ಶಿಕಾರಿಪುರದ ಮನೆ ಮೇಲೆ ಕಲ್ಲು ತೂರಾಟ ನಡೆದಾಗ ಕುಟುಂಬದವರು ಕಣ್ಣೀರು ಹಾಕಿದ್ದೆವೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಬೆಂಡೆಕಟ್ಟೆ ತಾಂಡಾ, ಬಳೂರು, ಗುಳೇದಾಹಳ್ಳಿ ತಾಂಡಾಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಪರ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದ ವೇಳೆ ಅವರು ಮಾತನಾಡಿದರು. ನಾನು ಏನಾದರೂ ತಪ್ಪು ಮಾತಾಡಿದರೆ ನನ್ನ ಮನೆತನ ಹಾಳಾಗಲಿ. ದೇವಾಲಯದ ಮುಂದೆ ನಿಂತುಕೊಂಡು ಮಾತಾಡುತ್ತಿದ್ದೆನೆ. ಸೇವೆ ಮಾಡಿದ ಮನೆತನಕ್ಕೆ ಕಲ್ಲು ಹೊಡೆಸುವ ಕೆಲಸವನ್ನು ವಿರೋಧಿಗಳು ಮಾಡಿದ್ದಾರೆ ಎಂದು ಹೇಳಿದರು.

ಶಿಕಾರಿಪುರ – ‘ಮನೆ ಮೇಲೆ ಕಲ್ಲುತೂರಾಟ ನಡೆದಾಗ ಕಣ್ಣೀರು ಹಾಕಿದ್ದೆವೆ’ : ಸಂಸದ ಬಿ.ವೈ.ರಾಘವೇಂದ್ರ

ಶಿಕಾರಿಪುರದ ಮನೆ ಮೇಲೆ ಕಲ್ಲು ತೂರಾಟ ನಡೆದಾಗ ಕುಟುಂಬದವರು ಕಣ್ಣೀರು ಹಾಕಿದ್ದೆವೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಬೆಂಡೆಕಟ್ಟೆ ತಾಂಡಾ, ಬಳೂರು, ಗುಳೇದಾಹಳ್ಳಿ ತಾಂಡಾಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಪರ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದ ವೇಳೆ ಅವರು ಮಾತನಾಡಿದರು.

ಶಿಕಾರಿಪುರ – ‘ಮನೆ ಮೇಲೆ ಕಲ್ಲುತೂರಾಟ ನಡೆದಾಗ ಕಣ್ಣೀರು ಹಾಕಿದ್ದೆವೆ’ : ಸಂಸದ ಬಿ.ವೈ.ರಾಘವೇಂದ್ರ Read More
ಚಿತ್ರನಟ ಶಿವರಾಜಕುಮಾರ್ ಅವರು ಕಳೆದ ಮೂರು ದಿನಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಬೀಡುಬಿಟ್ಟಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ತೀರ್ಥಹಳ್ಳಿಯ ಬಾಳೇಬೈಲಿನಲ್ಲಿ ಮಂಗಳವಾರ ಆಯೋಜಿತವಾಗಿದ್ದ ಕಾಂಗ್ರೆಸ್ ಪಕ್ಷದ ಬಹಿರಂಗ ಸಮಾವೇಶದಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿರವರ ಜೊತೆ ವೇದಿಕೆ ಹಂಚಿಕೊಂಡು ಗಮನ ಸೆಳೆದಿದ್ದಾರೆ. ಸಮಾರಂಭದಲ್ಲಿ ಮಾತನಾಡಿದ ಶಿವರಾಜಕುಮಾರ್, ‘ತಾವು ರಾಹುಲ್ ಗಾಂಧಿ ಅಭಿಮಾನಿಯಾಗಿದ್ದೆನೆ. ಅವರನ್ನು ನೋಡಲೆಂದು ಆಗಮಿಸಿದ್ದೆನೆ. ಭಾರತ್ ಜೋಡೋ ಯಾತ್ರೆ ನೋಡಿ ತಮಗೆ ಅತೀವ ಸಂತೋಷ ಉಂಟಾಯಿತು. ಅವರ ಫಿಟ್ನೆಸ್ ಇಷ್ಟವಾಯಿತು. ಒಂದು ಉದ್ದೇಶಕ್ಕಾಗಿ ಇಡೀ ದೇಶವನ್ನು ನಡೆದುಕೊಂಡು ಹೋದ ಅವರ ಬಗ್ಗೆ ಅಭಿಮಾನವಿದೆ.

