shimoga news | ಶಿವಮೊಗ್ಗ : ಮೇ 19 ರಂದು ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ

Shivamogga: Power disruption in various villages on May 19 ಶಿವಮೊಗ್ಗ : ಮೇ 19 ರಂದು ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ

ಶಿವಮೊಗ್ಗ, ಮೇ 16 : ಮೆಸ್ಕಾಂ ಶಿವಮೊಗ್ಗ ನಗರ ಉಪವಿಭಾಗ-3 ರ ವ್ಯಾಪ್ತಿಯ 110/11 ಕೆವಿ ವಿವಿ ಕಾಂಪ್ಲೆಕ್ಸ್ ವಿದ್ಯುತ್ ವಿತರಣಾ ಕೇಂದ್ರದ ಎಫ್-7 ಪಿಳ್ಳಂಗಿರಿ ಎನ್ ಜೆ ವೈ ಮತ್ತು ಎಫ್-8 ಜಾವಳ್ಳಿ ಐಪಿ ಮಾರ್ಗಗಳಲ್ಲಿ 1ನೇ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಮೇ 19 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಮಾಹಿತಿ ನೀಡಿದೆ.

ವಿವರ : ಹೊಳೆಬೆನವಳ್ಳಿ, ದೊಡ್ಡತಾಂಡ, ಹೊಸಮನೆತಾಂಡ, ಪಿಳ್ಳಂಗಿರಿ, ಜಾವಳ್ಳಿ, ತಿರುವಳ್ಳಿ, ಅಬ್ಬರಘಟ್ಟ, ತರಗನಹಳ್ಳಿ ಕ್ರಾಸ್, ಹಾರೋಬೆನವಳ್ಳಿ, ಹಾರೋಬೆನವಳ್ಳಿ ತಾಂಡ, ಗೌಡನಾಯ್ಕನಹಳ್ಳಿ, ಬಿ.ಬೀರನಹಳ್ಳಿ, ಹೊಯ್ಸನಹಳ್ಳಿ, ಯಲವಟ್ಟಿ,

ಹಸೂಡಿ, ಹಸೂಡಿ ಫಾರಂ, ವೀರಭದ್ರಕಾಲೋನಿ, ಹಕ್ಕಿಪಿಕ್ಕಿ ಕ್ಯಾಂಪ್, ಚಿಕ್ಕಮಟ್ಟಿ, ಅಬ್ಬರಘಟ್ಟ, ಬಂಗಾರಪ್ಪ ಕಾಲೋನಿ, ಜಿ.ಜಿ.ಕ್ಯಾಂಪ್, ಚಿಕ್ಕಮರಡಿ ಮತ್ತು ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ವಿದ್ಯುತ್ ಗ್ರಾಹಕರು ಮೆಸ್ಕಾಂ ನೊಂದಿಗೆ ಸಹಕರಿಸಲು ಮೆಸ್ಕಾಂ ಕೋರಿದೆ.

Shivamogga: Power disruption in various villages on May 19
Shivamogga, May 16: MESCOM has informed that 1st quarter emergency maintenance works have been carried out on F-7 Pillangiri NJY and F-8 Javalli IP lines of 110/11 KV VV Complex Power Distribution Center under the jurisdiction of Shivamogga Urban Subdivision-3.
In this context, MESCOM has informed that there will be power disruption in the following areas on May 19 from 9 am to 5 pm.
Details: There will be disruptions in power supply in Holebenavalli, Doddathanda, Hosamanethanda, Pillangiri, Javalli, Thiruvalli, Abbaraghatta, Taraganahalli Cross, Harobenavalli, Harobenavalli Thanda, Gowdanaikanahalli, B. Biranahalli, Hoysanahalli, Yelavatti, Hasudi, Hasudi Farm, Veerabhadra Colony, Hakkipikki Camp, Chikkamatti, Abbaraghatta, Bangarappa Colony, G.G. Camp, Chikkamardi and surrounding villages. MESCOM has requested electricity consumers to cooperate with MESCOM.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *