Sudden police attack on Shimoga Central Jail! ಶಿವಮೊಗ್ಗ ಸೆಂಟ್ರಲ್ ಜೈಲ್ ಮೇಲೆ ಪೊಲೀಸರ ದಿಢೀರ್ ದಾಳಿ ಜೈಲ್

ಶಿವಮೊಗ್ಗ ಸೆಂಟ್ರಲ್ ಜೈಲ್ ಮೇಲೆ ಪೊಲೀಸರ ದಿಢೀರ್ ದಾಳಿ!

ಶಿವಮೊಗ್ಗ (shivamogga), ಜು. 21: ಶಿವಮೊಗ್ಗ ನಗರದ ಹೊರವಲಯ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದ (central jail) ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ, ತಪಾಸಣೆ ನಡೆಸಿದ ಘಟನೆ ಭಾನುವಾರ ನಡೆದಿದೆ.

ಮಹಿಳಾ ಬ್ಯಾರಕ್ ಸೇರಿದಂತೆ ಕಾರಾಗೃಹದ ಪ್ರತಿಯೊಂದು ವಿಭಾಗಗಳನ್ನು ತಪಾಸಣೆಗೊಳಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ (police department) ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಆದರೆ ದಾಳಿಯ ವೇಳೆ ಜೈಲ್ ನಲ್ಲಿ (jail) ಯಾವೆಲ್ಲ ವಸ್ತುಗಳು ಪತ್ತೆಯಾಗಿವೆ ಎಂಬುವುದರ ವಿವರ ನೀಡಿಲ್ಲ. ಇನ್ನಷ್ಟೆ ಈ ಕುರಿತಂತೆ ಹೆ್ಚ್ಚಿನ ಮಾಹಿತಿಗಳು ಲಭ್ಯವಾಗಬೇಕಾಗಿದೆ.

ಎಸ್ಪಿ (sp) ಜಿ.ಕೆ.ಮಿಥುನ್ ಕುಮಾರ್ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ (asp) ಅನಿಲ್ ಕುಮಾರ್ ಭೂಮರೆಡ್ಡಿ ನೇತೃತ್ವದಲ್ಲಿ ಡಿವೈಎಸ್ಪಿ (dysp) ಬಾಬು ಆಂಜನಪ್ಪ, ಡಿಎಆರ್ ಡಿವೈಎಸ್ಪಿ ಕೃಷ್ಣಮೂರ್ತಿ,

ಇನ್ಸ್’ಪೆಕ್ಟರ್ ಗಳಾದ (pi) ಸಿದ್ದೇಗೌಡ, ಭರತ್, ಅಶ್ವತ್ಥಗೌಡ, ಹರೀಶ್ ಕೆ ಪಾಟೀಲ್, ಚಂದ್ರಕಲಾ ಸೇರಿದಂತೆ  10 ಸಬ್ ಇನ್ಸ್’ಪೆಕ್ಟರ್ ಗಳು (psi), 50 ಜನ ಪೊಲೀಸ್ ಸಿಬ್ಬಂದಿಗಳ ತಂಡ ಕಾರಾಗೃಹ ತಪಾಸಣೆಯಲ್ಲಿ ಭಾಗಿಯಾಗಿತ್ತು ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

District In-charge Minister Madhu Bangarappa visited the flood affected areas of Shimoga district ಶಿವಮೊಗ್ಗ ಜಿಲ್ಲೆಯ ಪ್ರವಾಹ ಪೀಡಿತ ಸ್ಥಳಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ Previous post ಪ್ರವಾಹ ಪೀಡಿತ ಸ್ಥಳಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ
Ankola: The personnel who are operating at the site of the hill collapse after heavy rains! ಅಂಕೋಲಾ : ರಣ ಭೀಕರ ಮಳೆ ನಡೆವೆಯೇ ಗುಡ್ಡ ಕುಸಿತ ಸ್ಥಳದಲ್ಲಿ ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿ! Next post ಅಂಕೋಲಾ : ರಣ ಭೀಕರ ಮಳೆ ನಡುವೆಯೇ ಗುಡ್ಡ ಕುಸಿತ ಸ್ಥಳದಲ್ಲಿ ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿ..!