ತೀರ್ಥಹಳ್ಳಿ – ‘ರಾಹುಲ್ ಗಾಂಧಿ ಅಭಿಮಾನಿಯಾಗಿ ಬಂದಿದ್ದೆನೆ’ : ನಟ ಶಿವರಾಜಕುಮಾರ್

ಚಿತ್ರನಟ ಶಿವರಾಜಕುಮಾರ್ ಅವರು ಕಳೆದ ಮೂರು ದಿನಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಬೀಡುಬಿಟ್ಟಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ.

ಈ ನಡುವೆ ತೀರ್ಥಹಳ್ಳಿಯ ಬಾಳೇಬೈಲಿನಲ್ಲಿ ಮಂಗಳವಾರ ಆಯೋಜಿತವಾಗಿದ್ದ ಕಾಂಗ್ರೆಸ್ ಪಕ್ಷದ ಬಹಿರಂಗ ಸಮಾವೇಶದಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿರವರ ಜೊತೆ ವೇದಿಕೆ ಹಂಚಿಕೊಂಡು ಗಮನ ಸೆಳೆದಿದ್ದಾರೆ.

ಸಮಾರಂಭದಲ್ಲಿ ಮಾತನಾಡಿದ ಶಿವರಾಜಕುಮಾರ್, ‘ತಾವು ರಾಹುಲ್ ಗಾಂಧಿ ಅಭಿಮಾನಿಯಾಗಿದ್ದೆನೆ. ಅವರನ್ನು ನೋಡಲೆಂದು ಆಗಮಿಸಿದ್ದೆನೆ. ಭಾರತ್ ಜೋಡೋ ಯಾತ್ರೆ ನೋಡಿ ತಮಗೆ ಅತೀವ ಸಂತೋಷ ಉಂಟಾಯಿತು.

ತೀರ್ಥಹಳ್ಳಿ – ‘ರಾಹುಲ್ ಗಾಂಧಿ ಅಭಿಮಾನಿಯಾಗಿ ಬಂದಿದ್ದೆನೆ’ : ನಟ ಶಿವರಾಜಕುಮಾರ್ Read More
‘ಬಿಜೆಪಿಯವರಿಗೆ 40 ನಂಬರ್ ಮೇಲೆ ಬಹಳ ಪ್ರೀತಿಯಿದೆ. ಈ ಕಾರಣದಿಂದ ಅವರಿಗೆ 40 ಸೀಟ್ ಮಾತ್ರ ನೀಡಿ’ ಎಂದು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಮತದಾರರಿಗೆ ಕರೆ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಬಾಳೇಬೈಲಿನಲ್ಲಿ ಮಂಗಳವಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಿಜೆಪಿ ಕಳ್ಳತನ ಮಾರ್ಗದಲ್ಲಿ ಅಧಿಕಾರಕ್ಕೆ ಬಂದಿದೆ. ಮುಂದೆಯೂ ಹೀಗೆಯೇ ಮಾಡಲಿದೆ. ಈ ಕಾರಣದಿಂದ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿ ಎಂದರು.

ತೀರ್ಥಹಳ್ಳಿ – ‘ಬಿಜೆಪಿಯವರಿಗೆ 40 ನಂಬರ್ ಎಂದರೇ ಇಷ್ಟ – ಅವರಿಗೆ 40 ಸೀಟ್ ಮಾತ್ರ ನೀಡಿ’ : ರಾಹುಲ್ ಗಾಂಧಿ

‘ಬಿಜೆಪಿಯವರಿಗೆ 40 ನಂಬರ್ ಮೇಲೆ ಬಹಳ ಪ್ರೀತಿಯಿದೆ. ಈ ಕಾರಣದಿಂದ ಅವರಿಗೆ 40 ಸೀಟ್ ಮಾತ್ರ ನೀಡಿ’ ಎಂದು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಮತದಾರರಿಗೆ ಕರೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಬಾಳೇಬೈಲಿನಲ್ಲಿ ಮಂಗಳವಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಿಜೆಪಿ ಕಳ್ಳತನ ಮಾರ್ಗದಲ್ಲಿ ಅಧಿಕಾರಕ್ಕೆ ಬಂದಿದೆ. ಮುಂದೆಯೂ ಹೀಗೆಯೇ ಮಾಡಲಿದೆ. ಈ ಕಾರಣದಿಂದ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿ ಎಂದರು.

