ಮಲೆನಾಡಿನಲ್ಲಿ ತಗ್ಗಿದ ಮುಂಗಾರು ಮಳೆ : ಕುಗ್ಗಿದ ಡ್ಯಾಂಗಳ ಒಳಹರಿವು!

ಮಲೆನಾಡಿನಲ್ಲಿ ತಗ್ಗಿದ ಮುಂಗಾರು ಮಳೆ : ಕುಗ್ಗಿದ ಡ್ಯಾಂಗಳ ಒಳಹರಿವು! ಶಿವಮೊಗ್ಗ, ಜು. 11: ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆಯ ತೀವ್ರತೆ ಕಡಿಮೆಯಾಗಿದೆ. ನದಿಗಳ ನೀರಿನ ಹರಿವಿನಲ್ಲಿ ಇಳಿಕೆಯಾಗಿದೆ. ಇದರಿಂದ ಪ್ರಮುಖ ಡ್ಯಾಂಗಳ ಒಳಹರಿವಿನಲ್ಲಿ ಕುಸಿತವಾಗಿದೆ. ಮತ್ತೊಂದೆಡೆ, ಗುರುವಾರ ತಾಪಮಾನದ ಪ್ರಮಾಣದಲ್ಲಿ ಏರಿಕೆಯಾಗಿದೆ.’ ಗುರುವಾರ ಬೆಳಿಗ್ಗೆಯ ಮಾಹಿತಿಯಂತೆ, ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂ ನೀರಿನ ಒಳಹರಿವು 13,128 ಕ್ಯೂಸೆಕ್ ಗೆ ಇಳಿಕೆಯಾಗಿದೆ. 3422 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಪ್ರಸ್ತುತ ಡ್ಯಾಂ ನೀರಿನ ಮಟ್ಟ 1772. 1 (ಗರಿಷ್ಠ ಮಟ್ಟ : 1819) ಅಡಿಯಿದೆ. ಭದ್ರಾ ಡ್ಯಾಂ ಒಳಹರಿವು ಕೂಡ ಇಳಿಕೆಯಾಗಿದ್ದು, 6246 ಕ್ಯೂಸೆಕ್ ಇದೆ. 158 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಪ್ರಸ್ತುತ ಡ್ಯಾಂ ನೀರಿನ ಮಟ್ಟ 136 (ಗರಿಷ್ಠ ಮಟ್ಟ : 186) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 140. 1 ಅಡಿಯಿತ್ತು. ಉಳಿದಂತೆ ತುಂಗಾ ಡ್ಯಾಂನ ಒಳಹರಿವು 8869 ಕ್ಯೂಸೆಕ್ ಗೆ ಇಳಿಕೆಯಾಗಿದೆ. ಈಗಾಗಲೇ ಡ್ಯಾಂನ ಗರಿಷ್ಠ ಮಟ್ಟವಾದ 588. 24 ಅಡಿ ತಲುಪಿರುವುದರಿಂದ, ಒಳಹರಿವಿನಷ್ಟೆ ನೀರನ್ನು ಹೊಸಪೇಟೆಯ ಟಿಬಿ ಡ್ಯಾಂಗೆ ಹರಿ ಬಿಡಲಾಗುತ್ತಿದೆ. ಮಳೆ ವಿವರ: ಗುರುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ, ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆ ವಿವರ ಈ ಮುಂದಿನಂತಿದೆ. ಶಿವಮೊಗ್ಗ 7. 40 ಮಿಲಿ ಮೀಟರ್ (ಮಿ.ಮೀ.), ಭದ್ರಾವತಿ 5. 10 ಮಿ.ಮೀ., ತೀರ್ಥಹಳ್ಳಿ 28. 90 ಮಿಮೀ, ಸಾಗರ 20. 60 ಮಿಮೀ, ಶಿಕಾರಿಪುರ 4. 60 ಮಿಮೀ, ಸೊರಬ 10. 80 ಮಿಮೀ ಹಾಗೂ ಹೊಸನಗರದಲ್ಲಿ 28.80 ಮಿಮೀ ವರ್ಷಧಾರೆಯಾಗಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿಯೂ ವರ್ಷಧಾರೆಯ ಆರ್ಭಟ ಕೊಂಚ ಕಡಿಮೆಯಾಗಿದೆ. ಮಾಣಿಯಲ್ಲಿ 61 ಮಿಮೀ, ಯಡೂರು 50 ಮಿಮೀ, ಹುಲಿಕಲ್ 41 ಮಿಮೀ, ಮಾಸ್ತಿಕಟ್ಟೆ 41 ಮಿಮೀ, ಚಕ್ರಾ 65 ಮಿಮೀ, ಸಾವೇಹಕ್ಲು 66 ಮಿಮೀ ಮಳೆಯಾಗಿದೆ.

