ಶಿವಮೊಗ್ಗ (Shivamogga), ಏ. 20: ಶಿವಮೊಗ್ಗದ ಬಾಪೂಜಿನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ಸಮೀಪದ ಗಂಗಮ್ಮ ದೇವಾಲಯದ ಬಳಿ ಶನಿವಾರ ಸಂಜೆ ವ್ಯಕ್ತಿಯೋರ್ವರನ್ನು ಕೊಲೆ (murder) ಮಾಡಿರುವ ಘಟನೆ ನಡೆದಿದೆ.
ಸುರೇಶ್ ಅಲಿಯಾಸ್ ಸೂರಿ (45) ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಹೋಟೆಲ್ ವೊಂದರ ಮುಂಭಾಗ ಮಾತನಾಡುತ್ತಾ ನಿಂತಿದ್ದ ಸೂರಿಯ ಮೇಲೆ ಗುಂಪೊಂದು ದಾಳಿ ನಡೆಸಿ ಕೊಲೆ ಮಾಡಿ ಪರಾರಿಯಾಗಿದೆ. ವೈಯಕ್ತಿಕ ವೈಷಮ್ಯದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಕೋಟಿ ಠಾಣೆ ಪೊಲೀಸರು (shimoga kote police station) ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಇನ್ನಷ್ಟೆ ಹೆಚ್ಚಿನ ವಿವರಗಳು ತಿಳಿದು ಬರಬೇಕಾಗಿದೆ.