ತೀರ್ಥಹಳ್ಳಿ – ‘ಬಿಜೆಪಿಯವರಿಗೆ 40 ನಂಬರ್ ಎಂದರೇ ಇಷ್ಟ – ಅವರಿಗೆ 40 ಸೀಟ್ ಮಾತ್ರ ನೀಡಿ’ : ರಾಹುಲ್ ಗಾಂಧಿ Read More
ಒಂದೆಡೆ ಚುನಾವಣೆ ಕಾವು, ಮತ್ತೊಂದೆಡೆ ಬಿಸಿಲ ಧಗೆಯಿಂದ ಕೆಲ ರಾಜಕಾರಣಿಗಳು ಅಕ್ಷರಶಃ ಬಸವಳಿದಿದ್ದಾರೆ. ಬೆವರು ಹರಿಸಲಾರಂಭಿಸಿದ್ದಾರೆ. ಯಾವಾಗ ಚುನಾವಣೆ ಪೂರ್ಣಗೊಳ್ಳಲಿದೆಯೋ ಎಂದು ಕಾದು ಕುಳಿತುಕೊಳ್ಳುವಂತೆ ಮಾಡಿದೆ! ಹೌದು. ಪ್ರಸ್ತುತ ವರ್ಷ ತಾಪಮಾನದ ಪ್ರಮಾಣದಲ್ಲಿ, ಗಣನೀಯ ಪ್ರಮಾಣದ ಹೆಚ್ಚಳ ಕಂಡುಬಂದಿದೆ. ಬಿರು ಬಿಸಿಲು ನಾಗರೀಕರನ್ನು ಹೈರಾಣಾಗಿಸಿದೆ. ಸುಡು ಬಿಸಿಲಿನಲ್ಲಿ ಎದುರಾಗಿರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯು ಅಖಾಡದಲ್ಲಿರುವ ಹಲವು ಅಭ್ಯರ್ಥಿಗಳನ್ನು ಹೈರಾಣಾಗಿಸಿದೆ.

ಚುನಾವಣೆ ಕಾವು, ಬಿಸಿಲ ಧಗೆಗೆ ಬಸವಳಿದ ರಾಜಕಾರಣಿಗಳು..!

ಒಂದೆಡೆ ಚುನಾವಣೆ ಕಾವು, ಮತ್ತೊಂದೆಡೆ ಬಿಸಿಲ ಧಗೆಯಿಂದ ಕೆಲ ರಾಜಕಾರಣಿಗಳು ಅಕ್ಷರಶಃ ಬಸವಳಿದಿದ್ದಾರೆ. ಬೆವರು ಹರಿಸಲಾರಂಭಿಸಿದ್ದಾರೆ. ಯಾವಾಗ ಚುನಾವಣೆ ಪೂರ್ಣಗೊಳ್ಳಲಿದೆಯೋ ಎಂದು ಕಾದು ಕುಳಿತುಕೊಳ್ಳುವಂತೆ ಮಾಡಿದೆ!

ಹೌದು. ಪ್ರಸ್ತುತ ವರ್ಷ ತಾಪಮಾನದ ಪ್ರಮಾಣದಲ್ಲಿ, ಗಣನೀಯ ಪ್ರಮಾಣದ ಹೆಚ್ಚಳ ಕಂಡುಬಂದಿದೆ. ಬಿರು ಬಿಸಿಲು ನಾಗರೀಕರನ್ನು ಹೈರಾಣಾಗಿಸಿದೆ. ಸುಡು ಬಿಸಿಲಿನಲ್ಲಿ ಎದುರಾಗಿರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯು ಅಖಾಡದಲ್ಲಿರುವ ಹಲವು ಅಭ್ಯರ್ಥಿಗಳನ್ನು ಹೈರಾಣಾಗಿಸಿದೆ.

