ಬೆಳ್ಳಂಬೆಳಿಗ್ಗೆ 241 ರೌಡಿ ಶೀಟರ್ ಮನೆಗಳ ಮೇಲೆ ಪೊಲೀಸರ ದಾಳಿ! ಭೂಗತ ಲೋಕಕ್ಕೆ ಪೊಲೀಸರ ಖಡಕ್ ವಾರ್ನಿಂಗ್!!

ಬೆಳ್ಳಂಬೆಳಿಗ್ಗೆ 241 ರೌಡಿ ಶೀಟರ್ ಮನೆಗಳ ಮೇಲೆ ಪೊಲೀಸರ ದಾಳಿ!

ಶಿವಮೊಗ್ಗ, ಸೆ. 11: ಬೆಳ್ಳಂಬೆಳಿಗ್ಗೆ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ನೂರಾರು ರೌಡಿಗಳ ಮನೆಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ, ತಪಾಸಣೆ ನಡೆಸಿದ ಘಟನೆ ಸೋಮವಾರ ನಡೆದಿದೆ.
ಮುಂಬರುವ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ, ಶಾಂತಿ – ಸುವ್ಯವಸ್ಥೆ ಕಾಯ್ದುಕೊಳ್ಳುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆ ಈ ಕಾರ್ಯಾಚರಣೆ ನಡೆಸಿದೆ. ಈ ಮೂಲಕ ಭೂಗತ ಲೋಕಕ್ಕೆ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಬೆಳ್ಳಂಬೆಳಿಗ್ಗೆ 241 ರೌಡಿ ಶೀಟರ್ ಮನೆಗಳ ಮೇಲೆ ಪೊಲೀಸರ ದಾಳಿ! Read More
ಇನ್ಸ್ಪೆಕ್ಟರ್ ಆದ 8 ವರ್ಷದ ಬಾಲಕ : ಪುಟಾಣಿಯ ಆಸೆ ಈಡೇರಿಸಿದ ಶಿವಮೊಗ್ಗ ಪೊಲೀಸ್ ಇಲಾಖೆ! ಶಿವಮೊಗ್ಗ, ಆ. 16: ದೊಡ್ಡವನಾದ ಮೇಲೆ ಪೊಲೀಸ್ ಅಧಿಕಾರಿಯಾಗಬೇಕೆಂಬ ಅದಮ್ಯ ಆಸೆ ಹೊಂದಿದ್ದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ 8 ವರ್ಷದ ಬಾಲಕನ ಕೋರಿಕೆಯನ್ನು, ಶಿವಮೊಗ್ಗ ಪೊಲೀಸ್ ಇಲಾಖೆ ಈಡೇರಿಸಿದೆ..! ಪುಟಾಣಿಯ ಆಸೆಯಂತೆ ಆತನನ್ನು ಪೊಲೀಸ್ ಠಾಣೆಗೆ ಕರೆಯಿಸಿ, ಪೊಲೀಸ್ ಅಧಿಕಾರಿಯಾಗುವ ಅವಕಾಶ ಕಲ್ಪಿಸಿದೆ. ಈ ಮೂಲಕ ಬಾಲಕನ ಬದುಕಿಗೆ ಹೊಸ ಚೈತನ್ಯ ತುಂಬುವ ಹೃದಯ ಸ್ಪರ್ಶಿ ಕಾರ್ಯ ನಡೆಸಿದೆ. ಹೌದು. ಮೂಲತಃ ಶಿವಮೊಗ್ಗದವರಾದ ಪ್ರಸ್ತುತ ಬಾಳೆಹೊನ್ನೂರಿನಲ್ಲಿ ನೆಲೆಸಿರುವ ತಬ್ರೇಜ್ ಖಾನ್ ಎಂಬುವರ ಪುತ್ರ ಆಜಾನ್ ಖಾನ್ ಪೊಲೀಸ್ ಅಧಿಕಾರಿಯಾಗಿ ಕಾರ್ಯಾಭಾರ ನಿರ್ವಹಿಸಿದ ಪುಟಾಣಿಯಾಗಿದ್ದಾನೆ. ಬುಧವಾರ ಸಂಜೆ ದೊಡ್ಡಪೇಟೆ ಪೊಲೀಸ್ ಠಾಣೆಗೆ ಪೊಲೀಸ್ ಅಧಿಕಾರಿ ಬಟ್ಟೆ ತೊಟ್ಟು ಆಗಮಿಸಿದ ಬಾಲಕನನ್ನು ಸ್ವತಃ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಠಾಣೆ ಮುಂಭಾಗ ಆತ್ಮೀಯ ಸ್ವಾಗತ ನೀಡಿದರು. ಠಾಣೆಯ ಇನ್ಸ್’ಪೆಕ್ಟರ್ ಕುರ್ಚಿಯಲ್ಲಿ ಕುಳಿತ ಆಜಾನ್ ಖಾನ್ ಪೊಲೀಸ್ ಅಧಿಕಾರಿ – ಸಿಬ್ಬಂದಿಗಳಿಗೆ ಕೆಲಸ ಕಾರ್ಯಗಳ ಕುರಿತಂತೆ ಸಲಹೆ ಸೂಚನೆ ನೀಡಿದ. ಪೊಲೀಸ್ ಅಧಿಕಾರಿಯಾಗುವ ತನ್ನ ಆಸೆ ಈಡೇರಿದ್ದಕ್ಕೆ ಬಾಲಕ ಸಂತಸಗೊಂಡಿದ್ದ. ನಗುನಗುತ್ತಲೆ ತನ್ನ ಸಂತಸ ಹಂಚಿಕೊಂಡ.

