ಶಿವಮೊಗ್ಗ (shivamogga), ಅಕ್ಟೋಬರ್ 05: ಶಿವಮೊಗ್ಗ ನಗರದ ಹೊರವಲಯ ಮೋಜಪ್ಪನ ಹೊಸೂರು ಗ್ರಾಮಸ್ಥರ ದಶಕಗಳ ಬೇಡಿಕೆಯಾಗಿದ್ದ, ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕೆಂದ ಆಗ್ರಹ ಕಾರ್ಯಗತ ಹಂತಕ್ಕೆ ಬಂದಿದೆ.
ಅಕ್ಟೋಬರ್ 05 ರಂದು ವಿಧಾನ ಪರಿಷತ್ ಶಾಸಕರಾದ ಬಲ್ಕಿಷ್ ಭಾನು ಅವರು ಮೋಜಪ್ಪನ ಹೊಸೂರು ಗ್ರಾಮದ ಅಂಗನವಾಡಿ ಕೇಂದ್ರದ ಬಳಿ ಘಟಕ ಸ್ಥಾಪನೆಗೆ ಗುದ್ದಲಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಮೋಜಪ್ಪನ ಹೊಸೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿಕೊಂಡು ಬಂದಿದ್ದರು. ಈ ಮೊದಲು ತಾವು ನೀಡಿದ್ದ ಭರವಸೆಯಂತೆ ಘಟಕ ಸ್ಥಾಪನೆಗೆ ಕ್ರಮಕೈಗೊಂಡಿದ್ದೆನೆ ಎಂದು ತಿಳಿಸಿದರು.
ತಮ್ಮ ಶಾಸಕರ ನಿಧಿಯಿಂದ ಘಟಕ ಸ್ಥಾಪನೆಗೆ 5 ಲಕ್ಷ ರೂ. ಮಂಜೂರು ಮಾಡಿದ್ದೆನೆ. ಬಾಕಿ 2.50 ಲಕ್ಷ ರೂ.ಗಳನ್ನು ಇತರೆ ಅನುದಾನದಡಿ ಭರಿಸಲಾಗುತ್ತಿದೆ. ಕಾಲಮಿತಿಯೊಳಗೆ ಘಟಕ ನಿರ್ಮಾಣ ಮಾಡಿ ನಾಗರಿಕರಿಗೆ ಶುದ್ದ ಕುಡಿಯುವ ನೀರು ಪೂರೈಕೆಯ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಸಮಾರಂಭದಲ್ಲಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಡಾ. ಶ್ರೀನಿವಾಸ್ ಕರಿಯಣ್ಣ, ಐಎನ್’ಟಿಯುಸಿ ಜಿಲ್ಲಾಧ್ಯಕ್ಷರಾದ ಮಕ್ಬುಲ್ ಅಹ್ಮದ್, ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ಸ್ಟೆಲ್ಲಾ ಮಾರ್ಟಿನ್, ತಾಲೂಕು ಬಗರ್ ಹುಕುಂ ಸಮಿತಿ ಸದಸ್ಯರಾದ ಗಿರೀಶ್, ಪ್ರಮುಖರಾದ ಹಸೂಡಿ ಜಗದೀಶ್,
ಮೋಜಪ್ಪನ ಹೊಸೂರು ಗ್ರಾಮದ ಮುಖಂಡರಾದ ಇಂತಿಯಾಜ್, ರಿಯಾಜ್, ಹಬೀಬುಲ್ಲಾ, ಸಿಗ್ಬತ್, ಇಮ್ತಿಯಾಜ್, ಸಲೀಂ ಖಾಸಿಂ, ಸೋಮಿನಕೊಪ್ಪದ ಪ್ರಮುಖರಾದ ಶಬ್ಬರ್ ಖಾನ್, ಶಾಮೀರ್ ಪಾಷಾ, ನಜೀರ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಶಾಸಕರಿಗೆ ಮುಖಂಡ ಮಕ್ಬುಲ್ ಅಹ್ಮದ್ ಅಭಿನಂದನೆ