ಚುನಾವಣೆ ಕಾವು, ಬಿಸಿಲ ಧಗೆಗೆ ಬಸವಳಿದ ರಾಜಕಾರಣಿಗಳು..! Read More
ಶಿವಮೊಗ್ಗ ನಗರದ ಎನ್ಇಎಸ್ ಮೈದಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಪಕ್ಷದ ವಿಧಾನಸಭೆ ಚುನಾವಣಾ ಪ್ರಚಾರ ಸಭೆಯಲ್ಲಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದರು. ತಮ್ಮ ಭಾಷಣದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ವಿರುದ್ದ ವಾಗ್ದಾಳಿ ನಡೆಸಿದರು. ‘ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ, ಉಳುವವನೇ ಭೂ ಒಡೆಯ ಎಂಬ ಐತಿಹಾಸಿಕ ಕಾರ್ಯಕ್ರಮ ಜಾರಿಗೆ ತಂದು ಲಕ್ಷಾಂತರ ಜನರಿಗೆ ಭೂ ಒಡೆತನದ ಹಕ್ಕು ನೀಡಲಾಯಿತು. ಇದೇನು ಮೋದಿ, ಅಮಿತ್ ಶಾ ಜಾರಿಗೆ ತಂದಿದ್ದರಾ? ಇವರು ಒಂದಿಂಚು ಭೂಮಿಯನ್ನುಕೂಡ ಯಾರಿಗೂ ಕೊಟ್ಟಿಲ್ಲ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ನರೇಂದ್ರ ಮೋದಿ, ಅಮಿತ್ ಶಾ ವಿರುದ್ದ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಶಿವಮೊಗ್ಗ ನಗರದ ಎನ್ಇಎಸ್ ಮೈದಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಪಕ್ಷದ ವಿಧಾನಸಭೆ ಚುನಾವಣಾ ಪ್ರಚಾರ ಸಭೆಯಲ್ಲಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದರು. ತಮ್ಮ ಭಾಷಣದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ವಿರುದ್ದ ವಾಗ್ದಾಳಿ ನಡೆಸಿದರು.

‘ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ, ಉಳುವವನೇ ಭೂ ಒಡೆಯ ಎಂಬ ಐತಿಹಾಸಿಕ ಕಾರ್ಯಕ್ರಮ ಜಾರಿಗೆ ತಂದು ಲಕ್ಷಾಂತರ ಜನರಿಗೆ ಭೂ ಒಡೆತನದ ಹಕ್ಕು ನೀಡಲಾಯಿತು. ಇದೇನು ಮೋದಿ, ಅಮಿತ್ ಶಾ ಜಾರಿಗೆ ತಂದಿದ್ದರಾ? ಇವರು ಒಂದಿಂಚು ಭೂಮಿಯನ್ನುಕೂಡ ಯಾರಿಗೂ ಕೊಟ್ಟಿಲ್ಲ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ನರೇಂದ್ರ ಮೋದಿ, ಅಮಿತ್ ಶಾ ವಿರುದ್ದ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ Read More
ಹೆಚ್ಚುತ್ತಿರುವ ಬಿಸಿಲ ಝಳದ ನಡುವೆಯೇ, ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ವಿವಿಧೆಡೆ ಕಳೆದ ಕೆಲ ದಿನಗಳಿಂದ ಬೀಳುತ್ತಿರುವ ಬೇಸಿಗೆ ಮಳೆಯು, ತಂಪನೆ ವಾತಾವರಣ ನೆಲೆಸುವಂತೆ ಮಾಡಿದೆ. ಶಿವಮೊಗ್ಗ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಳೆದ ಕೆಲ ದಿನಗಳಿಂದ ಪೂರ್ವ ಮುಂಗಾರು ಮಳೆಯಾಗುತ್ತಿದೆ. ಭಾನುವಾರ ಸಂಜೆ ಹಲವೆಡೆ ಚದುರಿದಂತೆ ಮಳೆಯಾದ ವರದಿಗಳು ಬಂದಿವೆ.

