Shimoga: Heap of garbage in the government office room ಶಿವಮೊಗ್ಗ : ಸರ್ಕಾರಿ ಕಚೇರಿ ಕೊಠಡಿಯಲ್ಲಿ ಕಸದ ರಾಶಿ

shimoga | ಶಿವಮೊಗ್ಗ : ಸರ್ಕಾರಿ ಕಚೇರಿ ಕೊಠಡಿಯಲ್ಲಿ ಇದೇನಿದು..?

ಶಿವಮೊಗ್ಗ (shivamogga), ನ. 26: ಇತ್ತೀಚೆಗೆ ಸರ್ಕಾರಿ ಕಚೇರಿಗಳಲ್ಲಿ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆದರೆ ಶಿವಮೊಗ್ಗ ನಗರದ ಸರ್ಕಾರಿ ಕಚೇರಿ ಕೊಠಡಿಯೊಂದರಲ್ಲಿ ತುಂಬಿರುವ ಕಸದ ರಾಶಿ ಗಮನಿಸಿದರೆ, ಸರ್ಕಾರಿ ಕಚೇರಿಗಳು ಹೀಗೂ ಇರುತ್ತವೆಯೇ..? ಎಂಬ ಅನುಮಾನ ಕಾಡುವಂತಾಗಿದೆ..!

ಹೌದು. ಲೋಕಸಭಾ ಸದಸ್ಯರ ಕಚೇರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಪ್ರಮುಖ ಕಚೇರಿಗಳು ಕಾರ್ಯನಿರ್ವಹಣೆ ಮಾಡುತ್ತಿರುವ ಹಾಗೂ ಪ್ರತಿನಿತ್ಯ ನೂರಾರು ನಾಗರೀಕರು ಆಗಮಿಸುವ ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಮೊದಲ ಮಹಡಿಯಲ್ಲಿರುವ ಕೊಠಡಿಯೊಂದು, ಅವ್ಯವಸ್ಥೆಯ ಕಾರಣದಿಂದ ನಾಗರೀಕರ ಟೀಕೆಗೆ ಆಡಳಿತ ಗುರಿಯಾಗುವಂತಾಗಿದೆ.

ಈ ಮೊದಲು ಶೌಚಾಲಯವಿದ್ದ ಸದರಿ ಕೊಠಡಿಯ ತುಂಬೆಲ್ಲ ಕಸದ ರಾಶಿಯನ್ನೇ ತುಂಬಲಾಗಿದೆ. ಇದರ ಜೊತೆಗೆ ಮುರಿದ ಪೀಠೋಪಕರಣಗಳನ್ನು ಹಾಕಲಾಗಿದೆ. ಇದರಿಂದ ಕೊಠಡಿಯು ಅಕ್ಷರಶಃ ಘನತ್ಯಾಜ್ಯ ವಿಲೇವಾರಿ ಕೇಂದ್ರವಾಗಿ ಮಾರ್ಪಟ್ಟಿದ್ದು, ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ!

ಸಂಸದ ಬಿ ವೈ ರಾಘವೇಂದ್ರ ಅವರ ಕಚೇರಿಯಿಂದ ಕೂಗಳತೆ ದೂರದಲ್ಲಿಯೇ ಸದರಿ ಕೊಠಡಿಯಿದೆ. ಸ್ವಚ್ಛತೆಯ ವಿಷಯದಲ್ಲಿ ಮಾದರಿಯಾಗಬೇಕಾಗಿದ್ದ, ಕೆಲ ಕಚೇರಿಗಳ ಸಿಬ್ಬಂದಿಗಳೇ ಸದರಿ ಕೊಠಡಿಯನ್ನು ಕಸ ವಿಲೇವಾರಿ ತಾಣವಾಗಿ ಮಾರ್ಪಡಿಸಿದ್ದಾರೆ ಎಂದು ಕಚೇರಿಗೆ ಆಗಮಿಸುವ ನಾಗರೀಕರು ದೂರುತ್ತಾರೆ.

ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಘನತ್ಯಾಜ್ಯ ಸಂಗ್ರಹಣೆಯ ತಾಣದಂತಾಗಿರುವ ಕೊಠಡಿಯನ್ನು, ಸ್ವಚ್ಛವಾಗಿಟ್ಟುಕೊಳ್ಳುವತ್ತ ಚಿತ್ತ ಹರಿಸಬೇಕಾಗಿದೆ ಎಂಬುವುದು ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.

Recently in government offices, cleanliness is given high priority. But if you notice the pile of garbage filled in one of the government office rooms of Shimoga city, will the government offices be like this..? The doubt is haunting..! Yes. A room on the first floor of the old district collector’s office building, where important offices including Lok Sabha member’s office, Deputy Divisional Officer, Tehsildar are functioning and where hundreds of citizens arrive daily, has become a target of citizens’ criticism due to the chaos.

Shimoga : Drinking water scarcity in the DC office premises..! ಶಿವಮೊಗ್ಗ : ಡಿಸಿ ಕಚೇರಿ ಆವರಣದಲ್ಲಿಯೇ ಕುಡಿಯುವ ನೀರಿಗೆ ಹಾಹಾಕಾರ..! Previous post shimoga | ಶಿವಮೊಗ್ಗ : ಡಿಸಿ ಕಚೇರಿ ಆವರಣದಲ್ಲಿಯೇ ಕುಡಿಯುವ ನೀರಿಗೆ ಹಾಹಾಕಾರ..!
shimoga | Shimoga : The problem of drinking water in the DC office premises is finally freed! ಶಿವಮೊಗ್ಗ : ಡಿಸಿ ಕಚೇರಿ ಆವರಣದಲ್ಲಿ ತಲೆದೋರಿದ್ದ ಕುಡಿಯುವ ನೀರಿನ ಹಾಹಾಕಾರಕ್ಕೆ ಕೊನೆಗೂ ಮುಕ್ತಿ! ವರದಿ : ಬಿ. ರೇಣುಕೇಶ್ reporter : b renukesha Next post shimoga | ಶಿವಮೊಗ್ಗ : ಡಿಸಿ ಕಚೇರಿ ಆವರಣದಲ್ಲಿ ತಲೆದೋರಿದ್ದ ಕುಡಿಯುವ ನೀರಿನ ಹಾಹಾಕಾರಕ್ಕೆ ಕೊನೆಗೂ ಮುಕ್ತಿ!