
vijayanagara | ವಿಜಯನಗರ – ತುಂಗಾಭದ್ರ ನದಿಯಲ್ಲಿ ಕೊಲೆಗೀಡಾದ ಯುವಕನ ಶವ ಪತ್ತೆ
ಬಲಗೈ ಮೇಲಿದೆ ಮಾಮ್ – ಡ್ಯಾಡ್, ಎದೆ ಮೇಲಿದೆ ಶಿಲ್ಪ ಹೆಸರಿನ ಟ್ಯಾಟೂ!
ವಿಜಯನಗರ (vijayanagara), ಸೆ. 10 : ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಳೇ ಅಂಕ್ಲಿ ಗ್ರಾಮದ ಬಳಿಯ ತುಂಗಾಭದ್ರ ನದಿ (tungabhadra river) ಯ ದಡದಲ್ಲಿ, ಕೈ ಕಾಲಿಗೆ ಹಗ್ಗ ಕಟ್ಟಿದ ಹಾಗೂ ಕೊರಳಿಗೆ ಕರ್ಚಿಫ್ ಕಟ್ಟಿ ಕೊಲೆ ಮಾಡಿದ ಸ್ಥಿತಿಯಲ್ಲಿ ಪುರುಷನ ಶವ (male dead body) ಪತ್ತೆಯಾಗಿದೆ.
ಮೃತ ವ್ಯಕ್ತಿಗೆ ಸುಮಾರು 40 ರಿಂದ 42 ವರ್ಷ ವಯಸ್ಸಾಗಿದ್ದು 5.2 ಅಡಿ ಎತ್ತರವಿದ್ದಾರೆ. ಬಲಗೈ ಮೇಲೆ ಮಾಮ್ – ಡ್ಯಾಡ್, ಎದೆಯ ಮೇಲೆ ಶಿಲ್ಪ, ಬಲ ಕುತ್ತಿಗೆ ಹತ್ತಿರ ತ್ರಿಶೂಲ ಗುರುತು ಮತ್ತು ಎಡಗೈ ರಟ್ಟೆಯ ಕೆಳಗೆ ಕೈ ಸುತ್ತಲು ವಿ ಆಕಾರದ ಟ್ಯಾಟೂ (tatoo) ಗುರುತುಗಳು ಇರುತ್ತದೆ.
ಬಲ ಕಿವಿಯಲ್ಲಿ ಒಂದು ಸಿಲ್ವರ್ ಬಣ್ಣದ ರಿಂಗ್ ಇರುತ್ತದೆ. ಹಸಿರು ಬಣ್ಣದ ಟೀ ಶರ್ಟ್, ಕಪ್ಪು ಬಣ್ಣದ ಕೆಂಪು ಗೆರೆಯುಳ್ಳ ಬರ್ಮೋಡ ಹಾಗೂ ಬಲ ಕೈ ಮತ್ತು ಬಲ ಕಾಲಿನಲ್ಲಿ ಕರಿ ಬಣ್ಣದ ಉಣ್ಣೆ ದಾರ ಇರುತ್ತದೆ.
ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ಪೂಲೀಸ್ ಉಪ ನಿರೀಕ್ಷಕರು ಹಡಗಲಿ ಪೊಲೀಸ್ ಠಾಣೆ 9480805780, ಪೊಲೀಸ್ ವೃತ್ತ ನಿರಿಕ್ಷಕರು ಹಡಗಲಿ ವೃತ್ತ 9480805737, ಪೊಲೀಸ್ ಉಪ ಅಧೀಕ್ಷಕರು ಹರಪ್ಪನಹಳ್ಳಿ 9480805722,
ಹೆಚ್ಚುವರಿ ಪೊಲೀಸ್ ಅಧೀಕ್ಷಕರು ವಿಜಯನಗರ ಜಿಲ್ಲೆ 9480805702, ಪೊಲೀಸ್ ಅಧೀಕ್ಷಕರು ವಿಜಯನಗರ ಜಿಲ್ಲೆ 9480805701 ನ್ನು ಸಂಪರ್ಕಿಸಬಹುದೆಂದು ಸಿ.ಪಿ.ಐ ಹಡಗಲಿ ವೃತ್ತ, ಹಡಗಲಿ ತನಿಖಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.