shimoga | Shimoga: Negligence of minor irrigation department – ​​drinking water is a disaster! shimoga | ಶಿವಮೊಗ್ಗ : ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯ – ಕುಡಿಯುವ ನೀರಿಗೆ ಹಾಹಾಕಾರ!

shimoga | ಶಿವಮೊಗ್ಗ : ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯ – ಕುಡಿಯುವ ನೀರಿಗೆ ಹಾಹಾಕಾರ!

ಶಿವಮೊಗ್ಗ (shivamogga), ಜ. 21: ಶಿವಮೊಗ್ಗ ನಗರದ ಹೊರವಲಯ ಬಸವನಗಂಗೂರು ಕೆರೆ ನೀರು ಹರಿದು ಹೋಗಲು ಕೆ.ಹೆಚ್.ಬಿ ಪ್ರೆಸ್ ಕಾಲೋನಿಯಲ್ಲಿ ಇತ್ತೀಚೆಗೆ ನಡೆಸಿದ ಕಾಲುವೆ ಕಾಮಗಾರಿ ವೇಳೆ, ಕುಡಿಯುವ ನೀರಿನ ಪೈಪ್ ಗಳು ಒಡೆದು ಹಾಕಲಾಗಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಕಾಲುವೆ ಕಾಮಗಾರಿ ಪೂರ್ಣಗೊಂಡು ತಿಂಗಳುಗಳೇ ಉರುಳಿದರೂ, ಇಲ್ಲಿಯವರೆಗೂ ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿ ಕಾಮಗಾರಿಯನ್ನು ಸಣ್ಣ ನೀರಾವರಿ ಇಲಾಖೆ ನಡೆಸಿಲ್ಲ. ಇದರಿಂದ ಹಲವು ದಿನಗಳಿಂದ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಕಾಲುವೆ ಕಾಮಗಾರಿ ವೇಳೆ, ಓವರ್ ಹೆಡ್ ಟ್ಯಾಂಕ್ ಗೆ ಕುಡಿಯುವ ನೀರು ಪೂರೈಕೆಯಾಗುವ ಹಾಗೂ ಟ್ಯಾಂಕ್ ನಿಂದ ಮನೆಗಳಿಗೆ ನೀರು ಪೂರೈಕೆಯಾಗುವ ಪೈಪ್ ಗಳು ಸಂಪೂರ್ಣ ಹಾಳಾಗಿವೆ. ಕಾಲಮಿತಿಯೊಳಗೆ ಪೈಪ್ ಲೈನ್ ದುರಸ್ತಿಗೊಳಿಸಿ ಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ಇಲ್ಲಿಯವರೆಗೂ ಪೈಪ್ ಗಳ ದುರಸ್ತಿ ಮಾಡದೆ ದಿವ್ಯ ನಿರ್ಲಕ್ಷ್ಯವಹಿಸಿದ್ದಾರೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪೈಪ್ ಲೈನ್ ದುರಸ್ತಿಗೊಳಿಸಿ ಕೊಡುವಂತೆ ಈಗಾಗಲೇ ಸಣ್ಣ ನೀರಾವರಿ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇಲ್ಲಿಯವರೆಗೂ ಪೈಪ್ ಲೈನ್ ದುರಸ್ತಿಯಾಗಿಲ್ಲ. ಮತ್ತೊಮ್ಮೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಪಿಡಿಓ ರಾಜಪ್ಪ ಅವರು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಂಗಳವಾರ ತಿಳಿಸಿದ್ದಾರೆ.

ಅವ್ಯವಸ್ಥೆ : ರಾಜಕಾಲುವೆ ನಿರ್ಮಾಣ ಕಾರ್ಯವು ಅವ್ಯವಸ್ಥೆಯ ಆಗರವಾಗಿದೆ. ಕಾಮಗಾರಿ ವೇಳೆ ಭಾರೀ ಸರಕು ಸಾಗಾಣೆ ವಾಹನಗಳ ಸಂಚಾರದಿಂದ ರಸ್ತೆಗಳು ಗುಂಡಿ – ಗೊಟರು ಬಿದ್ದಿವೆ. ಖಾಲಿ ನಿವೇಶನಗಳ ಮೇಲೆಯೇ ಮಣ್ಣು ತಂದು ಎಲ್ಲೆಂದರಲ್ಲಿ ಹಾಕಲಾಗಿದೆ. ಚರಂಡಿಗಳನ್ನು ಮಣ್ಣು ಹಾಕಿ ಮುಚ್ಚಲಾಗಿದೆ.

ಸರ್ಕಾರದಿಂದ ಮಂಜೂರಾದ ಅಂದಾಜು ಪಟ್ಟಿಗೆ ಅನುಗುಣವಾಗಿ ಕಾಮಗಾರಿ ನಡೆಯದಿರುವ ಅನುಮಾನಗಳಿವೆ. ತಕ್ಷಣವೇ ಜಿಲ್ಲಾಡಳಿತ ಕಾಲಮಿತಿಯೊಳಗೆ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು. ನಾಗರೀಕರಿಗೆ ಆಗುತ್ತಿರುವ ಅನಾನೂಕುಲ ಪರಿಹಾರಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.

Shimoga, January 21: Local residents have complained that drinking water pipes were broken during the recent construction of a canal in KHB Press Colony to drain Basavangangur lake water on the outskirts of Shimoga city.

Although it has been months since the completion of the canal work, the minor irrigation department has not carried out the repair work of the drinking water pipeline till now. Residents have alleged that the drinking water has been affected for many days.

There are suspicions that the work is not going on as per the estimated list approved by the government. The district administration should immediately take action to solve the problem within the time limit. Citizens should take steps to solve the problems that are happening to them. Residents have warned that otherwise they will take to the streets and protest.

Which trains will be affected? What is the Railway Department's announcement? ಯಾವೆಲ್ಲ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ? ರೈಲ್ವೆ ಇಲಾಖೆ ಪ್ರಕಟಣೆಯೇನು? Previous post shimoga | ಶಿವಮೊಗ್ಗ– ಚಿಕ್ಕಮಗಳೂರು ಪ್ಯಾಸೆಂಜರ್ ರೈಲು ಸಂಚಾರದಲ್ಲಿ ವ್ಯತ್ಯಯ : ಯಾವಾಗ? ಕಾರಣವೇನು?
shimoga | VISL factory: HD Kumaraswamy B Y Raghavendra against Madhu Bangarappa! shimoga | ವಿಐಎಸ್ಎಲ್ ಕಾರ್ಖಾನೆ : ಹೆಚ್ ಡಿ ಕುಮಾರಸ್ವಾಮಿ ಬಿ ವೈ ರಾಘವೇಂದ್ರ ವಿರುದ್ದ ಮಧು ಬಂಗಾರಪ್ಪ ಟೀಕಾಪ್ರಹಾರ! Next post shimoga | ವಿಐಎಸ್ಎಲ್ ಕಾರ್ಖಾನೆ : ಹೆಚ್ ಡಿ ಕುಮಾರಸ್ವಾಮಿ, ಬಿ ವೈ ರಾಘವೇಂದ್ರ ವಿರುದ್ದ ಮಧು ಬಂಗಾರಪ್ಪ ಟೀಕಾಪ್ರಹಾರ!