit by heavy rain!

ಶಿವಮೊಗ್ಗ (shivamogga), ಏಪ್ರಿಲ್ 26: ಏಪ್ರಿಲ್ 26 ರ ಭಾನುವಾರ ಸಂಜೆ ಭಾರೀ ಪ್ರಮಾಣದ ಬಿರುಗಾಳಿ ಮಳೆಗೆ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಲ್ಲಿಗೇನಹಳ್ಳಿ ಗ್ರಾಮ ಅಕ್ಷರಶಃ ತತ್ತರಿಸಿದೆ. ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ಗ್ರಾಮಸ್ಥರು ಕಂಗಲಾಗುವಂತೆ ಮಾಡಿದೆ!

ಗ್ರಾಮದ ಹಲವು ಮನೆಗಳ ಮೇಲ್ಛಾವಣಿಗಳು ಬಿರುಗಾಳಿಗೆ ಹಾರಿ ಹೋಗಿವೆ. ಕೆಲವೆಡೆ ಕಟ್ಟಡಗಳ ಗೋಡೆಗಳು ಉರುಳಿ ಬಿದ್ದಿವೆ. ತೋಟಗಳು ಸೇರಿದಂತೆ ಗ್ರಾಮದ ಎಲ್ಲೆಂದರಲ್ಲಿ ಮರಗಳು, ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಯುದ್ದ ಪೀಡಿತ ಪ್ರದೇಶದಂತೆ ಗ್ರಾಮ ಗೋಚರವಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅಡಕೆ ತೋಟಗಳಲ್ಲಿ ಲೆಕ್ಕಕ್ಕೆ ಸಿಗದಷ್ಟು ಮರಗಳು ಉರುಳಿ ಬಿದ್ದಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು, ಉರುಳಿಬಿದ್ದ ಮರಗಳಿಂದ ಬಂದ್ ಆಗಿವೆ. ಇದರಿಂದ ಜನ – ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಗ್ರಾಮದ ಇತಿಹಾಸದಲ್ಲಿಯೇ ಕಂಡುಕೇಳರಿಯದ ದುರಂತ ಸಂಭವಿಸಿದೆ. ತಕ್ಷಣವೇ ಆಡಳಿತ ಗ್ರಾಮಸ್ಥರ ನೆರವಿಗೆ ಧಾವಿಸುವ ಕಾರ್ಯವನ್ನು ಆಡಳಿತ ಮಾಡಬೇಕು ಎಂದು ಮಲ್ಲಿಗೇನಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Shivamogga Rural: Malligenahalli village hit by heavy rain!

Shivamogga, April 26: On Sunday evening, April 26, Malligenahalli village in Shivamogga Rural Assembly constituency was literally shaken by heavy rain. The damage caused is immense, leaving the villagers in a state of panic!

The roofs of many houses in the village have been blown off by the storm. In some places, the walls of buildings have collapsed. Trees and electric poles have been uprooted everywhere in the village, including the gardens. Locals said that the village is looking like a war zone.

Countless trees have fallen in the orchards. The roads connecting the village are blocked by fallen trees. This has made it difficult for people and vehicles to move around, according to the villagers.

An unprecedented tragedy has occurred in the history of the village. The villagers of Malligenahalli have demanded that the administration immediately rush to the aid of the villagers.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *