
shimoga | ಶಿವಮೊಗ್ಗ – ಮುಂದುವರೆದ ಗಾಂಜಾ ಬೇಟೆ : ಇಬ್ಬರು ಯುವಕರು ಅರೆಸ್ಟ್!
ಶಿವಮೊಗ್ಗ (shivamogga), ಆ. 30: ಶಿವಮೊಗ್ಗ ತಾಲೂಕಿನಲ್ಲಿ ಗಾಂಜಾ (ganja) ಬೇಟೆ ಮುಂದುವರಿದಿದೆ. ಕುಂಸಿ ಠಾಣೆ (kumsi police station) ಪೊಲೀಸರು ಪ್ರತ್ಯೇಕ ಘಟನೆಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಮೂವರನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ, ಗ್ರಾಮಾಂತರ ಠಾಣೆ (shimoga rural police station) ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಶಿವಮೊಗ್ಗ ನಗರದ ಹೊರವಲಯ ಕೋಟೆಗಂಗೂರು (kotegangur) ಗ್ರಾಮದ ಲೇಔಟ್ ವೊಂದರಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರಾಟ (ganja sale) ಮಾಡುತ್ತಿದ್ದ ಆರೋಪದ ಮೇರೆಗೆ, ಆ. 29 ರಂದು ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಸಾಗರ ತಾಲೂಕು (sagara taluk) ಆನಂದಪುರದ ಯಾಸೀನ್ ಬೇಗ್ (23) ಹಾಗೂ ಮುಬಾರಕ್ ಬೇಗ್ (28) ಬಂಧಿತ ಆರೋಪಿಗಳೆಂದು (arrested accused) ಗುರುತಿಸಲಾಗಿದೆ. ಬಂಧಿತರಿಂದ 8000 ರೂ. ಮೌಲ್ಯದ 582 ಗ್ರಾಂ ತೂಕದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಖಚಿತ ವರ್ತಮಾನದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಎಸ್ಪಿ (sp) ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ (asp) ಗಳಾದ ಅನಿಲ್ ಕುಮಾರ್ ಭೂಮರೆಡ್ಡಿ, ಕಾರಿಯಪ್ಪ ಎ ಜಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ (dysp) ಸುರೇಶ್ ಎಂ ಮೇಲ್ವಿಚಾರಣೆಯಲ್ಲಿ
ಇನ್ಸ್’ಪೆಕ್ಟರ್ (inspector) ಸತ್ಯನಾರಾಯಣ, ಸಬ್ ಇನ್ಸ್’ಪೆಕ್ಟರ್ (sub inspector) ಸ್ವಪ್ನಾ ಮತ್ತವರ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಆರೋಪಿಗಳ ವಿರುದ್ದ ಎನ್.ಡಿ.ಪಿ.ಎಸ್. ಕಾಯ್ದೆ (ndps act) ಯಡಿ ಪ್ರಕರಣ ದಾಖಲಾಗಿದೆ.