bhadravati | Sagara | route march of paramilitary force and police in different parts of bhadravati and sagara ಭದ್ರಾವತಿ - ಸಾಗರದ ವಿವಿಧೆಡೆ ಅರೆಸೇನಾ ಪಡೆ ಹಾಗೂ ಪೊಲೀಸರ ಪಥ ಸಂಚಲನ

bhadravati | sagara | ಭದ್ರಾವತಿ – ಸಾಗರದ ವಿವಿಧೆಡೆ ಅರೆಸೇನಾ ಪಡೆ ಹಾಗೂ ಪೊಲೀಸರ ಪಥ ಸಂಚಲನ

ಶಿವಮೊಗ್ಗ (shivamogga), ಸೆ. 14: ಪ್ರಮುಖ ಗಣೇಶಮೂರ್ತಿಗಳ ವಿಸರ್ಜನೆ (ganesha idol procession) ಹಾಗೂ ಈದ್ ಮಿಲಾದ್ ಮೆರವಣಿಗೆ (eid milad un nabi procession) ಹಿನ್ನೆಲೆಯಲ್ಲಿ, ಪೊಲೀಸ್ ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ ಶಿವಮೊಗ್ಗ ಜಿಲ್ಲೆಯ (shimoga district) ವಿವಿಧೆಡೆ ಬಿಗಿ ಪೊಲೀಸ್ ಪಹರೆಯ ವ್ಯವಸ್ಥೆ ಮಾಡಿದೆ.

ಈ ನಡುವೆ ಕಳೆದ ಕೆಲ ದಿನಗಳಿಂದ ಕ್ಷಿಪ್ರ ಕಾರ್ಯಾಚರಣೆ ಪಡೆ (rapid aciton force) ಹಾಗೂ ಪೊಲೀಸರು (police), ಜಿಲ್ಲೆಯ ಪ್ರಮುಖ  ಸ್ಥಳಗಳಲ್ಲಿ ಪಥ ಸಂಚಲನ (route march) ನಡೆಸುತ್ತಿದ್ದಾರೆ. ಈ ಮೂಲಕ ನಾಗರೀಕರಲ್ಲಿ ವಿಶ್ವಾಸ ಮೂಡಿಸುವ ಹಾಗೂ ಕಿಡಿಗೇಡಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸುವ ಕಾರ್ಯ ಮಾಡುತ್ತಿದ್ದಾರೆ.

ಸೆ. 14 ರ ಶನಿವಾರ ಭದ್ರಾವತಿ ಹಾಗೂ ಸಾಗರ ಪಟ್ಟಣಗಳಲ್ಲಿ ಪಥ ಸಂಚಲನ ನಡೆಸಿದರು. ಭದ್ರಾವತಿ (bhadravati) ಯಲ್ಲಿ ಕನಕ ಮಂಟಪದಿಂದ ಆರಂಭವಾದ ರೂಟ್ ಮಾರ್ಚ್ ಹಳದಮ್ಮ ಬೀದಿ, ಖಾಜಿ ಮೊಹಲ್ಲಾ, ಬಸವೇಶ್ವರ ವೃತ್ತ,

ಪರಿಮಳ ಹೋಟೆಲ್ ಕ್ರಾಸ್, ರಂಗಪ್ಪ ಸರ್ಕಲ್, ಹೊಳೆಹೊನ್ನೂರು ಸರ್ಕಲ್, ಸಂತೆ ಮೈದಾನ ಹೊಸಮನೆ, ಹೊಸಮನೆ ಪೊಲೀಸ್ ಠಾಣೆ ಮುಂಭಾಗ, ಗಾಂಧಿ ವೃತ್ತ, ಮಾಧವಚಾರ್ ವೃತ್ತದ ಮೂಲಕ ಸಾಗಿ ಕನಕ ಮಂಟಪದ ಬಳಿ ಅಂತ್ಯಗೊಂಡಿತು.

ಸಾಗರ ನಗರ (sagara city) ದಲ್ಲಿ ಎಸ್.ಎನ್. ವೃತ್ತದಿಂದ ಆರಂಭವಾದ ಪಥ ಸಂಚಲನವು ಆವಿನಳ್ಳಿ ರಸ್ತೆ, ಎಸ್. ಎನ್. ನಗರ, ಜನ್ನತ್ ನಗರ, ಉಪ್ಪಾರ ಕೇರಿ ಸರ್ಕಲ್, ಆಜಾದ್ ಮಸೀದಿ ರಸ್ತೆ, ಅಶೋಕ ರಸ್ತೆ, ಸಾಗರ ಸರ್ಕಲ್ ಮೂಲಕ ಸಾಗಿ ಜೆಸಿ ಸರ್ಕಲ್ ಬಳಿ ಅಂತ್ಯಗೊಂಡಿದೆ.

mla munirathna | benagluru | Audio viral: MLA Muniratna in police custody! ಆಡಿಯೋ ವೈರಲ್ : ಶಾಸಕ ಮುನಿರತ್ನ ಪೊಲೀಸ್ ವಶಕ್ಕೆ! Previous post mla munirathna | benagluru | ಆಡಿಯೋ ವೈರಲ್ : ಶಾಸಕ ಮುನಿರತ್ನ ಪೊಲೀಸ್ ವಶಕ್ಕೆ!
bhadravati | Bhadravati: Thousands of policemen have been deployed to guard the Ganapati procession! ಭದ್ರಾವತಿ : ಗಣಪತಿ ಮೆರವಣಿಗೆ ಬಂದೋಬಸ್ತ್ ಕಾರ್ಯಕ್ಕೆ ಸಾವಿರಾರು ಪೊಲೀಸರ ನಿಯೋಜನೆ! Next post bhadravati | ಭದ್ರಾವತಿ : ಗಣಪತಿ ಮೆರವಣಿಗೆ ಬಂದೋಬಸ್ತ್ ಕಾರ್ಯಕ್ಕೆ ಸಾವಿರಾರು ಪೊಲೀಸರ ನಿಯೋಜನೆ!