*** ಮೋಜಪ್ಪನ ಹೊಸೂರು ಗ್ರಾಮದಲ್ಲಿ ಬೋರ್’ವೆಲ್ ನಿಂದ ಪೂರೈಕೆಯಾಗುವ ನೀರನ್ನು ಕುಡಿಯಲು ಬಳಸಲಾಗುತ್ತಿತ್ತು. ಆದರೆ ಇದರಲ್ಲಿ ಲವಾಣಾಂಶದ ಪ್ರಮಾಣ ಹೆಚ್ಚಿದ್ದರಿಂದ ನಾಗರಿಕರು ಕುಡಿಯುವ ನೀರಿಗಾಗಿ, ಸುತ್ತಮುತ್ತಲಿನ ಗ್ರಾಮಗಳ ಶುದ್ದ ಕುಡಿಯುವ ನೀರಿನ ಘಟಕಗಳಿಗೆ ತೆರಳಬೇಕಾಗಿತ್ತು. ಗ್ರಾಮದಲ್ಲಿ ಘಟಕ ಸ್ಥಾಪನೆಗೆ ಕ್ರಮಕೈಗೊಳ್ಳುವಂತೆ ವಿಧಾನ ಪರಿಷತ್ ಶಾಸಕರಾದ ಬಲ್ಕಿಷ್ ಭಾನು ಅವರಿಗೆ ಮನವಿ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿದ ಶಾಸಕರು ಅನುದಾನ ಬಿಡುಗಡೆ ಮಾಡಿ, ಘಟಕ ಸ್ಥಾಪನೆಗೆ ಕ್ರಮಕೈಗೊಂಡಿರುವುದು ಸ್ವಾಗತಾರ್ಹ ಸಂಗತಿಯಾಗಿದೆ ಎಂದು ಐಎನ್’ಟಿಯುಸಿ ಶಿವಮೊಗ್ಗ ಘಟಕದ ಜಿಲ್ಲಾಧ್ಯಕ್ಷ ಮಕ್ಬುಲ್ ಅಹ್ಮದ್ ಅವರು ತಿಳಿಸಿದ್ದಾರೆ.
ಶಾಲೆ ಸಮೀಪವಿರುವ ಟ್ರಾನ್ಸ್’ಫಾರ್ಮಾರ್ ಸ್ಥಳಾಂತರಕ್ಕೆ ಇಂತಿಯಾಜ್ ಮನವಿ
*** ಮೋಜಪ್ಪನ ಹೊಸೂರು ಗ್ರಾಮದ ಸರ್ಕಾರಿ ಶಾಲೆ ಸಮೀಪವೇ ವಿದ್ಯುತ್ ಟ್ರಾನ್ಸ್’ಫಾರ್ಮಾರ್ ಅಳವಡಿಸಿದ್ದು, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಬೇರೆಡೆ ಸ್ಥಳಾಂತರಿಸುವಂತೆ ಇದೆ ವೇಳೇ ಶಾಸಕಿ ಬಲ್ಕಿಷ್ ಭಾನು ಅವರಿಗೆ ಗ್ರಾಮದ ಹಿರಿಯ ಮುಖಂಡರಾದ ಇಂತಿಯಾಜ್ ಅವರು ಮನವಿ ಅರ್ಪಿಸಿದರು. ಕಾಲಮಿತಿಯೊಳಗೆ ಟ್ರಾನ್ಸ್’ಫಾರ್ಮಾರ್ ಸ್ಥಳಾಂತರಕ್ಕೆ ಕ್ರಮಕೈಗೊಳ್ಳುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
Shivamogga: Pure Drinking Water Unit – MLA Balkish Banu Responds to Decades-Old Demand of Mojappana Hosuru Villagers! | Shivamogga, September 05: The long-standing demand of the villagers of Mojappana Hosuru—located on the outskirts of Shivamogga city—for the establishment of a pure drinking water unit in their village is now being realized. On October 05, MLC Balkish Banu performed the groundbreaking ceremony for the unit near the Anganwadi center in Mojappana Hosuru village.

