shimoga | A policeman who was selling ganja in the village! ಹಳ್ಳಿಯಲ್ಲಿ ಗಾಂಜಾ ಮಾರುತ್ತಿದ್ದವ ಪೊಲೀಸ್ ಬಲೆಗೆ!

shimoga | ಶಿವಮೊಗ್ಗ – ಗಾಂಜಾ ಮಾರುತ್ತಿದ್ದವ ಪೊಲೀಸ್ ಬಲೆಗೆ!

ಶಿವಮೊಗ್ಗ (shivamogga), ಆ. 30: ಗಾಂಜಾ ಮಾರಾಟ (ganja sale) ಮಾಡುತ್ತಿದ್ದ ಆರೋಪದ ಮೇರೆಗೆ ಓರ್ವನನ್ನು ಪೊಲೀಸರು ಬಂಧಿಸಿದ ಘಟನೆ, ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡದಾನವಂದಿ ಗ್ರಾಮ (Doddadanavandi village) ಕ್ಕೆ ಹೋಗುವ ರಸ್ತೆಯಲ್ಲಿ ನಡೆದಿದೆ.

ಶಿವಮೊಗ್ಗ ನಗರದ ಸೂಳೇಬೈಲು ಬಡಾವಣೆ (sulebailu extension) ನಿವಾಸಿ ಸೈಯದ್ ಸದ್ದಾಂ (33) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿಯು 29-8-2024 ರಂದು ರಾತ್ರಿ ದೊಡ್ಡದಾನವಂದಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಗಾಂಜಾ (ganja) ಮಾರಾಟ ಮಾಡುತ್ತಿದ್ದ.

ಈ ಕುರಿತಂತೆ ಲಭಿಸಿದ ಖಚಿತ ವರ್ತಮಾನದ ಮೇರೆಗೆ, ಪೊಲೀಸರು (police) ಕಾರ್ಯಾಚರಣೆ ನಡೆಸಿದ್ದಾರೆ. 3500 ರೂ. ಮೌಲ್ಯದ 120 ಗ್ರಾಂ ತೂಕದ ಒಣ ಗಾಂಜಾ (dry ganja) ಹಾಗೂ 25 ಸಾವಿರ ರೂ. ಮೌಲ್ಯದ ಬೈಕ್ ವಶಕ್ಕೆ ಪಡೆಯಲಾಗಿದೆ.

ಎಸ್ಪಿ (sp) ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ (asp) ಗಳಾದ ಅನಿಲ್ ಕುಮಾರ್ ಭೂಮರೆಡ್ಡಿ, ಕಾರಿಯಪ್ಪ ಎ ಜಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ (dysp) ಸುರೇಶ್ ಎಂ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ (inspector) ಹರೀಶ್ ಕೆ ಪಾಟೀಲ್,

ಸಬ್ ಇನ್ಸ್’ಪೆಕ್ಟರ್ (sub inspector) ತೋಳಚಾನಾಯ್ಕ್ ಮತ್ತವರ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆ (kumsi police station) ಯಲ್ಲಿ ಪ್ರಕರಣ ದಾಖಲಾಗಿದೆ.

bengaluru | Bengaluru: Murder of a young woman from Bhadravati - husband arrested! ಬೆಂಗಳೂರು : ಭದ್ರಾವತಿ ಮೂಲದ ಯುವತಿ ಕೊಲೆ – ಪತಿಯ ಬಂಧನ! Previous post bengaluru | ಬೆಂಗಳೂರು : ಭದ್ರಾವತಿ ಮೂಲದ ಯುವತಿ ಕೊಲೆ – ಪತಿಯ ಬಂಧನ!
BJP's Operation Kamala : Congress MLAs will not fall prey to the desire for money - CM Siddaramaiah ‘ಬಿಜೆಪಿ ಆಪರೇಷನ್ ಕಮಲ : ಕಾಂಗ್ರೆಸ್ ಶಾಸಕರು ದುಡ್ಡಿನ ಆಸೆಗೆ ಬಲಿಯಾಗಲ್ಲ’ - ಸಿಎಂ ಸಿದ್ದರಾಮಯ್ಯ Next post hubballi | ‘ಬಿಜೆಪಿ ಆಪರೇಷನ್ ಕಮಲ : ಕಾಂಗ್ರೆಸ್ ಶಾಸಕರು ದುಡ್ಡಿನ ಆಸೆಗೆ ಬಲಿಯಾಗಲ್ಲ’ – ಸಿಎಂ ಸಿದ್ದರಾಮಯ್ಯ