Shimoga - Hookah bar raided by a team of officers! ಶಿವಮೊಗ್ಗ – ಹುಕ್ಕಾ ಬಾರ್ ಮೇಲೆ ಅಧಿಕಾರಿಗಳ ತಂಡದ ದಾಳಿ!

shimoga | ಶಿವಮೊಗ್ಗ – ಹುಕ್ಕಾ ಬಾರ್ ಮೇಲೆ ಅಧಿಕಾರಿಗಳ ತಂಡದ ದಾಳಿ!

ಶಿವಮೊಗ್ಗ (shivamogga), ಸೆ.1: ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಳಗೌಡ ಬಡಾವಣೆ (gopalagowda extension) ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಹುಕ್ಕಾ ಬಾರ್ (hookah bar) ವೊಂದರ ಮೇಲೆ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿದ ಘಟನೆ ನಡೆದಿದೆ.

ಕರ್ನಾಟಕ ಸರ್ಕಾರದ ಆದೇಶ ಹಾಗೂ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಸದರಿ ಹುಕ್ಕಾ ಬಾರ್ ಮೇಲೆ ಪೊಲೀಸ್ (police) ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ  ದಾಳಿ ನಡೆಸಿ ತೆರವುಗೊಳಿಸಿದೆ.

ದಾಳಿ ವೇಳೆ ತುಂಗಾನಗರ ಪೊಲೀಸ್ ಠಾಣೆ (tunganagar police station) ಸಬ್ ಇನ್ಸ್’ಪೆಕ್ಟರ್ ರಘುವೀರ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಹೇಮಂತ್ ರಾಜ್ ಅರಸ್, ಮಹಾನಗರ ಪಾಲಿಕೆ (corporation), ಆರೋಗ್ಯ ಇಲಾಖೆ (health dept) ಅಧಿಕಾರಿ – ಸಿಬ್ಬಂದಿಗಳು ಉಪಸ್ಥಿತರಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Meeting at Bangalore KPCC office - CM, DCM meeting ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಸಭೆ - ಸಿಎಂ, ಡಿಸಿಎಂ ಸಭೆ Previous post bengaluru | ಬೆಂಗಳೂರು KPCC ಕಚೇರಿಯಲ್ಲಿ ಸಭೆ – ಸಿಎಂ, ಡಿಸಿಎಂ ಭಾಗಿ
shimoga | mescom lineman repaired the power line easily in the overflowing canal! ತುಂಬಿ ಹರಿಯುತ್ತಿದ್ದ ನಾಲೆಯಲ್ಲಿ ಈಜಿ ವಿದ್ಯುತ್ ಲೈನ್ ದುರಸ್ತಿಗೊಳಿಸಿದ ಮೆಸ್ಕಾಂ ಲೈನ್’ಮ್ಯಾನ್! ವರದಿ : ಬಿ. ರೇಣುಕೇಶ್ reporter : b renukesha Next post shimoga | ತುಂಬಿ ಹರಿಯುತ್ತಿದ್ದ ನಾಲೆಯಲ್ಲಿ ಈಜಿ ವಿದ್ಯುತ್ ಲೈನ್ ದುರಸ್ತಿಗೊಳಿಸಿದ ಮೆಸ್ಕಾಂ ಲೈನ್’ಮ್ಯಾನ್!