Siddaramaiah's support from the backward Dalit exploited classes Swamiji! ಸಿದ್ದರಾಮಯ್ಯಗೆ ಹಿಂದುಳಿದ ದಲಿತ ಶೋಷಿತ ವರ್ಗಗಳ ಸ್ವಾಮೀಜಿಗಳ ಬೆಂಬಲ

bengaluru | ಸಿದ್ದರಾಮಯ್ಯಗೆ ಹಿಂದುಳಿದ, ದಲಿತ, ಶೋಷಿತ ವರ್ಗಗಳ ಸ್ವಾಮೀಜಿಗಳ ಬೆಂಬಲ!

ಬೆಂಗಳೂರು (bengaluru), ಆ. 25: ಹಿಂದುಳಿದ ವರ್ಗ ಮತ್ತು ದಲಿತ ಹಾಗೂ ಶೋಷಿತ ಸಮುದಾಯಗಳ ಸ್ವಾಮೀಜಿಗಳ ಒಕ್ಕೂಟ, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (cm siddaramaiah) ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾಗಿ ತಮ್ಮ ಬೇಷರತ್ ನೈತಿಕ ಬೆಂಬಲ ಘೋಷಿಸಿದರು. 

ಕೃತಕವಾಗಿ ಸರ್ಕಾರ ಅಸ್ಥಿರಗೊಳಿಸಲು, ಕೇಂದ್ರ ಸರ್ಕಾರ ಮತ್ತು ರಾಜಭವನ ಷಡ್ಯಂತ್ರ ನಡೆಸುತ್ತಿವೆ ಎಂದು ಸ್ವಾಮೀಜಿಗಳು ದೂರಿದ್ದಾರೆ. ಈ ಷಡ್ಯಂತ್ರದ ವಿರುದ್ಧ ಒಕ್ಕೋರಲಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ನಿಂತು ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ.

ನಿಯೋಗದಲ್ಲಿದ್ದ ಸ್ವಾಮೀಜಿಗಳ ವಿವರ : ನಿರಂಜನಾನಂದಪುರಿ ಮಹಾಸ್ವಾಮೀಜಿ – ಕನಕ ಪೀಠ ಕಾಗಿನೆಲೆ, ಶಾಂತವೀರ ಮಹಾಸ್ವಾಮೀಜಿ – ಕುಂಚಿಟಿಗ ಮಾಸಂಸ್ಥಾನ ಮಠ ಹೊಸದುರ್ಗ, 

ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಗಳು – ಭೋವಿ ಗುರುಪೀಠ ಚಿತ್ರದುರ್ಗ, ಬಸವಮೂರ್ತಿ ಮಾದರ ಚನ್ನಯ್ಯ ಮಹಾಸ್ವಾಮಿಗಳು – ಮಾದರ ಚನ್ನಯ ಗುರುಪೀಠ ಚಿತ್ರದುರ್ಗ,  

ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಭಗಿರಥ ಪೀಠ ಮಧುರೆ, 

ಈಶ್ವರಾನಂದಪುರಿ ಮಹಾಸ್ವಾಮಿಗಳು – ಕನಕ ಗುರುಪೀಠ ಹೊಸದುರ್ಗ, ರೇಣುಕಾನಂದ ಸ್ವಾಮಿಗಳು – ನಾರಾಯಣ ಗುರುಪೀಠ ಶಿವಮೊಗ್ಗ, ಬಸವ ಮಾಚಿದೇವ ಮಹಾಸ್ವಾಮಿಗಳು –  ಮಡಿವಾಳ ಗುರುಪೀಠ ಚಿತ್ರದುರ್ಗ,

ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮಿಗಳು – ಹಡಪದ ಅಪ್ಪಣ್ಣ ಗುರುಪೀಠ ತಂಗಡಗಿ, ಶಾಂತಮ್ಮಯ್ಯ ಸ್ವಾಮೀಜಿಗಳು – ಸರೂರು ವಿಜಯನಗರ.

Rainfall has decreased in Malnad: Linganamakki Dam still 8 feet away from filling! ಮಲೆನಾಡಲ್ಲಿ ತಗ್ಗಿದ ಮಳೆ : ಲಿಂಗನಮಕ್ಕಿ ಡ್ಯಾಂ ಭರ್ತಿಗೆ 8 ಅಡಿ ಬಾಕಿ! Previous post shimoga | ಭಾರೀ ಮಳೆ ಸಾಧ್ಯತೆ : ಶಿವಮೊಗ್ಗ ಜಿಲ್ಲೆಗೆ ಆರೆಂಜ್ ಅಲರ್ಟ್!
Shikaripura : A young man's foot slipped and fell into a pond and he died tragically! ಶಿಕಾರಿಪುರ : ನೀರಿನ ಕೊಳಕ್ಕೆ ಕಾಲು ಜಾರಿ ಬಿದ್ದು ಯುವಕನ ದಾರುಣ ಸಾವು! Next post shiralkoppa | ನೀರಿನ ಕೊಳಕ್ಕೆ ಕಾಲು ಜಾರಿ ಬಿದ್ದು ಯುವಕನ ದಾರುಣ ಸಾವು!