Tarikere - The vehicle that was going to bring Ganapati overturned : Two youths died! ತರೀಕೆರೆ - ಗಣಪತಿ ತರಲು ಹೋಗುತ್ತಿದ್ದ ವಾಹನ ಪಲ್ಟಿ : ಇಬ್ಬರು ಯುವಕರು ಸಾವು!

tarikere accident | ತರೀಕೆರೆ – ಗಣಪತಿ ತರಲು ಹೋಗುತ್ತಿದ್ದ ವಾಹನ ಪಲ್ಟಿ : ಇಬ್ಬರು ಯುವಕರು ಸಾವು!

ತರೀಕೆರೆ (ಚಿಕ್ಕಮಗಳೂರು ಜಿಲ್ಲೆ), ಸೆ. 7: ಗಣೇಶ ಚತುರ್ಥಿ ಹಬ್ಬ (ganesh chaturthi festival) ದ ಅಂಗವಾಗಿ ಗಣಪತಿಮೂರ್ತಿ ತರಲು ಹೋಗುತ್ತಿದ್ದ ಟಾಟಾ ಏಸ್ ವಾಹನ ಪಲ್ಟಿಯಾಗಿ ಬಿದ್ದು, ಇಬ್ಬರು ಯುವಕರು ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಭೈರಾಪುರ ಗೇಟ್ ಬಳಿ ಸೆ. 7 ರ ಶನಿವಾರ ಬೆಳಿಗ್ಗೆ ನಡೆದಿದೆ.

ತರೀಕೆರೆ ಸಮೀಪದ ಲಿಂಗದಹಳ್ಳಿ (tarikere lingadahalli village) ನಿವಾಸಿಗಳಾದ ಶ್ರೀಧರ್ (20) ಹಾಗೂ ಧನುಷ್ (20) ಮೃತಪಟ್ಟ ಯುವಕರೆಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರು ಯುವಕರನ್ನು ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ (govt meggan hospital) ಗೆ ಹಾಗೂ ಮೂವರನ್ನು ತರೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಿಂಗದಹಳ್ಳಿಯ  9 ಜನ ಯುವಕರು ಗಣಪತಿಮೂರ್ತಿ ತರಲು 15 ಕಿ.ಮೀ. ದೂರದ ತರೀಕೆರೆ ಪಟ್ಟಣ (tarikere town) ಕ್ಕೆ ಟಾಟಾ ಏಸ್ ಲಗೇಜ್ ವಾಹನ (tata ace luggage auto) ದಲ್ಲಿ ತೆರಳುತ್ತಿದ್ದರು. ‘

ಭೈರಾಪುರ ಗೇಟ್ ಕ್ರಾಸ್ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡ ವಾಹನ ಪಲ್ಟಿಯಾಗಿ (accident) ಬಿದ್ದಿದೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಲಿಂಗದಹಳ್ಳಿ ಠಾಣೆ ಪೊಲೀಸ (lingadahalli police station) ರು ಭೇಟಿಯಿತ್ತು ಪರಿಶೀಲಿಸಿದ್ದಾರೆ.

shimoga | Application invitation for establishment of Grama One Center in various places of Shimoga district shimoga | ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ Previous post shimoga | ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ
Telangana | Reel's whim: Video of snake bite in the mouth - young man dies! ರೀಲ್ಸ್ ಹುಚ್ಚಾಟ : ಬಾಯಲ್ಲಿ ಹಾವು ಕಚ್ಚಿಕೊಂಡು ವೀಡಿಯೋ – ಯುವಕ ಸಾವು! Next post telangana | ರೀಲ್ಸ್ ಹುಚ್ಚಾಟ : ಬಾಯಲ್ಲಿ ಹಾವು ಕಚ್ಚಿಕೊಂಡು ವೀಡಿಯೋ – ಯುವಕ ಸಾವು!