
shimoga | ಶಿವಮೊಗ್ಗ, ಭದ್ರಾವತಿ, ಶಿಕಾರಿಪುರದಲ್ಲಿ ಪೊಲೀಸರ ವಿಶೇಷ ಗಸ್ತು : 12 ಕೇಸ್ ದಾಖಲು!
ಶಿವಮೊಗ್ಗ (shivamogga), ಜ. 18: ಶಿವಮೊಗ್ಗ, ಭದ್ರಾವತಿ ಹಾಗೂ ಶಿಕಾರಿಪುರದ ವಿವಿಧೆಡೆ ಜ. 17 ರ ಸಂಜೆ ಪೊಲೀಸರು ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ಕಾಲ್ನಡಿಗೆ ಗಸ್ತು ಹಾಗೂ ಏರಿಯಾ ಡಾಮಿನೇಷನ್ ನಡೆಸಿದರು.
ಈ ಕುರಿತಂತೆ ಜಿಲ್ಲಾ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ಈ ವೇಳೆ ಅನುಮಾನಸ್ಪಾದ ವ್ಯಕ್ತಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಯಮಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದೆ.
ಶಿವಮೊಗ್ಗ ಎ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಎ ಎ ವೃತ್ತ, ಕಸ್ತೂರ ಬಾ ರಸ್ತೆ, ಉರ್ದು ಬಜಾರ್, ಬಿ ಬಿ ರಸ್ತೆ, ಬೈಪಾಸ್ ರಸ್ತೆ, ಇಮಾಮ್ ಬಾಡ, ಟಿಪ್ಪುನಗರ, ಸಿದ್ದೇಶ್ವರ ವೃತ್ತ, ಗೋಪಿ ಶೆಟ್ಟಿಕೊಪ್ಪ,
ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ಬಸವನಗುಡಿ, ಎ ಎ ಕಾಲೋನಿ, ಆಟೋ ಸ್ಟಾಂಡ್, ದುರ್ಗಿಗುಡಿ, ಬಾಲರಾಜ್ ಅರಸ್ ರಸ್ತೆ, ತಿಲಕ್ ನಗರ, ಕೋರ್ಟ್ ವೃತ್ತ,
ಜಯದೇವ ಬಡಾವಣೆ, ಶಿವಪ್ಪ ನಾಯಕ ಬಡಾವಣೆ, ರಾಗಿಗುಡ್ಡ ಬಡಾವಣೆಯಲ್ಲಿ ಕಾಲ್ನಡಿಗೆ ಗಸ್ತು ಹಾಗೂ ಏರಿಯಾ ಡಾಮಿನೇಷನ್ ಕಾರ್ಯವನ್ನು ಪೊಲೀಸರು ನಡೆಸಿದರು.
ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಶಿವಾಜಿ ವೃತ್ತ, ಅಣ್ಣಾ ನಗರ, ಬೊಮ್ಮನಕಟ್ಟೆ, ಬಿ.ಆರ್.ಪಿ, ಹೊಳೆಹೊನ್ನೂರು ಟೌನ್ ಹಾಗೂ ಶಿಕಾರಿಪುರ ಉಪ ವಿಭಾಗದಲ್ಲಿ ಶಿಕಾರಿಪುರ ಪಟ್ಟಣದಲ್ಲಿ ಕಾಲ್ನಡಿಗೆ ಗಸ್ತು – ಏರಿಯಾ ಡಾಮಿನೇಷನ್ ನಡೆಸಲಾಗಿದೆ.
ಡಿವೈಎಸ್ಪಿಗಳ ನೇತೃತ್ವದಲ್ಲಿ ಆಯಾ ಠಾಣೆಗಳ ಇನ್ಸ್’ಪೆಕ್ಟರ್, ಸಬ್ ಇನ್ಸ್’ಪೆಕ್ಟರ್ ಮತ್ತು ಸಿಬ್ಬಂದಿಗಳು ಭಾಗಿಯಾಗಿದ್ದರು. ಈ ವೇಳೆ ಅನುಮಾನಸ್ಪಾದ ವ್ಯಕ್ತಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಯಮಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದವರ ವಿರುದ್ದ 12 ಲಘು ಪ್ರಕರಣ ಮತ್ತು ಕೋಟ್ಪಾ ಕಾಯ್ದೆಯಡಿ 7 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Shimoga, January 18: On the evening of January 17, police conducted special foot patrols and area domination in various parts of Shimoga, Bhadravati and Shikaripura.
This information has been given in a press release issued by the District Police Department. It said that a case has been registered against suspicious persons and those who were behaving against the rules in public places.
At this time, 12 light cases and 7 cases under Kotpa Act have been registered against suspicious persons and those who were misbehaving in public places.