ಶಿವಮೊಗ್ಗ (shivamogga), ಏಪ್ರಿಲ್ 26: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವಿವಿಧೆಡೆ ಏಪ್ರಿಲ್ 26 ರ ಸಂಜೆ ಬಿದ್ದ ಬಿರುಗಾಳಿ ಮಳೆಯಿಂದ ಭಾರೀ ಪ್ರಮಾಣದ ಹಾನಿಯಾಗಿದೆ ಎಂದು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಶಾರದಾ ಪೂರ್ಯನಾಯ್ಕ್ ಅವರು ತಿಳಿಸಿದ್ದಾರೆ.
‘ಉದಯ ಸಾಕ್ಷಿ’ ಡಿಜಿಟಲ್ ನ್ಯೂಸ್ ನೊಂದಿಗೆ ಅವರು ಮಾತನಾಡಿದರು. ಮಲ್ಲಿಗೇನಹಳ್ಳಿ, ಮೈದೊಳಲು, ಕೈಮರ, ಲಕ್ಷ್ಮೀಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಿರುಗಾಳಿ ಮಳೆಗೆ ಅಪಾರ ಪ್ರಮಾಣದ ಮರಗಳು ಉರುಳಿ ಬಿದ್ದಿವೆ. ಹಾಗೆಯೇ ಕೆಲವೆಡೆ ರಸ್ತೆ ಸಂಚಾರ ಬಂದ್ ಆಗಿದೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
ತಕ್ಷಣವೇ ಅಗತ್ಯವಿರುವ ನೆರವಿನ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಲಾಗಿದೆ. ತೊಂದರೆಗೊಳಗಾದ ಗ್ರಾಮಸ್ಥರಿಗೆ ಎಲ್ಲ ರೀತಿಯನ ನೆರವಿನ ಹಸ್ತ ಕಲ್ಪಿಸಲಾಗುವುದು ಎಂದರು.
ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ ಎಂದು ಸ್ಥಳೀಯ ಗ್ರಾಮಸ್ಥರು ತಿಳಿಸಿದ್ದಾರೆ ಎಂದು ಇದೆ ವೇಳೆ ಶಾರದಾ ಪೂರ್ಯನಾಯ್ಕ್ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
Shivamogga Rural MLA Sharada Pooryanaik instructs to provide emergency assistance
Shivamogga, April 26: The heavy rains that lashed various parts of Shivamogga Rural constituency on the evening of April 26 have caused extensive damage, said Rural MLA Sharada Pooryanaik.
She spoke to ‘Udaya Sakshi’ Digital News. A large number of trees have fallen due to the heavy rains in many villages including Malligenahalli, Maidolalu, Kaimara, Lakshmipur. Road traffic has also been blocked in some places. There has been a disruption in power supply.
The authorities have been instructed to take immediate necessary measures. They have been advised to act on an emergency basis. They said that all kinds of help will be provided to the affected villagers.
Meanwhile, Sharada Pooryanaik was responding to a question saying that local villagers have reported that there has been extensive damage in Malligenahalli village.