ಇನ್ಸ್‌ಪೆಕ್ಟರ್ ಆದ 8 ವರ್ಷದ ಬಾಲಕ : ಪುಟಾಣಿಯ ಆಸೆ ಈಡೇರಿಸಿದ ಶಿವಮೊಗ್ಗ ಪೊಲೀಸ್ ಇಲಾಖೆ!

ಶಿವಮೊಗ್ಗ, ಆ. 16: ದೊಡ್ಡವನಾದ ಮೇಲೆ ಪೊಲೀಸ್ ಅಧಿಕಾರಿಯಾಗಬೇಕೆಂಬ ಅದಮ್ಯ ಆಸೆ ಹೊಂದಿದ್ದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ 8 ವರ್ಷದ ಬಾಲಕನ ಕೋರಿಕೆಯನ್ನು, ಶಿವಮೊಗ್ಗ ಪೊಲೀಸ್ ಇಲಾಖೆ ಈಡೇರಿಸಿದೆ..! ಪುಟಾಣಿಯ ಆಸೆಯಂತೆ ಆತನನ್ನು ಪೊಲೀಸ್ ಠಾಣೆಗೆ ಕರೆಯಿಸಿ, ಪೊಲೀಸ್ ಅಧಿಕಾರಿಯಾಗುವ …

ಇನ್ಸ್‌ಪೆಕ್ಟರ್ ಆದ 8 ವರ್ಷದ ಬಾಲಕ : ಪುಟಾಣಿಯ ಆಸೆ ಈಡೇರಿಸಿದ ಶಿವಮೊಗ್ಗ ಪೊಲೀಸ್ ಇಲಾಖೆ! Read More
ಮನೆಯಲ್ಲಿ ಕಳ್ಳತನ ಪ್ರಕರಣ : ಆರೋಪಿ ಬಂಧನ

ಮನೆಯಲ್ಲಿ ಕಳ್ಳತನ ಪ್ರಕರಣ : ಆರೋಪಿ ಬಂಧನ

ಮನೆಯೊಂದರಲ್ಲಿ ನಗದು, ಚಿನ್ನಾಭರಣ, ಮೊಬೈಲ್ ಕಳವು ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ದೊಡ್ಡಪೇಟೆ ಠಾಣೆ ಪೊಲೀಸರು ಓರ್ವನನ್ನು ಬಂಧಿಸಿದ ಘಟನೆ ನಡೆದಿದೆ.

ಶಿವಮೊಗ್ಗದ ಸೂಳೇಬೈಲು ಸಮೀಪದ ಈದ್ಗಾನಗರದ ನಿವಾಸಿ ತೌಸೀಫ್ ಯಾನೆ ತೌಸೀಫ್’ವುಲ್ಲಾ ಯಾನೆ ಟೈಗರ್ (24) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಜೂ. 23 ರಂದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮನೆಯಲ್ಲಿ ಕಳ್ಳತನ ಪ್ರಕರಣ : ಆರೋಪಿ ಬಂಧನ Read More
ಶಿವಮೊಗ್ಗದಲ್ಲಿ ಬಿಜಾಪುರದ ಯುವಕ, ಬಳ್ಳಾರಿ ಯುವತಿ ಅರೆಸ್ಟ್! : ಮಾದಕ ವಸ್ತುಗಳು ವಶ

