
ಶಿವಮೊಗ್ಗ : ಸೋಗಾನೆ, ಬಿದರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೇ 21 ರಂದು ವಿದ್ಯುತ್ ವ್ಯತ್ಯಯ!
ಶಿವಮೊಗ್ಗ, ಮೇ.19: ಶಿವಮೊಗ್ಗದ ಮಾಚೇನಹಳ್ಳಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹೊಸದಾಗಿ 110 ಕೆವಿ ಮಾರ್ಗ ಹಾಗೂ ಪರಿವರ್ತಕ ಚಾಲನೆಗೊಳಿಸುವ ಕಾಮಗಾರಿಯನ್ನು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಮೇ 21 ರಂದು ಈ ಮಾರ್ಗದಿಂದ ವಿದ್ಯುತ್ ಸರಬರಾಜು ಪಡೆಯುವ ಈ ಕೆಳಕಂಡ ಗ್ರಾಮಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 7 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಸಂಸ್ಥೆ ತಿಳಿಸಿದೆ.
ಮಾಚೇನಹಳ್ಳಿ, ಬಿದರೆ, ನಿದಿಗೆ, ಓತಿಘಟ್ಟ, ಹಾರೇಕಟ್ಟೆ, ಸೋಗಾನೆ, ಆಚಾರಿ ಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ, ಜಯಂತಿಗ್ರಾಮ, ಕಿಯೊನಿಕ್ಸ್ ಐ ಟಿ ಪಾರ್ಕ್, ಮಲ್ನಾಡ್ ಆಸ್ಪತ್ರೆ, ಕೆ.ಎಸ್.ಆರ್.ಪಿ ಕಾಲೋನಿ, ನವುಲೆ, ಬಸವಾಪುರ, ಹಾತಿಕಟ್ಟೆ
ಹೊನ್ನವಿಲೆ, ಅಮರಾವತಿ ಕ್ಯಾಂಪ್, ಶೆಟ್ಟಿಹಳ್ಳಿ, ಹಳೇಶೆಟ್ಟಿಹಳ್ಳಿ, ಗುಡ್ರಕೊಪ್ಪ, ಮತ್ತಿಘಟ್ಟ, ಮಾಳೇನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
More Stories
shimoga | ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕೆರೆಗಳಿಗೆ ತುಂಗಾ ನದಿ ನೀರು : MLA ಶಾರದಾ ಪೂರ್ಯನಾಯ್ಕ್ ಸಂತಸ
Tunga River water for lakes in Shivamogga rural constituency : MLA sharada puryanaik happy
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕೆರೆಗಳಿಗೆ ತುಂಗಾ ನದಿ ನೀರು : ಶಾಸಕಿ ಶಾರದಾ ಪೂರ್ಯನಾಯ್ಕ್ ಸಂತಸ
ಚಿರತೆ ಹಾವಳಿಗೆ ಭಯಭೀತರಾದ ಶಿವಮೊಗ್ಗ ತಾಲೂಕು ಗೆಜ್ಜೇನಹಳ್ಳಿ ಗ್ರಾಮಸ್ಥರು! : ಗಮನಹರಿಸುವುದೆ ಅರಣ್ಯ ಇಲಾಖೆ?
ಚಿರತೆ ಹಾವಳಿಗೆ ಭಯಭೀತರಾದ ಶಿವಮೊಗ್ಗ ತಾಲೂಕು ಗೆಜ್ಜೇನಹಳ್ಳಿ ಗ್ರಾಮಸ್ಥರು! : ಗಮನಹರಿಸುವುದೆ ಅರಣ್ಯ ಇಲಾಖೆ?
ಭೀಕರ ರಸ್ತೆ ಅಪಘಾತ : ಮೂವರು ಕಾಲೇಜ್ ವಿದ್ಯಾರ್ಥಿಗಳ ದಾರುಣ ಸಾವು – ಓರ್ವನಿಗೆ ಗಂಭೀರ ಗಾಯ!
ಶಿವಮೊಗ್ಗ, ಅ. 1: ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೈಮರ – ಅರಹತೊಳಲು ಗ್ರಾಮಗಳ ನಡುವೆ ಶನಿವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ, ಬೈಕ್ ವೊಂದರಲ್ಲಿದ್ದ ಮೂವರು ಯುವಕರು ಸ್ಥಳದಲ್ಲಿಯೇ ಮೃತಪಟ್ಟು ಮತ್ತೊಂದು ಬೈಕ್ ನಲ್ಲಿದ್ದ ಯುವಕ ಗಾಯಗೊಂಡ ಘಟನೆ ನಡೆದಿದೆ.
ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ : ಇಬ್ಬರು ಸಾವು – ಹಲವರಿಗೆ ಗಾಯ!
ಶಿವಮೊಗ್ಗ, ಸೆ. 7: ಎರಡು ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ಶಿವಮೊಗ್ಗ – ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯ ಜಾವಳ್ಳಿ ಬಳಿ ಇಂದು ಸಂಭವಿಸಿದೆ.
ಮಹಾತ್ಮ ಗಾಂಧೀಜಿ ಪ್ರತಿಮೆ ಧ್ವಂಸಗೊಳಿಸಿದ ದುಷ್ಕರ್ಮಿಗಳು!
ಶಿವಮೊಗ್ಗ, ಆ. 21: ಅಪರಿಚಿತ ದುಷ್ಕರ್ಮಿಗಳು ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಧ್ವಂಸಗೊಳಿಸಿರುವ ಘಟನೆ, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಹೊಳೆಹೊನ್ನೂರು ಪಟ್ಟಣದಲ್ಲಿ ತಡರಾತ್ರಿ ನಡೆದಿದ್ದು, ಸೋಮವಾರ...
ಸಹಕಾರಿ ಕ್ಷೇತ್ರ ರಾಜಕೀಯದಿಂದ ಹೊರತಾಗಿರಬೇಕು : ಶಾಸಕಿ ಶಾರದಾ ಪೂರ್ಯಾನಾಯ್ಕ್
‘ಯಾವುದೇ ಸಹಕಾರಿ ಕ್ಷೇತ್ರ ರಾಜಕೀಯದಿಂದ ದೂರವಿರಬೇಕು’ ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ್ ಹೇಳಿದ್ದಾರೆ.
ಹೊಳೆಹೊನ್ನೂರು ಮೀಪದ ಅರಹತೊಳಲು ಗ್ರಾಮದಲ್ಲಿ ನಡೆದ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಗೋದಾಮು ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರ ಮಾತನಾಡಿದರು.