shimoga | Shimoga : The problem of drinking water in the DC office premises is finally freed! ಶಿವಮೊಗ್ಗ : ಡಿಸಿ ಕಚೇರಿ ಆವರಣದಲ್ಲಿ ತಲೆದೋರಿದ್ದ ಕುಡಿಯುವ ನೀರಿನ ಹಾಹಾಕಾರಕ್ಕೆ ಕೊನೆಗೂ ಮುಕ್ತಿ! ವರದಿ : ಬಿ. ರೇಣುಕೇಶ್ reporter : b renukesha

shimoga | ಶಿವಮೊಗ್ಗ : ಡಿಸಿ ಕಚೇರಿ ಆವರಣದಲ್ಲಿ ತಲೆದೋರಿದ್ದ ಕುಡಿಯುವ ನೀರಿನ ಹಾಹಾಕಾರಕ್ಕೆ ಕೊನೆಗೂ ಮುಕ್ತಿ!

ಶಿವಮೊಗ್ಗ (shivamogga), ನ. 26: ಶಿವಮೊಗ್ಗ ನಗರದ ಡಿಸಿ ಕಚೇರಿ ಆವರಣದಲ್ಲಿ ತಲೆದೋರಿದ್ದ, ಕುಡಿಯುವ ನೀರಿನ ಹಾಹಾಕಾರಕ್ಕೆ ಕೊನೆಗೂ ಮುಕ್ತಿ ದೊರಕಿದೆ! ಕಚೇರಿ ಆವರಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ, ನ. 26 ರ ಮಂಗಳವಾರ ಬೆಳಿಗ್ಗೆಯಿಂದ ನೀರು ಲಭ್ಯವಾಗಲಾರಂಭಿಸಿದೆ.

ಶುದ್ಧ ಕುಡಿಯುವ ನೀರು ಘಟಕದಲ್ಲಿ ಕಳೆದ ಹಲವು ದಿನಗಳಿಂದ ನೀರು ಲಭ್ಯವಾಗದಿರುವ ಕುರಿತಂತೆ ಹಾಗೂ ಇದರಿಂದ ಡಿಸಿ ಕಚೇರಿಗೆ ಆಗಮಿಸುವ ನಾಗರೀಕರಿಗೆ ತೊಂದರೆಯಾಗಿರುವ ಬಗ್ಗೆ 25/11/2024 ರಂದು ‘ಉದಯ ಸಾಕ್ಷಿ’ ನ್ಯೂಸ್ ವೆಬ್ ಸೈಟ್  ಸುದ್ದಿ ಪ್ರಕಟಿಸಿತ್ತು.

ಸುದ್ದಿ ಪ್ರಕಟಗೊಂಡ ಬೆನ್ನಲ್ಲೆ ಎಚ್ಚೆತ್ತುಕೊಂಡಿರುವ ಆಡಳಿತವು, ಶುದ್ಧ ಕುಡಿಯುವ ನೀರು ಘಟಕದಲ್ಲಿನ ಸಮಸ್ಯೆಯನ್ನು ಕಾಲಮಿತಿಯೊಳಗೆ ಪರಿಹರಿಸಿ, ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಸಮರ್ಪಕವಾಗಿ ನೀರು ಪೂರೈಕೆ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು.

ಅದರಂತೆ ನ. 26 ರಂದು ಬೆಳ್ಳಂಬೆಳಿಗ್ಗೆಯೇ ಡಿಸಿ ಕಚೇರಿ ಆವರಣದಲ್ಲಿನ ಶುದ್ಧ ಕುಡಿಯುವ ನೀರು ಘಟಕದಲ್ಲಿನ ಸಮಸ್ಯೆ ಪರಿಹರಿಸಲಾಗಿದೆ. ಘಟಕಕ್ಕೆ ಜಲ ಮಂಡಳಿ ಆಡಳಿತ ನೀರು ಪೂರೈಕೆ ಮಾಡಿದೆ ಎಂದು ಕಚೇರಿ ಮೂಲಗಳು ಮಾಹಿತಿ ನೀಡುತ್ತವೆ.

ಅನುಕೂಲ : ಜಿಲ್ಲಾಧಿಕಾರಿ ಕಚೇರಿಗೆ ನಾನಾ ಕೆಲಸಕಾರ್ಯಗಳ ನಿಮಿತ್ತ, ಜಿಲ್ಲೆಯ ವಿವಿಧೆಡೆಯಿಂದ ಪ್ರತಿನಿತ್ಯ ನಾಗರೀಕರು ಆಗಮಿಸುತ್ತಾರೆ. ಕಚೇರಿ ಆವರಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ನಾಗರೀಕರಿಗೆ ಸಾಕಷ್ಟು ಅನುಕೂಲವಾಗಿದೆ.

ಆದರೆ ಕಳೆದ ಕೆಲ ವಾರಗಳಿಂದ ಘಟಕದಲ್ಲಿ ನೀರು ಲಭ್ಯವಾಗದಿದ್ದ ಕಾರಣದಿಂದ, ಕಚೇರಿಗೆ ಆಗಮಿಸುವ ನಾಗರೀಕರು ದಾಹ ಇಂಗಿಸಿಕೊಳ್ಳಲು ಪರದಾಡುವಂತಾಗಿತ್ತು. ಸುತ್ತಮುತ್ತಲಿನ ಹೋಟೆಲ್ ಗಳಿಗೆ ಎಡತಾಕುವಂತಹ ಸ್ಥಿತಿ ನಿರ್ಮಾಣವಾಗಿತ್ತು.

Shimoga: Heap of garbage in the government office room ಶಿವಮೊಗ್ಗ : ಸರ್ಕಾರಿ ಕಚೇರಿ ಕೊಠಡಿಯಲ್ಲಿ ಕಸದ ರಾಶಿ Previous post shimoga | ಶಿವಮೊಗ್ಗ : ಸರ್ಕಾರಿ ಕಚೇರಿ ಕೊಠಡಿಯಲ್ಲಿ ಇದೇನಿದು..?
shimoga | Shimoga: Anganwadi Worker - Assistant Posts Provisional Selection List Announced, Objection Allowed shimoga | ಶಿವಮೊಗ್ಗ : ಅಂಗನವಾಡಿ ಕಾರ್ಯಕರ್ತೆ - ಸಹಾಯಕಿ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ, ಆಕ್ಷೇಪಣೆ ಅವಕಾಶ Next post shimoga | ಶಿವಮೊಗ್ಗ : ಅಂಗನವಾಡಿ ಕಾರ್ಯಕರ್ತೆಯರು – ಸಹಾಯಕಿಯರ ತಾತ್ಕಾಲಿಕ ಪಟ್ಟಿ ಪ್ರಕಟ ; ಆಕ್ಷೇಪಣೆ ಸಲ್ಲಿಸಲು ಅವಕಾಶ