ಶಿವಮೊಗ್ಗದಲ್ಲಿ ಬಿಜಾಪುರದ ಯುವಕ, ಬಳ್ಳಾರಿ ಯುವತಿ ಅರೆಸ್ಟ್! : ಮಾದಕ ವಸ್ತುಗಳು ವಶ

ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ನಗರದಲ್ಲಿ ಬಿಜಾಪುರದ ಯುವಕ ಹಾಗೂ ಬಳ್ಳಾರಿ ಜಿಲ್ಲೆಯ ಯುವತಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಬಿಜಾಪುರದ ಕೀರ್ತಿನಗರದ ಅಬ್ದುಲ್ ಖಯ್ಯುಂ (25) ಹಾಗೂ ಬಳ್ಳಾರಿ ಜಿಲ್ಲೆ ಕೊಟ್ಟೂರು ಪಟ್ಟಣದ ಅರ್ಪಿತಾ (23) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಶಿವಮೊಗ್ಗದಲ್ಲಿ ಬಿಜಾಪುರದ ಯುವಕ, ಬಳ್ಳಾರಿ ಯುವತಿ ಅರೆಸ್ಟ್! : ಮಾದಕ ವಸ್ತುಗಳು ವಶ Read More
ಸಾಗರ ಖಾಸಗಿ ವಸತಿ ಶಾಲೆಯಲ್ಲಿ ಬಾಲಕಿಯ ಅನುಮಾನಾಸ್ಪದ ಸಾವು ಪ್ರಕರಣ : ಶಿವಮೊಗ್ಗ ಎಸ್ಪಿ ಹೇಳಿದ್ದೇನು?
ಡ್ರೋಣ್ ಕ್ಯಾಮರಾ ಮೂಲಕ ತಪಾಸಣೆ..!
ಆಗುಂಬೆ (ತೀರ್ಥಹಳ್ಳಿ), ಜೂ. 4: ‘ಹಳ್ಳಿಗಳಲ್ಲಿ ಕಾನೂನುಬಾಹಿರವಾಗಿ ಮದ್ಯ ಮಾರಾಟ ಮಾಡುವವರ ಬಗ್ಗೆ ಪೊಲೀಸ್ ಠಾಣೆ ಅಥವಾ ಬೀಟ್ ಸಿಬ್ಬಂದಿಗೆ ಮಾಹಿತಿ ನೀಡುವಂತೆ’ ನಾಗರೀಕರಿಗೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮನವಿ ಮಾಡಿದ್ದಾರೆ. ಭಾನುವಾರ ತೀರ್ಥಹಳ್ಳಿ ತಾಲೂಕು ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ ಕೈಮರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಾಗರೀಕರು ನೀಡುವ ಮಾಹಿತಿಯಿಂದ, ಅಕ್ರಮ ಮದ್ಯ ಮಾರಾಟಗಾರರ ವಿರುದ್ದ ಕ್ರಮ ಜರುಗಿಸಲು ಹಾಗೂ ಮದ್ಯ ಮಾರಾಟ ತಡೆಗಟ್ಟಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಕಾನೂನುಬಾಹಿರವಾಗಿ ಮದ್ಯ ಮಾರಾಟ ಮಾಡುವವರ ಬಗ್ಗೆ ಮಾಹಿತಿ ನೀಡಲು ಎಸ್ಪಿ ಮನವಿ

ಆಗುಂಬೆ (ತೀರ್ಥಹಳ್ಳಿ), ಜೂ. 4: ‘ಹಳ್ಳಿಗಳಲ್ಲಿ ಕಾನೂನುಬಾಹಿರವಾಗಿ ಮದ್ಯ ಮಾರಾಟ ಮಾಡುವವರ ಬಗ್ಗೆ ಪೊಲೀಸ್ ಠಾಣೆ ಅಥವಾ ಬೀಟ್ ಸಿಬ್ಬಂದಿಗೆ ಮಾಹಿತಿ ನೀಡುವಂತೆ’ ನಾಗರೀಕರಿಗೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮನವಿ ಮಾಡಿದ್ದಾರೆ.

ಭಾನುವಾರ ತೀರ್ಥಹಳ್ಳಿ ತಾಲೂಕು ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ ಕೈಮರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಾಗರೀಕರು ನೀಡುವ ಮಾಹಿತಿಯಿಂದ, ಅಕ್ರಮ ಮದ್ಯ ಮಾರಾಟಗಾರರ ವಿರುದ್ದ ಕ್ರಮ ಜರುಗಿಸಲು ಹಾಗೂ ಮದ್ಯ ಮಾರಾಟ ತಡೆಗಟ್ಟಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಕಾನೂನುಬಾಹಿರವಾಗಿ ಮದ್ಯ ಮಾರಾಟ ಮಾಡುವವರ ಬಗ್ಗೆ ಮಾಹಿತಿ ನೀಡಲು ಎಸ್ಪಿ ಮನವಿ Read More
ಶಿವಮೊಗ್ಗ, ಜೂ. 2: ಶಿವಮೊಗ್ಗ ನಗರದ ವಿವಿಧೆಡೆ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ, ತುಂಗಾ ನಗರ ಠಾಣೆ ಪೊಲೀಸರು ಮೂವರು ಅಪ್ರಾಪ್ತ ವಯಸ್ಸಿನ ಆರೋಪಿಗಳನ್ನು ಬಂಧಿಸಿದ್ದಾರೆ.

