
shmoga | ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಕಣ್ಮರೆಯಾದ ಜನಸ್ನೇಹಿ ಆಡಳಿತ..!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ನ. 13: ಶಿವಮೊಗ್ಗ ಮಹಾನಗರ ಪಾಲಿಕೆ ವಾರ್ಡ್ ಗಳ ಚುನಾವಣೆ ಸದ್ಯಕ್ಕೆ ನಡೆಯುವ ಲಕ್ಷಣಗಳಿಲ್ಲ. ಜನಪ್ರತಿನಿಧಿಗಳಿಲ್ಲದೆ ವರ್ಷವಾಗುತ್ತಾ ಬಂದಿದೆ. ಈ ನಡುವೆ ಪಾಲಿಕೆಯಲ್ಲಿ ಜನಸ್ನೇಹಿ ಆಡಳಿತ ಕಣ್ಮರೆಯಾಗಿದೆ. ಅಧಿಕಾರಿಗಳ ದರ್ಬಾರ್ ಮಿತಿಮೀರಿರುವ ದೂರುಗಳು ನಾಗರೀಕ ವಲಯದಿಂದ ಕೇಳಿಬರಲಾರಂಭಿಸಿವೆ!
ಸಣ್ಣಪುಟ್ಟ ಕೆಲಸ ಕಾರ್ಯಗಳಿಗೂ, ನಾಗರೀಕರು ಪಾಲಿಕೆ ಕಚೇರಿಗೆ ಅಲೆದಾಡುವಂತಾಗಿದೆ. ಕೆಲ ಅಧಿಕಾರಿಗಳು ನಾಗರೀಕರೊಂದಿಗೆ ಕನಿಷ್ಠ ಸೌಜನ್ಯದಿಂದಲೂ ವರ್ತಿಸುವುದಿಲ್ಲ. ದರ್ಪದಿಂದ ನಡೆದುಕೊಳ್ಳುತ್ತಾರೆ. ಕೆಲವೊಮ್ಮೆ ಮಧ್ಯವರ್ತಿಗಳು, ಹಣವಿಲ್ಲದೆ ಕೆಲಸ ಮಾಡಿಸಿಕೊಳ್ಳಲಾಗದ ದುಃಸ್ಥಿತಿಯಿದೆ ಎಂದು ಕೆಲ ನಾಗರೀಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಕಾಲಮಿತಿಯೊಳಗೆ ಕಡತಗಳ ವಿಲೇವಾರಿಯಾಗುತ್ತಿಲ್ಲ. ಆಡಳಿತಾಧಿಕಾರಿಗಳ ಅನುಮತಿ ಬೇಕೆಂಬ ನೆಪ ಹೇಳಲಾಗುತ್ತಿದೆ. ಕೆಲ ವಿಭಾಗಗಳ ಅಧಿಕಾರಿ – ಸಿಬ್ಬಂದಿಗಳು ಕಚೇರಿ ಅವಧಿಯಲ್ಲಿ ಸಿಗುವುದೆ ದುಸ್ತರವಾಗಿದೆ. ನಿಯಮಾನುಸಾರ ಕೆಲಸಕಾರ್ಯ ಮಾಡಿಸಿಕೊಳ್ಳಲು ಸಾಧ್ಯವಾಗದಂತಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.
ಕಣ್ಮರೆ : ಈ ಹಿಂದೆ ಮೂಲಸೌಕರ್ಯ ಸೇರಿದಂತೆ ದೂರು-ದುಮ್ಮಾನಗಳನ್ನು ತೋಡಿಕೊಳ್ಳಲು, ಪಾಲಿಕೆ ಆಡಳಿತವು ಸಹಾಯವಾಣಿ ಕೇಂದ್ರ ತೆರೆದಿತ್ತು. ದೂರವಾಣಿ ಸಂಖ್ಯೆ ಹಾಗೂ ಸೋಶಿಯಲ್ ಮೀಡಿಯಾಗಳ ಮೂಲಕ ನಾಗರೀಕರು ತೋಡಿಕೊಳ್ಳುತ್ತಿದ್ದ ಸಮಸ್ಯೆಗಳಿಗೆ, ಪರಿಹಾರ ಕಲ್ಪಿಸುವ ವ್ಯವಸ್ಥೆಯಿತ್ತು.
