
ರಾಜ್ಯ ಹೆದ್ಧಾರಿ ಮೇಲೆ ಮಣ್ಣು : ದುಸ್ತರವಾದ ಸಂಚಾರ – ಗಮನಹರಿಸುವುದೆ ಪಿಡಬ್ಲ್ಯೂಡಿ?
ಶಿವಮೊಗ್ಗ (shivamogga), ಜು. 11: ಶಿವಮೊಗ್ಗ ಮಹಾನಗರ ಪಾಲಿಕೆ (shimoga city corporation) ವ್ಯಾಪ್ತಿ 1 ನೇ ವಾರ್ಡ್ ಸೋಮಿನಕೊಪ್ಪ – ಪ್ರೆಸ್ ಕಾಲೋನಿ (sominakoppa – press colony) ನಡುವಿನ ರಾಜ್ಯ ಹೆದ್ದಾರಿಯ (state highway) ಸೇತುವೆ ಬಳಿ, ರಸ್ತೆಯ ಮೇಲೆಯೇ ಮಣ್ಣು ಹಾಕಲಾಗಿದೆ. ಇದು ವಾಹನ ಸವಾರರ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ!
‘ಸದರಿ ರಸ್ತೆಯು ಕಿರಿದಾಗಿದ್ದು, ಭಾರೀ ಪ್ರಮಾಣದ ವಾಹನ ಸಂಚಾರ ದಟ್ಟಣೆಯಿದೆ (hevay vehicular traffic). ಆದರೆ ಲೇಔಟ್ ವೊಂದರ ಕಾಂಕ್ರಿಟ್ ರಸ್ತೆ (concrete road) ನಿರ್ಮಾಣದ ವೇಳೆ ರಸ್ತೆಯ ಅರ್ಧ ಭಾಗಕ್ಕೆ ಮಣ್ಣು ಹಾಕಿದ್ದು, ಅದನ್ನು ತೆರವುಗೊಳಿಸಿಲ್ಲ. ಪ್ರಸ್ತುತ ಮಳೆ ಬೀಳುತ್ತಿರುವುದರಿಂದ ಮಣ್ಣಿನ ಮೇಲೆ ವಾಹನ ಚಾಲನೆ ಮಾಡಿಕೊಂಡು ಹೋಗುವುದು ದುಸ್ತರವಾಗುತ್ತಿದೆ.
ಅದರಲ್ಲಿಯೂ ದ್ವಿಚಕ್ರ ವಾಹನ ಸವಾರರು (two wheeler riders) ತೀವ್ರ ತೊಂದರೆ ಎದುರಿಸುವಂತಾಗಿದೆ. ಮಣ್ಣಿನ ಮೇಲೆ ಚಕ್ರಗಳು ಸ್ಕಿಡ್ (wheels skid) ಆಗುತ್ತಿವೆ. ಸ್ವಲ್ಪ ಹೆಚ್ಚುಕಮ್ಮಿಯಾದರೂ ಅಪಘಾತಕ್ಕೀಡಾಗಬೇಕಾದ (accident) ದುಃಸ್ಥಿತಿಯಿದೆ’ ಎಂದು ಗೆಜ್ಜೇನಹಳ್ಳಿ (gejjenahalli) ಗ್ರಾಮದ ಮುಖಂಡರಾದ ಮಂಜಣ್ಣ ಎಂಬುವರು ದೂರುತ್ತಾರೆ.
‘ತಕ್ಷಣವೇ ಪಿಡಬ್ಲ್ಯೂಡಿ (public work department) ರಸ್ತೆಯ ಮೇಲೆ ಬಿದ್ದಿರುವ ಮಣ್ಣು ತೆರವುಗೊಳಿಸಿ (clear the soil) ಸುಗಮ – ವಾಹನ ಸಂಚಾರಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು. ಸದರಿ ರಸ್ತೆಯಲ್ಲಿ ಮಿತಿಮೀರಿದ ವೇಗದಲ್ಲಿ ವಾಹನಗಳು (vehicles over speeding) ಸಂಚರಿಸುತ್ತವೆ. ಈ ಹಿನ್ನೆಲೆಯಲ್ಲಿ ಸೋಮಿನಕೊಪ್ಪ (sominakoppa) ಹಾಗೂ ಗೆಜ್ಜೇನಹಳ್ಳಿ ಸರ್ಕಾರಿ ಶಾಲೆಗಳ (govt schools) ಬಳಿ ವೈಜ್ಞಾನಿಕ ರೀತಿಯಲ್ಲಿ ಹಂಪ್ಸ್ ಹಾಕಬೇಕು.
ಸೂಚನಾ ಫಲಕ, ರಿಫ್ಲೆಕ್ಟರ್ ಗಳ ಅಳವಡಿಕೆ ಮಾಡಬೇಕು. ಜೊತೆಗೆ ಸೋಮಿನಕೊಪ್ಪದಿಂದ – ಪ್ರೆಸ್ ಕಾಲೋನಿ ನಡುವಿನ ರಸ್ತೆಯನ್ನು ಅಗಲೀಕರಣಗೊಳಿಸಬೇಕು (road widening)’ ಎಂದುದು ಪ್ರೆಸ್ ಕಾಲೋನಿಯ ನಿವಾಸಿ ನಾಗರತ್ನ ಅವರು ಪಿಡಬ್ಲ್ಯೂಡಿ ಇಲಾಖೆಗೆ ಆಗ್ರಹಿಸಿದ್ದಾರೆ.