ಶಿವಮೊಗ್ಗ : ವಿವಿಧೆಡೆ ಮುಂದುವರಿದ ಬೇಸಿಗೆ ಮಳೆ

ಹೆಚ್ಚುತ್ತಿರುವ ಬಿಸಿಲ ಝಳದ ನಡುವೆಯೇ, ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ವಿವಿಧೆಡೆ ಕಳೆದ ಕೆಲ ದಿನಗಳಿಂದ ಬೀಳುತ್ತಿರುವ ಬೇಸಿಗೆ ಮಳೆಯು, ತಂಪನೆ ವಾತಾವರಣ ನೆಲೆಸುವಂತೆ ಮಾಡಿದೆ.

ಶಿವಮೊಗ್ಗ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಳೆದ ಕೆಲ ದಿನಗಳಿಂದ ಪೂರ್ವ ಮುಂಗಾರು ಮಳೆಯಾಗುತ್ತಿದೆ.  ಭಾನುವಾರ ಸಂಜೆ ಹಲವೆಡೆ ಚದುರಿದಂತೆ ಮಳೆಯಾದ ವರದಿಗಳು ಬಂದಿವೆ.

ಶಿವಮೊಗ್ಗ : ವಿವಿಧೆಡೆ ಮುಂದುವರಿದ ಬೇಸಿಗೆ ಮಳೆ Read More
ಸಾರ್ವಜನಿಕರ ಸ್ಥಿರಾಸ್ತಿ ನೋಂದಣಿ ಪ್ರಕ್ರಿಯೆಯನ್ನು ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಸುಲಭಗೊಳಿಸಲು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಕಾವೇರಿ-2 (ಸಾಫ್ಟ್’ವೇರ್) ಅಭಿವೃದ್ದಿಪಡಿಸಿದೆ. ಆನ್’ಲೈನ್ (ಗಣಕೀಕೃತ) ಮೂಲಕ ಸ್ಥಿರಾಸ್ತಿ ನೊಂದಣಿಗೆ ಅವಕಾಶ ಕಲ್ಪಿಸಿದೆ. ಅದರಂತೆ ಶಿವಮೊಗ್ಗ ಜಿಲ್ಲೆಯ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿಯೂ ಆನ್’ಲೈನ್ ಆಧಾರಿತ ನೊಂದಣಿ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಮೇ 15 ರ ನಂತರ ಜಿಲ್ಲೆಯ ಎಲ್ಲಾ ಉಪ ನೋಂದಣಿ ಕಚೇರಿಗಳಲ್ಲಿ ನೋಂದಾಯಿಸಲಾಗುವ ಕ್ರಯ ಪತ್ರ/ ವಿಭಾಗ ಪತ್ರ/ ದಾನ ಪತ್ರ/ ಆಧಾರ/ ಆಧಾರ ಖುಲಾಸೆ ಇನ್ನಿತರೆ ಎಲ್ಲಾ ದಸ್ತಾವೇಜುಗಳ ಮಾಹಿತಿಯನ್ನು, ಸಾರ್ವಜನಿಕರು ವೆಬ್ ಸೈಟ್ https://kaveri.karnataka.gov.in ಮತ್ತು https://igr.karnataka.gov.in ಮೂಲಕ ಆನ್‍ಲೈನ್‍ನಲ್ಲಿಯೇ ಅಪ್‍ಲೋಡ್ ಮಾಡಿ ಮುಂದಿನ ನೋಂದಣಿ ಪ್ರಕ್ರಿಯೆ ಮಾಡಿಕೊಳ್ಳುವಂತೆ ಜಿಲ್ಲಾ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಶಿವಮೊಗ್ಗ ಜಿಲ್ಲೆಯ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಮೇ 15 ರ ನಂತರ ಆನ್‍ಲೈನ್‍ ಆಧಾರಿತ ನೊಂದಣಿ!

ಸಾರ್ವಜನಿಕರ ಸ್ಥಿರಾಸ್ತಿ ನೋಂದಣಿ ಪ್ರಕ್ರಿಯೆಯನ್ನು ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಸುಲಭಗೊಳಿಸಲು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಕಾವೇರಿ-2 (ಸಾಫ್ಟ್’ವೇರ್) ಅಭಿವೃದ್ದಿಪಡಿಸಿದೆ. ಆನ್’ಲೈನ್ (ಗಣಕೀಕೃತ) ಮೂಲಕ ಸ್ಥಿರಾಸ್ತಿ ನೊಂದಣಿಗೆ ಅವಕಾಶ ಕಲ್ಪಿಸಿದೆ.

