ಶಿವಮೊಗ್ಗ (shivamogga), ಜುಲೈ 28: ಸಾರ್ವಜನಿಕವಾಗಿ ಗಲಾಟೆ ಮಾಡಿಕೊಳ್ಳುತ್ತ, ಉಪಟಳ ನೀಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ‘ಅಕ್ಕ ಪಡೆ’ ಪೊಲೀಸರು ವಶಕ್ಕೆ ಪಡೆದು, ಲಘು ಪ್ರಕರಣ ದಾಖಲಿಸಿದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ನಗರದ ಎಂಆರ್’ಎಸ್ ಸರ್ಕಲ್ ನ ಆಟೋ ಸ್ಟ್ಯಾಂಡ್ ಬಳಿ ಘಟನೆ ನಡೆದಿದೆ. ಆರೋಪಿತ ವ್ಯಕ್ತಿಗಳು ಸಾರ್ವಜನಿಕವಾಗಿ ಗಲಾಟೆ ಮಾಡುತ್ತ, ನಾಗರಿಕರಿಗೆ ಉಪಟಳ ನೀಡುತ್ತಿದ್ದರು.
ಈ ಕುರಿತಂತೆ ಅಕ್ಕ ಪಡೆಗೆ ಮಾಹಿತಿ ರವಾನೆಯಾಗಿತ್ತು. ಸ್ಥಳಕ್ಕಾಗಮಿಸಿದ ಎಎಸ್ಐ ಅಮೃತಾ ಬಾಯಿ ಹಾಗೂ ಸಿಬ್ಬಂದಿ ನಿರ್ಮಲಾರವರು ಆಪಾದಿತರನ್ನು ವಶಕ್ಕೆ ಪಡೆದು, ಕೋಟೆ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.
ಲಘು ಪ್ರಕರಣ ದಾಖಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗೆ ಆಸ್ಪದವಾಗದಂತೆ ಜಾಗರೂಕವಾಗಿರುವಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
Case against two people who were making noise near the MRS Circle auto stand in Shivamogga! | Shivamogga, July 28: An incident has taken place in Shivamogga city where the ‘Akka Pade’ police have taken into custody two people who were making noise and causing trouble in public and have registered a minor case.

