bengaluru | Bengaluru: Murder of a young woman from Bhadravati - husband arrested! ಬೆಂಗಳೂರು : ಭದ್ರಾವತಿ ಮೂಲದ ಯುವತಿ ಕೊಲೆ – ಪತಿಯ ಬಂಧನ!

bengaluru | ಬೆಂಗಳೂರು : ಭದ್ರಾವತಿ ಮೂಲದ ಯುವತಿ ಕೊಲೆ – ಪತಿಯ ಬಂಧನ!

ಬೆಂಗಳೂರು (bengaluru), ಆ. 29: ಪ್ರೀತಿಸಿ ವಿವಾಹವಾಗಿದ್ದ ಭದ್ರಾವತಿ (bhadravati) ಮೂಲದ ಯುವತಿಯನ್ನು, ಪತಿಯೇ ಕೊಲೆ (murder) ಮಾಡಿರುವ ಘಟನೆ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ವಿಶ್ವೇಶ್ವರ ಲೇಔಟ್ ನಲ್ಲಿ ನಡೆದಿದೆ.

ನವ್ಯಾ (28) ಕೊಲೆಗೀಡಾದ ಯುವತಿ ಎಂದು ಗುರುತಿಸಲಾಗಿದೆ. ಇವರು ಸಿನಿಮಾ ರಂಗದಲ್ಲಿ ಕೊರಿಯೋಗ್ರಾಫರ್s (cinema choreographer) ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಕ್ಯಾಬ್ ಚಾಲಕ, ಚಿಕ್ಕಬಳ್ಳಾಪುರ ಮೂಲದ ಪತಿ ಕಿರಣ್ (31) ಕೊಲೆ ಆರೋಪಿಯಾಗಿದ್ದು, ಪೊಲೀಸರು ಬಂಧಿಸಿದ್ದಾರೆ.

ಪರಸ್ಪರ ಪ್ರೀಸುತ್ತಿದ್ದ ನವ್ಯಾ ಹಾಗೂ ಕಿರಣ್, ಕಳೆದ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಭದ್ರಾವತಿ ನಿವಾಸಿಯಾದ ನವ್ಯಾ ಮದುವೆಯ ನಂತರ, ಬೆಂಗಳೂರಿನಲ್ಲಿ ಪತಿಯೊಂದಿಗೆ ನೆಲೆಸಿದ್ದರು.

ಇತ್ತೀಚೆಗೆ ನವ್ಯಾಳ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಕಿರಣ್ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಆ. 27 ರ ರಾತ್ರಿ ಮನೆಯಲ್ಲಿಯೇ ನವ್ಯಾಳಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ್ದಾನೆ. ಆ. 28 ರಂದು ಪ್ರಕರಣ ಬೆಳಕಿಗೆ ಎಂದು ಹೇಳಲಾಗಿದೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆ (kengeri police station) ಯಲ್ಲಿ ಪ್ರಕರಣ ದಾಖಲಾಗಿದೆ.

shimoga | selling ganja in ayanur : two youths arrested! ಶಿವಮೊಗ್ಗ- ಆಯನೂರಿನಲ್ಲಿ ಗಾಂಜಾ ಮಾರಾಟ : ಇಬ್ಬರು ಯುವಕರ ಬಂಧನ! Previous post shimoga | ಶಿವಮೊಗ್ಗ- ಆಯನೂರಿನಲ್ಲಿ ಗಾಂಜಾ ಮಾರಾಟ : ಇಬ್ಬರು ಯುವಕರ ಬಂಧನ!
shimoga | A policeman who was selling ganja in the village! ಹಳ್ಳಿಯಲ್ಲಿ ಗಾಂಜಾ ಮಾರುತ್ತಿದ್ದವ ಪೊಲೀಸ್ ಬಲೆಗೆ! Next post shimoga | ಶಿವಮೊಗ್ಗ – ಗಾಂಜಾ ಮಾರುತ್ತಿದ್ದವ ಪೊಲೀಸ್ ಬಲೆಗೆ!