ಅದರಂತೆ ಶಿವಮೊಗ್ಗ ಜಿಲ್ಲೆಯ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿಯೂ ಆನ್’ಲೈನ್ ಆಧಾರಿತ ನೊಂದಣಿ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಮೇ 15 ರ ನಂತರ ಜಿಲ್ಲೆಯ ಎಲ್ಲಾ ಉಪ ನೋಂದಣಿ ಕಚೇರಿಗಳಲ್ಲಿ ನೋಂದಾಯಿಸಲಾಗುವ ಕ್ರಯ ಪತ್ರ/ ವಿಭಾಗ ಪತ್ರ/ ದಾನ ಪತ್ರ/ ಆಧಾರ/ ಆಧಾರ ಖುಲಾಸೆ ಇನ್ನಿತರೆ ಎಲ್ಲಾ ದಸ್ತಾವೇಜುಗಳ ಮಾಹಿತಿಯನ್ನು, ಸಾರ್ವಜನಿಕರು ವೆಬ್ ಸೈಟ್ https://kaveri.karnataka.gov.in ಮತ್ತು https://igr.karnataka.gov.in ಮೂಲಕ ಆನ್‍ಲೈನ್‍ನಲ್ಲಿಯೇ ಅಪ್‍ಲೋಡ್ ಮಾಡಿ ಮುಂದಿನ ನೋಂದಣಿ ಪ್ರಕ್ರಿಯೆ ಮಾಡಿಕೊಳ್ಳುವಂತೆ ಜಿಲ್ಲಾ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಶಿವಮೊಗ್ಗ ಜಿಲ್ಲೆಯ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಮೇ 15 ರ ನಂತರ ಆನ್‍ಲೈನ್‍ ಆಧಾರಿತ ನೊಂದಣಿ! Read More
ಇದೇ ಮೊದಲ ಬಾರಿಗೆ ಚುನಾವಣಾ ಆಯೋಗವು ಪ್ರಸ್ತುತ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ, ೮೦ ವರ್ಷ ಮೇಲ್ಪಟ್ಟವರು ಹಾಗೂ ವಿಕಲಚೇತನರು ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಿದೆ. ಅದರಂತೆ ಶನಿವಾರದಿಂದ ಬ್ಯಾಲೆಟ್ ಪೇಪರ್ ವೋಟಿಂಗ್ (ಮತ ಪತ್ರದ ಮೂಲಕ ಮತದಾನ) ಗೆ ಚಾಲನೆ ದೊರಕಿದೆ. ಕಳೆದ ಕೆಲ ದಿನಗಳ ಹಿಂದೆಯೇ, ಚುನಾವಣಾ ಆಯೋಗವು ಮನೆಯಿಂದ ಮತದಾನ ಮಾಡಲು ಅರ್ಹತೆ ಹೊಂದಿದವರ ಪಟ್ಟಿ ಸಿದ್ದಪಡಿಸಿತ್ತು. ಸಂಬಂಧಿಸಿದವರಿಂದ ಒಪ್ಪಿಗೆ ಪತ್ರ ಪಡೆದುಕೊಂಡಿತ್ತು. ಅಂತಹವರಿಗೆ ಏ.29 ರಿಂದ ಚುನಾವಣಾಧಿಕಾರಿಗಳು ಅವರ ಮನೆಗಳಿಗೆ ತೆರಳಿ ಮತದಾನಕ್ಕೆ ಅವಕಾಶ ಕಲ್ಪಿಸುತ್ತಿದ್ದಾರೆ.

ವಿಧಾನಸಭೆ ಚುನಾವಣೆ : ಹಿರಿಯರು, ವಿಕಲಚೇತನರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ – ಶನಿವಾರದಿಂದ ವಿಧ್ಯುಕ್ತ ಚಾಲನೆ!

ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ಪ್ರಸ್ತುತ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ, ೮೦ ವರ್ಷ ಮೇಲ್ಪಟ್ಟವರು ಹಾಗೂ ವಿಕಲಚೇತನರು ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಿದೆ. ಅದರಂತೆ ಶನಿವಾರದಿಂದ ಬ್ಯಾಲೆಟ್ ಪೇಪರ್ ವೋಟಿಂಗ್ (ಮತ ಪತ್ರದ ಮೂಲಕ ಮತದಾನ) ಗೆ ಚಾಲನೆ ದೊರಕಿದೆ.

