shimoga | ಶಿವಮೊಗ್ಗ – ಪೊಲೀಸರ ಮೇಲೆ ದಾಳಿ : ರೌಡಿ ಶೀಟರ್ ಕಾಲಿಗೆ ಗುಂಡೇಟು!
ಖಡಕ್ ಇನ್ಸ್’ಪೆಕ್ಟರ್ ಕೆ.ಟಿ.ಗುರುರಾಜ್ ನೇತೃತ್ವದ ಪೊಲೀಸ್ ತಂಡದ ಕಾರ್ಯಾಚರಣೆ
ಶಿವಮೊಗ್ಗ (shivamogga), ಅ. 7: ಬಂಧಿಸಲು ತೆರಳಿದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲೆತ್ನಿಸಿದ, ರೌಡಿ ಶೀಟರ್ ಓರ್ವನ ಕಾಲಿಗೆ ತುಂಗಾನಗರ ಠಾಣೆ ಇನ್ಸ್’ಪೆಕ್ಟರ್ ಕೆ ಟಿ ಗುರುರಾಜ್ ಅವರು ಗುಂಡಿಕ್ಕಿ ಬಂಧಿಸಿದ ಘಟನೆ, ಅ. 7 ರ ಬೆಳಿಗ್ಗೆ ಶಿವಮೊಗ್ಗ ನಗರದ ಹೊರವಲಯ ಗರುಡ ಲೇಔಟ್ ಬಳಿ ನಡೆದಿದೆ.
ಶಿವಮೊಗ್ಗದ ಹೊರವಲಯ ಮದಾರಿಪಾಳ್ಯದ ನಿವಾಸಿ ಹಬೀಬುಲ್ಲಾ (31) ಬಂಧಿತ ರೌಡಿ ಶೀಟರ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಹಾಗೂ ಈತನ ಹಲ್ಲೆಯಿಂದ ಗಾಯಗೊಂಡ ಪೊಲೀಸ್ ಪೇದೆ ಜಯಪ್ಪರನ್ನು, ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಲೆ ಪ್ರಕರಣ : ಕಳೆದ ತಿಂಗಳು ಮದಾರಿಪಾಳ್ಯದ ನಿವಾಸಿ ನಾಸೀರ್ ಖಾನ್ ಎಂಬುವರ ಮೇಲೆ, ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಸದರಿ ಘಟನೆಯಲ್ಲಿ ಹಬೀಬುಲ್ಲಾ ಆರೋಪಿಯಾಗಿದ್ದ.
ತಲೆಮರೆಸಿಕೊಂಡಿದ್ದ ಆರೋಪಿ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದು, ಗರುಡ ಲೇಔಟ್ ಸಮೀಪವಿರುವ ಖಚಿತ ವರ್ತಮಾನ ಲಭಿಸಿತ್ತು. ಈ ವೇಳೆ ಇನ್ಸ್’ಪೆಕ್ಟರ್ ಗುರುರಾಜ್ ನೇತೃತ್ವದ ಪೊಲೀಸ್ ತಂಡ ಆತನ ಬಂಧನಕ್ಕೆ ಮುಂದಾದ ವೇಳೆ ಪೊಲೀಸರ ಮೇಲೆಯೇ ದಾಳಿಗೆ ಯತ್ನಿಸಿ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದೆ.
ಆರೋಪಿ : ಹಬೀಬುಲ್ಲಾ ವಿರುದ್ದ ಕೊಲೆ, ಕಳ್ಳತನ ಸೇರಿದಂತೆ ಸುಮಾರು ಐದಾರು ಪ್ರಕರಣಗಳಿವೆ. ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಯು ಜಾಮೀನಿನ ಮೇಲೆ ಹೊರಬಂದಿದ್ದ ಎಂದು ಪೊಲೀಸ್ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
An incident in which Tunganagar police station inspector KT Gururaj shot and arrested a rowdy sheeter who attacked the policemen who had gone to arrest him and tried to escape. It happened near Garuda Layout on the outskirts of Shimoga city on the morning of october 7th.
