Meeting at Bangalore KPCC office - CM, DCM meeting ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಸಭೆ - ಸಿಎಂ, ಡಿಸಿಎಂ ಸಭೆ

bengaluru | ಬೆಂಗಳೂರು KPCC ಕಚೇರಿಯಲ್ಲಿ ಸಭೆ – ಸಿಎಂ, ಡಿಸಿಎಂ ಭಾಗಿ

ಬೆಂಗಳೂರು (bengaluru), ಆ. 31: ಇಡೀ ವಿಶ್ವಕ್ಕೆ ಗಾಂಧಿಯ (gandhi) ಪ್ರಸ್ತುತತೆ ಹೆಚ್ಚಿತ್ತಿದೆ. ಗಾಂಧಿ ತತ್ವ-ಗಾಂಧಿ ವಿಚಾರಧಾರೆ ವಿಚಾರದಲ್ಲಿ ನಾವು ರಾಜಿ ಆಗುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯ (chief minister siddaramaiah) ನುಡಿದರು. 

ಬೆಳಗಾವಿಯಲ್ಲಿ ಮಹಾತ್ಮಗಾಂಧಿ (mahatma gandhi) ಅವರ ಅಧ್ಯಕ್ಷತೆಯಲ್ಲಿ ನಡೆದ ಎ.ಐ.ಸಿ.ಸಿ (aicc) ಅಧಿವೇಶನದ ಶತಮಾನೋತ್ಸವ (1924) ಆಚರಣೆ ಸಂಬಂಧ KPCC ಕಚೇರಿಯಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು.

ಈ ತಲೆಮಾರಿನ ಯುವ ಸಮೂಹಕ್ಕೆ ಮಹಾತ್ಮ ಗಾಂಧಿಯವರ ವಿಚಾರಗಳನ್ನು ಹೆಚ್ಚೆಚ್ಚು ತಲುಪಿಸಬೇಕು. ಪ್ರತೀ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೂ ಗಾಂಧಿಯ ವಿಚಾರಗಳು ಹೆಚ್ಚೆಚ್ಚು ಬೇರು ಬಿಡಬೇಕು. ಇದಕ್ಕೆ ತಕ್ಕಂತೆ ಇಡೀ ವರ್ಷ ಕಾರ್ಯಕ್ರಮಗಳನ್ನು ರೂಪಿಸುವುದು ಒಳ್ಳೆಯದು ಎಂದು ಸಲಹೆ ನೀಡಿದರು. 

ಕೆಪಿಸಿಸಿ ಅಧ್ಯಕ್ಷರಾದ (kpcc president) ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ವೀರಪ್ಪಮೋಯ್ಲಿ, ಸಚಿವರಾದ ಎಚ್.ಕೆ.ಪಾಟೀಲ್, ಕೆ.ಎಚ್.ಮುನಿಯಪ್ಪ, ಬಿ.ಎಲ್.ಶಂಕರ್ ಸೇರಿ ಹಲವು ಪ್ರಮುಖರು ಮತ್ತು ಶತಮಾನೋತ್ಸವ ಆಚರಣೆ ಸಮಿತಿಯ ಮುಖಂಡರುಗಳು ಉಪಸ್ಥಿತರಿದ್ದರು.

shimoga | An anonymous person died at Shimoga KSRTC bus station! ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಅನಾಮಧೇಯ ವ್ಯಕ್ತಿ ಸಾವು! Previous post shimoga | ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಅನಾಮಧೇಯ ವ್ಯಕ್ತಿ ಸಾವು!
Shimoga - Hookah bar raided by a team of officers! ಶಿವಮೊಗ್ಗ – ಹುಕ್ಕಾ ಬಾರ್ ಮೇಲೆ ಅಧಿಕಾರಿಗಳ ತಂಡದ ದಾಳಿ! Next post shimoga | ಶಿವಮೊಗ್ಗ – ಹುಕ್ಕಾ ಬಾರ್ ಮೇಲೆ ಅಧಿಕಾರಿಗಳ ತಂಡದ ದಾಳಿ!