ಶಿವಮೊಗ್ಗ (shivamogga), ಜು. 11: ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆಯ (monsoon rain) ತೀವ್ರತೆ ಕಡಿಮೆಯಾಗಿದೆ. ನದಿಗಳ (rivers) ನೀರಿನ ಹರಿವಿನಲ್ಲಿ ಇಳಿಕೆಯಾಗಿದೆ. ಇದರಿಂದ ಪ್ರಮುಖ ಡ್ಯಾಂಗಳ ಒಳಹರಿವಿನಲ್ಲಿ (dams inflow) ಕುಸಿತವಾಗಿದೆ. ಮತ್ತೊಂದೆಡೆ, ಗುರುವಾರ ತಾಪಮಾನದ (temperature) ಪ್ರಮಾಣದಲ್ಲಿ ಏರಿಕೆಯಾಗಿದೆ.’

ಗುರುವಾರ ಬೆಳಿಗ್ಗೆಯ ಮಾಹಿತಿಯಂತೆ, ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂ (linganamakki dam) ನೀರಿನ ಒಳಹರಿವು 13,128 ಕ್ಯೂಸೆಕ್ ಗೆ ಇಳಿಕೆಯಾಗಿದೆ. 3422 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ (out flow). ಪ್ರಸ್ತುತ ಡ್ಯಾಂ ನೀರಿನ ಮಟ್ಟ 1772. 1 (ಗರಿಷ್ಠ ಮಟ್ಟ : 1819) ಅಡಿಯಿದೆ.

ಭದ್ರಾ ಡ್ಯಾಂ (bhadra dam) ಒಳಹರಿವು ಕೂಡ ಇಳಿಕೆಯಾಗಿದ್ದು, 6246 ಕ್ಯೂಸೆಕ್ ಇದೆ. 158 ಕ್ಯೂಸೆಕ್ (cusec) ನೀರನ್ನು ಹೊರ ಬಿಡಲಾಗುತ್ತಿದೆ. ಪ್ರಸ್ತುತ ಡ್ಯಾಂ ನೀರಿನ ಮಟ್ಟ 136 (ಗರಿಷ್ಠ ಮಟ್ಟ : 186) ಅಡಿಯಿದೆ. ಕಳೆದ ವರ್ಷ (last year) ಇದೇ ದಿನದಂದು ಡ್ಯಾಂ ನೀರಿನ ಮಟ್ಟ 140. 1 ಅಡಿಯಿತ್ತು.

ಉಳಿದಂತೆ ತುಂಗಾ ಡ್ಯಾಂನ (tunga dam) ಒಳಹರಿವು 8869 ಕ್ಯೂಸೆಕ್ ಗೆ ಇಳಿಕೆಯಾಗಿದೆ. ಈಗಾಗಲೇ ಡ್ಯಾಂನ ಗರಿಷ್ಠ ಮಟ್ಟವಾದ 588. 24 ಅಡಿ ತಲುಪಿರುವುದರಿಂದ, ಒಳಹರಿವಿನಷ್ಟೆ ನೀರನ್ನು ಹೊಸಪೇಟೆಯ ಟಿಬಿ ಡ್ಯಾಂಗೆ (hosapete tungabhadra dam) ಹರಿ ಬಿಡಲಾಗುತ್ತಿದೆ.

ಮಳೆ ವಿವರ: ಗುರುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ, ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆ ವಿವರ ಈ ಮುಂದಿನಂತಿದೆ. ಶಿವಮೊಗ್ಗ (shimoga) 7. 40 ಮಿಲಿ ಮೀಟರ್ (ಮಿ.ಮೀ.), ಭದ್ರಾವತಿ (bhadravathi) 5. 10 ಮಿ.ಮೀ., ತೀರ್ಥಹಳ್ಳಿ (thirthalli) 28. 90 ಮಿಮೀ, ಸಾಗರ (sagara) 20. 60 ಮಿಮೀ, ಶಿಕಾರಿಪುರ (shikaripura) 4. 60 ಮಿಮೀ, ಸೊರಬ (soraba) 10. 80 ಮಿಮೀ ಹಾಗೂ ಹೊಸನಗರದಲ್ಲಿ (hosanagara) 28.80 ಮಿಮೀ ವರ್ಷಧಾರೆಯಾಗಿದೆ.

ಪಶ್ಚಿಮಘಟ್ಟ (western ghats) ವ್ಯಾಪ್ತಿಯ ಪ್ರದೇಶಗಳಲ್ಲಿಯೂ ವರ್ಷಧಾರೆಯ ಆರ್ಭಟ ಕೊಂಚ ಕಡಿಮೆಯಾಗಿದೆ. ಮಾಣಿಯಲ್ಲಿ (mani) 61 ಮಿಮೀ, ಯಡೂರು (yadur) 50 ಮಿಮೀ, ಹುಲಿಕಲ್ (hulikal) 41 ಮಿಮೀ, ಮಾಸ್ತಿಕಟ್ಟೆ (masthikatte) 41 ಮಿಮೀ, ಚಕ್ರಾ (chakra) 65 ಮಿಮೀ, ಸಾವೇಹಕ್ಲು (savehaklu) 66 ಮಿಮೀ ಮಳೆಯಾಗಿದೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *