ರಾತ್ರಿಯಿಂದಲೇ ತುಂಗಾ ಜಲಾಶಯದಿಂದ ನೀರು ಹೊರಕ್ಕೆ!
ಶಿವಮೊಗ್ಗ ತಾಲೂಕು ಗಾಜನೂರು ಗ್ರಾಮದಲ್ಲಿರುವ ತುಂಗಾ ಜಲಾಶಯ ಗರಿಷ್ಠ ಮಟ್ಟ ತಲುಪಿದೆ. ಬುಧವಾರ ರಾತ್ರಿಯಿಂದಲೇ ಡ್ಯಾಂನಿಂದ ನದಿಗೆ ನೀರು ಹರಿಸಲಾಗುತ್ತಿದೆ!
ರಾತ್ರಿಯಿಂದಲೇ ತುಂಗಾ ಜಲಾಶಯದಿಂದ ನೀರು ಹೊರಕ್ಕೆ! Read MoreNews Website
ಶಿವಮೊಗ್ಗ ತಾಲೂಕು ಗಾಜನೂರು ಗ್ರಾಮದಲ್ಲಿರುವ ತುಂಗಾ ಜಲಾಶಯ ಗರಿಷ್ಠ ಮಟ್ಟ ತಲುಪಿದೆ. ಬುಧವಾರ ರಾತ್ರಿಯಿಂದಲೇ ಡ್ಯಾಂನಿಂದ ನದಿಗೆ ನೀರು ಹರಿಸಲಾಗುತ್ತಿದೆ!
ರಾತ್ರಿಯಿಂದಲೇ ತುಂಗಾ ಜಲಾಶಯದಿಂದ ನೀರು ಹೊರಕ್ಕೆ! Read More
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಹಿಷಿ ಮತ್ತು ಮಂಡಗದ್ದೆ ಸೇರಿದಂತೆ ಹಲವು ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿರುವ ಬಗ್ಗೆ, ಸಾರ್ವಜನಿಕ ವಲಯದಿಂದ ದೂರುಗಳು ಕೇಳಿ ಬರುತ್ತಿವೆ. ತಕ್ಷಣವೇ ಅಕ್ರಮಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ವಲಯ ಅರಣ್ಯಾಧಿಕಾರಿಗಳಿಗೆ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಖಡಕ್ ಸೂಚನೆ ನೀಡಿದ್ದಾರೆ.
ಕಾಡುಗಳಲ್ಲಿ ಅಕ್ರಮ ಮರಳು ದಂಧೆ ಮಟ್ಟ ಹಾಕಲು ಅರಣ್ಯಾಧಿಕಾರಿಗಳಿಗೆ ಶಿವಮೊಗ್ಗ ಡಿಸಿ ಖಡಕ್ ವಾರ್ನಿಂಗ್! Read More
ಮುಂಗಾರು ಮಳೆಯ ಅವಧಿಯಲ್ಲಿ ರಾಜ್ಯದಲ್ಲಿ ಮೊದಲಿಗೆ ಭರ್ತಿಯಾಗುವ ಹಾಗೂ ಕಡಿಮೆ ವ್ಯಾಪ್ತಿ – ವಿಸ್ತೀರ್ಣ ಹೊಂದಿರುವ, ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿರುವ ತುಂಗಾ ಜಲಾಶಯವು ಗರಿಷ್ಠ ಮಟ್ಟಕ್ಕೆ ಬಂದಿದೆ!
ಶಿವಮೊಗ್ಗ : ಭರ್ತಿಯ ಹಂತಕ್ಕೆ ತುಂಗಾ ಡ್ಯಾಂ – ನೀರು ಹೊರಹರಿಸಲು ಕೌಂಟ್ ಡೌನ್! Read More
ಶಿವಮೊಗ್ಗ ನಗರದ ಹೊರವಲಯದ ಬಡಾವಣೆಗಳಲ್ಲಿ, ಕಳೆದ ಒಂದೂವರೆ ವರ್ಷಗಳಿಂದ ಅನುಷ್ಠಾನಗೊಳ್ಳುತ್ತಿರುವ 24X7 ಕುಡಿಯುವ ನೀರು ಪೂರೈಕೆ ಕಾಮಗಾರಿ ಸದ್ಯಕ್ಕೆ ಪೂರ್ಣಗೊಳ್ಳುವ ಲಕ್ಷಣಗಳು ಗೋಚರವಾಗುತ್ತಿಲ್ಲ!
ಆದರೆ ಹಲವೆಡೆ ಜನವಸತಿ ಪ್ರದೇಶಗಳಲ್ಲಿ ನಡೆಸಲಾಗಿರುವ ಅಪೂರ್ಣ ಕಾಮಗಾರಿಯಿಂದ, ನಾಗರೀಕರು ತೊಂದರೆ ಪಡುವಂತಾಗಿದೆ. ತೀವ್ರ ಕಿರಿಕಿರಿ ಎದುರಿಸುವಂತಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ, ಪೈಪ್ ಅಳವಡಿಕೆ ಹಾಗೂ ದುರಸ್ತಿಗೆಂದು ತೆಗೆದು ಬಿಟ್ಟಿರುವ ಗುಂಡಿಗಳು ಗಂಡಾಂತರಕಾರಿಯಾಗಿ ಪರಿಣಮಿಸಿವೆ.
ಗುಂಡಿ ಗಂಡಾಂತರ : ಗಮನ ಹರಿಸುವುದೆ ಜಲ ಮಂಡಳಿ ಆಡಳಿತ? Read More
ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲೆತ್ನಿಸಿದ ರೌಡಿ ಶೀಟರ್ ಓರ್ವನ ಕಾಲಿಗೆ ಗುಂಡಿಕ್ಕಿ ಪೊಲೀಸರು ಬಂಧಿಸಿದ ಘಟನೆ ಸೋಮವಾರ ಶಿವಮೊಗ್ಗ ನಗರದ ಹೊರವಲಯದಲ್ಲಿ ನಡೆದಿದೆ.