ಸುಲಿಗೆ ಪ್ರಕರಣ – ಮೂವರು ಅಪ್ರಾಪ್ತರ ಬಂಧನ : 23 ಮೊಬೈಲ್ ಪೋನ್ ವಶ!

ಶಿವಮೊಗ್ಗ, ಜೂ. 2: ಶಿವಮೊಗ್ಗ ನಗರದ ವಿವಿಧೆಡೆ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ, ತುಂಗಾ ನಗರ ಠಾಣೆ ಪೊಲೀಸರು ಮೂವರು ಅಪ್ರಾಪ್ತ ವಯಸ್ಸಿನ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 3.25 ಲಕ್ಷ ರೂ. ಮೌಲ್ಯದ ವಿವಿಧ ಕಂಪೆನಿಯ 3 ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿ ಚಕ್ರ ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ.

ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಬಾಲರಾಜ್ ಮಾರ್ಗದರ್ಶನದಲ್ಲಿ ಇನ್ಸ್’ಪೆಕ್ಟರ್ ಮಂಜುನಾಥ್, ಸಬ್ ಇನ್ಸ್ಪೆಪೆಕ್ಟರ್ ರಾಜುರೆ್ಡಿ, ಕುಮಾರ್ ಕುರಗುಂದ,

ಎಎಸ್ಐ ಮನೋಹರ್, ಸಿಬ್ಬಂದಿಗಳಾದ ಹೆಚ್.ಸಿ. ಕಿರಣ್ ಮೊರೆ, ಅರುಣ್ ಕುಮಾರ್, ಮೋಹನ್ ಕುಮಾರ್, ಸಿಪಿಸಿಗಳಾದ ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ್, ಲಂಕೇಶ್ ಕುಮಾರ್, ಕಾಂತರಾಜ್, ಅರಿಹಂತ ಶಿರಹಟ್ಟಿ, ಹರೀಶ್ ರವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಸುಲಿಗೆ ಪ್ರಕರಣ – ಮೂವರು ಅಪ್ರಾಪ್ತರ ಬಂಧನ : 23 ಮೊಬೈಲ್ ಪೋನ್ ವಶ! Read More
ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಜನ ಪ್ರದೇಶಗಳಲ್ಲಿ, ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ 22 ಜನರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಜೂ. 1 ರ ರಾತ್ರಿ ನಡೆದಿದೆ. ಠಾಣಾ ವ್ಯಾಪ್ತಿಯ ಕಾಶೀಪುರ, ಆಲ್ಕೋಳ, ಗಾಡಿಕೊಪ್ಪ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ನಿರ್ಜನ ಪ್ರದೇಶಗಳಲ್ಲಿ ಅನುಮಾನಾಸ್ಪದ ವರ್ತನೆ : 22 ಜನರು ಪೊಲೀಸ್ ವಶಕ್ಕೆ

ಶಿವಮೊಗ್ಗ, ಜೂ. 2: ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಜನ ಪ್ರದೇಶಗಳಲ್ಲಿ, ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ 22 ಜನರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಜೂ. 1 ರ ರಾತ್ರಿ ನಡೆದಿದೆ.

ಠಾಣಾ ವ್ಯಾಪ್ತಿಯ ಕಾಶೀಪುರ, ಆಲ್ಕೋಳ, ಗಾಡಿಕೊಪ್ಪ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ವಶಕ್ಕೆ ಪಡೆದವರನ್ನು ಠಾಣೆಗೆ ಕರೆತಂದು ಅವರ ಪೂರ್ವಾಪರಗಳನ್ನು ಸಂಗ್ರಹಿಸಿದ್ದಾರೆ. 22 ಲಘು ಪ್ರಕರಣ ದಾಖಲಿಸಿಕೊಂಡು ಬಿಡುಗಡೆ ಮಾಡಿದ್ದಾರೆ.

ನಿರ್ಜನ ಪ್ರದೇಶಗಳಲ್ಲಿ ಅನುಮಾನಾಸ್ಪದ ವರ್ತನೆ : 22 ಜನರು ಪೊಲೀಸ್ ವಶಕ್ಕೆ Read More