ಶಿವಮೊಗ್ಗ (shivamogga), ಆ. 20: ಶಿವಮೊಗ್ಗ ನಗರದ ಹೊರವಲಯ ಬಸವನಗಂಗೂರು ಗ್ರಾಮದ (basavanaganguru village) ಹಿರೇಕೆರೆಯು, ಇತ್ತೀಚೆಗೆ ಬೀಳುತ್ತಿರುವ ಭಾರೀ ಮಳೆಗೆ (heavy rainfall) ಸಂಪೂರ್ಣ ಭರ್ತಿಯಾಗಿದ್ದು, ಉಕ್ಕಿ ಹರಿಯುತ್ತಿದೆ.
ಈ ನಡುವೆ ಕೆರೆ ಏರಿಯ (lake bund) ಕೆಲವೆಡೆ ಸಣ್ಣ ಪ್ರಮಾಣದ ಬಿರುಕು (crack) ಕಾಣಿಸಿಕೊಂಡಿದೆ. ಇದೇ ರೀತಿ ಮಳೆ (rain) ಮುಂದುವರಿದರೆ ಬಿರುಕು ಹೆಚ್ಚಾಗಿ, ಏರಿಯೇ ಒಡೆದು ಹೋಗುವ (break) ಸಾಧ್ಯತೆಯಿದೆ ಎಂದು ಸ್ಥಳಿಯ ಗ್ರಾಮಸ್ಥರು (villagers) ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕೆರೆಯ ಏರಿ ಮಟ್ಟಕ್ಕೆ ನೀರು ನಿಂತಿದೆ (lake water level). ಭಾರೀ ಮಳೆಯಾಗುತ್ತಿರುವುದರಿಂದ (heavy rainfall), ಅಪಾರ ಪ್ರಮಾಣದ ನೀರು ಕೆರೆಗೆ ಹರಿದು ಬರುತ್ತಿದೆ. ಆದರೆ ಕೆರೆ ಕಾಲುವೆಗಳ (canals) ಅವ್ಯವಸ್ಥೆಯಿಂದ ಸರಾಗವಾಗಿ ಮಳೆ ನೀರು (rain water) ಹರಿದು ಹೋಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಈಗಾಗಲೇ ಹಲವು ಬಾರಿ ಕೆರೆ ಕಾಲುವೆಗಳ ಅವ್ಯವಸ್ಥೆ ಸರಿಪಡಿಸುವಂತೆ ತಾಲೂಕು ಆಡಳಿತ ಹಾಗೂ ಸಣ್ಣ ನೀರಾವರಿ ಇಲಾಖೆಗೆ (minor irrigation department) ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದಾರೆ. ಇದರಿಂದ ಇದೀಗ ಕೆರೆ ಸ್ಥಿತಿ ಅಪಾಯಕಾರಿ ಮಟ್ಟಕ್ಕೆ ತಲುಪುವಂತಾಗಿದೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ತಕ್ಷಣವೇ ತಾಲೂಕು ಆಡಳಿತs (taluk administration) ಹಾಗೂ ಸಣ್ಣ ನೀರಾವರಿ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಕೆರೆ ಏರಿ ಮೇಲೆ ಕಂಡುಬರಲಾರಂಭಿಸಿರುವ ಬಿರುಕು ಮುಚ್ಚಲು ಕ್ರಮಕೈಗೊಳ್ಳಬೇಕು. ಕೆರೆ ಕಾಲುವೆಗಳ ಮೂಲಕ ಸರಾಗವಾಗಿ ನೀರು ಹರಿದು ಹೋಗುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