ಆನ್’ಲೈನ್ ಮೂಲಕ ಪಾಲಿಕೆಯಲ ಹಲವು ಸೇವೆ ಪಡೆದುಕೊಳ್ಳುವ ವ್ಯವಸ್ಥೆ ಆರಂಭಿಸಲಾಗಿತ್ತು. ವಾರ್ಡ್ ಉಸ್ತುವಾರಿ ಹೊತ್ತಿರುವ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳನ್ನು ಸಾರ್ವಜನಿಕವಾಗಿ ಪ್ರಚುರಪಡಿಸಲಾಗುತ್ತಿತ್ತು. ಇದರಿಂದ ನಾಗರೀಕರಿಗೆ ಸಾಕಷ್ಟು ಅನುಕೂಲವಾಗಿತ್ತು.
ಆದರೆ ಸದ್ಯ ಪಾಲಿಕೆ ಆಡಳಿತದಲ್ಲಿ ಇವ್ಯಾವ ವ್ಯವಸ್ಥೆಗಳೂ ಇಲ್ಲವಾಗಿದೆ. ಪ್ರತಿಯೊಂದಕ್ಕೂ ನಾಗರೀಕರು ಕಚೇರಿಗೆ ಅಲೆದಾಡುವಂತಾಗಿದೆ. ಕಮೀಷನ್ ವ್ಯವಹಾರ ಜೋರಾಗಿದೆ. ಹಣವಿಲ್ಲದೆ ಕೆಲಸವಾಗುವುದಿಲ್ಲವೆಂಬ ದೂರುಗಳು ಕೇಳಿಬರಲಾರಂಭಿಸಿವೆ.
ಪಾಲಿಕೆ ಆಡಳಿತಾಧಿಕಾರಿಗಳು ಹಾಗೂ ಆಯುಕ್ತರು ಎಚ್ಚೆತ್ತುಕೊಳ್ಳಬೇಕಾಗಿದೆ. ಶಿವಮೊಗ್ಗ ಪಾಲಿಕೆಯನ್ನು ಜನಸ್ನೇಹಿಯಾಗಿ ರೂಪಿಸುವ ಕಾರ್ಯ ಮಾಡಬೇಕಾಗಿದೆ ಎಂದು ನಾಗರೀಕರು ಆಗ್ರಹಿಸುತ್ತಾರೆ.
ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ಮುಂದುವರಿದ ಮಾಹಿತಿ ಸಂಗ್ರಹ!
*** ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಕುರಿತಂತೆ, ಪಾಲಿಕೆಯ 9 ತಂಡಗಳು ಕಳೆದೆರೆಡು ತಿಂಗಳಿನಿಂದ ನಗರದ ಹೊರವಲಯದ ಪ್ರದೇಶಗಳಲ್ಲಿ ಸರ್ವೇ ಕಾರ್ಯ ನಡೆಸುತ್ತಿವೆ. ಲಭ್ಯ ಮಾಹಿತಿ ಅನುಸಾರ, ಇಲ್ಲಿಯವರೆಗೂ ಸರ್ವೇ ಕಾರ್ಯ ಪೂರ್ಣಗೊಂಡಿಲ್ಲ. ನಿಗದಿತ ವೇಗದಲ್ಲಿ ಮಾಹಿತಿ ಸಂಗ್ರಹಣೆ ಕಾರ್ಯ ನಡೆಯುತ್ತಿಲ್ಲವೆಂಬ ಮಾತುಗಳು ಆಡಳಿತ ವಲಯದಿಂದ ಕೇಳಿಬರುತ್ತಿವೆ. ಕಾಲಮಿತಿಯೊಳಗೆ ಸರ್ವೇ ಕಾರ್ಯು ಪೂರ್ಣಗೊಳಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡುವ ನಿಟ್ಟಿನಲ್ಲಿ ಪಾಲಿಕೆ ಆಡಳಿತ ಕ್ರಮಕೈಗೊಳ್ಳಬೇಕಾಗಿದೆ.
There are no signs of Shimoga Municipal Corporation wards elections being held at the moment. It has been a year without people’s representatives. In the meantime, people-friendly governance has disappeared in the corporation. Complaints of excessive durbar by the officials are starting to be heard from the civil sector!