ಕಳೆದ ಕೆಲ ದಿನಗಳ ಹಿಂದೆಯೇ, ಚುನಾವಣಾ ಆಯೋಗವು ಮನೆಯಿಂದ ಮತದಾನ ಮಾಡಲು ಅರ್ಹತೆ ಹೊಂದಿದವರ ಪಟ್ಟಿ ಸಿದ್ದಪಡಿಸಿತ್ತು. ಸಂಬಂಧಿಸಿದವರಿಂದ ಒಪ್ಪಿಗೆ ಪತ್ರ ಪಡೆದುಕೊಂಡಿತ್ತು. ಅಂತಹವರಿಗೆ ಏ.29 ರಿಂದ ಚುನಾವಣಾಧಿಕಾರಿಗಳು ಅವರ ಮನೆಗಳಿಗೆ ತೆರಳಿ ಮತದಾನಕ್ಕೆ ಅವಕಾಶ ಕಲ್ಪಿಸುತ್ತಿದ್ದಾರೆ.

ವಿಧಾನಸಭೆ ಚುನಾವಣೆ : ಹಿರಿಯರು, ವಿಕಲಚೇತನರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ – ಶನಿವಾರದಿಂದ ವಿಧ್ಯುಕ್ತ ಚಾಲನೆ! Read More
ಭದ್ರಾವತಿ ವಿಧಾನಸಭಾ ಕ್ಷೇತ್ರ : ‘ವ್ಯಕ್ತಿ’ ಪ್ರತಿಷ್ಠೆಯ ಕಣ!
ಸಾಗರ : ಕರ್ಕಶ ಶಬ್ದ ಹೊರಹೊಮ್ಮಿಸುವ ಸೈಲೆನ್ಸರ್ ಗಳ ಮೇಲೆ ಬುಲ್ಡೋಜರ್ ಹರಿಸಿ ನಾಶ!

ಸಾಗರ : ಕರ್ಕಶ ಶಬ್ದ ಹೊರಹೊಮ್ಮಿಸುವ ಸೈಲೆನ್ಸರ್ ಗಳ ಮೇಲೆ ಬುಲ್ಡೋಜರ್ ಹರಿಸಿ ನಾಶ!

ಕರ್ಕಶ ಶಬ್ದ ಹೊರಹೊಮ್ಮಿಸುವ ಸೈಲೆನ್ಸರ್ ಅಳವಡಿಸಿಕೊಂಡು, ಶಬ್ದ ಮಾಲಿನ್ಯ ಹಾಗೂ ಸಾರ್ವಜನಿಕರಿಗೆ ತೀವ್ರ ಕಿರಿಕಿರಿ ಉಂಟು ಮಾಡುತ್ತಿದ್ದ, ಬೈಕ್ ಸವಾರರಿಗೆ ಶಾಕ್ ನೀಡುವ ಕಾರ್ಯಕ್ಕೆ ಸಾಗರ ಪೊಲೀಸರು ಚಾಲನೆ ನೀಡಿದ್ದಾರೆ..!

ಡಿಫೆಕ್ಟಿವ್ (ದೋಷಪೂರಿತ), ಮಾಡಿಫೈಡ್ (ಮಾರ್ಪಾಡು) ಸೈಲೆನ್ಸರ್ ಅಳವಡಿಸಿಕೊಂಡು ಸಾಗರ ಪಟ್ಟಣದಲ್ಲಿ ಓಡಾಡುತ್ತಿದ್ದ ಬೈಕ್ ಗಳನ್ನು ವಶಕ್ಕೆ ಪಡೆದು ವಾಹನ ಚಾಲಕರ ವಿರುದ್ದ ಕೇಸ್ ದಾಖಲಿಸಲಾರಂಭಿಸಿದ್ದಾರೆ.

ಸಾಗರ : ಕರ್ಕಶ ಶಬ್ದ ಹೊರಹೊಮ್ಮಿಸುವ ಸೈಲೆನ್ಸರ್ ಗಳ ಮೇಲೆ ಬುಲ್ಡೋಜರ್ ಹರಿಸಿ ನಾಶ! Read More