ಶಿವಮೊಗ್ಗ : ರೌಡಿ ಶೀಟರ್ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಪೊಲೀಸರು! Read More
‘ಸರ್ಕಾರಿ ಕಚೇರಿಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾದ ಸಿಬ್ಬಂದಿಗಳಿಂದ, ಕೆಲ ಮ್ಯಾನ್ ಪವರ್ ಏಜೆನ್ಸಿಗಳು ಭಾರೀ ಪ್ರಮಾಣದ ಹಣ ವಸೂಲು ಮಾಡುತ್ತಿರುವ ದೂರುಗಳ ಕುರಿತಂತೆ ಪರಿಶೀಲನೆ ನಡೆಸುವಂತೆ’ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಕಾರ್ಮಿಕ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಶನಿವಾರ ಶಿವಮೊಗ್ಗ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ, ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿತವಾಗಿದ್ದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಹಣ ವಸೂಲಿ : ತಪ್ಪಿತಸ್ಥ ಮ್ಯಾನ್ ಪವರ್ ಏಜೆನ್ಸಿಗಳ ವಿರುದ್ದ ಕ್ರಮಕ್ಕೆ ಡಿಸಿ ಸೂಚನೆ Read More
ಪತ್ನಿಯ ಹತ್ಯೆ ನಡೆಸಿದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಭದ್ರಾವತಿಯ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಹೊಳೆಹೊನ್ನೂರು ಪಟ್ಟಣದ ನಿವಾಸಿ ಗಣೇಶ್ (44) ಶಿಕ್ಷೆಗೊಳಗಾದ ಪತಿ ಎಂದು ಗುರುತಿಸಲಾಗಿದೆ. ಜೀವಾವಧಿ ಶಿಕ್ಷೆಯ ಜೊತೆಗೆ 50 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 3 ವರ್ಷಗಳ ಕಾಲ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಲಾಗಿದೆ.
‘ಪತ್ರಿಕೋದ್ಯಮ ಇಂದು ದಿಕ್ಕು ತಪ್ಪುತ್ತಿದೆ. ಮೌಲ್ಯಗಳನ್ನು ಮರೆತಿದೆ. ಕಾಸಿಗಾಗಿ ಸುದ್ದಿ, ಧರ್ಮಕ್ಕಾಗಿ ಸುದ್ದಿ, ರಾಜಕಾರಣಕ್ಕಾಗಿ ಸುದ್ದಿಗಳು ಸರಕಾಗಿ ಹೋಗಿವೆ. ದ್ವೇಷದ ಮತ್ತು ಸುಳ್ಳಿನ ಪತ್ರಿಕೋದ್ಯಮವು, ಮನುಷ್ಯತ್ವವನ್ನೇ ನುಂಗಿಹಾಕಿ ಸಮಾಜಕ್ಕೆ ಕೊಳ್ಳಿಯಿಡುವ ಕೆಲಸ ಮಾಡುತ್ತಿವೆ’
ಎಂದು ಹಿರಿಯ ಪತ್ರಕರ್ತ ಸಮಿವುಲ್ಲಾ ಬೆಲಗೂರು ಹೇಳಿದ್ದಾರೆ.
ಶಿವಮೊಗ್ಗ ನಗರದ ಸವಾರ್ ಲೈನ್ ರಸ್ತೆಯಲ್ಲಿರುವ ಬಾರ್ ವೊಂದರ ಮುಂಭಾಗ, ಇತ್ತೀಚೆಗೆ ನಡೆದ ಮಾರಾಮಾರಿ ಪ್ರಕರಣವೊಂದರ ವೀಡಿಯೋ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ!
ಜೂ. 26 ರ ರಾತ್ರಿ ಈ ಘಟನೆಯ ನಡೆದಿದೆ ಎಂದು ಹೇಳಲಾಗಿದೆ. ವಿದ್ಯಾರ್ಥಿ ಸಂಘಟನೆಯೊಂದರ ಸದಸ್ಯರು ಹಾಗೂ ರಸ್ತೆಯಲ್ಲಿ ಹೋಗುತ್ತಿದ್ದವರ ನಡುವೆ ಗಲಾಟೆಯಾಗಿದೆ. ಪರಸ್ಪರ ಕೈ ಕೈ ಮಿಲಾಯಿಸಲಾಗಿದೆ.
ಶಿವಮೊಗ್ಗ – ಬಾರ್ ಮುಂಭಾಗ ಕ್ಷುಲ್ಲಕ ಕಾರಣಕ್ಕೆ ಗಲಾಟೆ : ವೈರಲ್ ಆದ ವೀಡಿಯೋ! Read More
ಶಿವಮೊಗ್ಗದ ವಿಜಯನಗರ ಬಡಾವಣೆಯಲ್ಲಿ ನಡೆದ, ನೀರಾವರಿ ಇಲಾಖೆ ಎಂಜಿನಿಯರ್ ಮಲ್ಲಿಕಾರ್ಜುನ್ ರವರ ಪತ್ನಿ ಕಮಲಮ್ಮರವರ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ, ಶಿವಮೊಗ್ಗದ ತುಂಗಾ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಣದಾಸೆಗೆ ಎಂಜಿನಿಯರ್ ಪತ್ನಿ ಹತ್ಯೆ ಪ್ರಕರಣ : ಆರೋಪಿಗಳು ಅರೆಸ್ಟ್ – ದರೋಡೆ ಮಾಡಿದ್ದ 33 ಲಕ್ಷ ರೂ. ವಶ Read More