shimoga | bird flu : What are the precautionary measures taken in Shimoga district? shimoga | ಹಕ್ಕಿಜ್ವರ : ಶಿವಮೊಗ್ಗ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಮುನ್ನೆಚ್ಚರಿಕೆ ಕ್ರಮಗಳೇನು?

shimoga | ಹಕ್ಕಿಜ್ವರ : ಶಿವಮೊಗ್ಗ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಮುನ್ನೆಚ್ಚರಿಕೆ ಕ್ರಮಗಳೇನು?

ಶಿವಮೊಗ್ಗ (shivamogga), ಮಾ. 5: ರಾಜ್ಯದ ಬಳ್ಳಾರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲೂ ವ್ಯಾಪಕ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಾಗಬಾರದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆಡಳಿತ ಉಪ ನಿರ್ದೇಶಕರಾದ ಡಾ.ಎ.ಬಾಬುರತ್ನ ಅವರು ತಿಳಿಸಿದ್ದಾರೆ.

ಸೋಮವಾರ ನಗರದ ಪಶುವೈದ್ಯಕೀಯ ಇಲಾಖೆ ಕಚೇರಿಯಲ್ಲಿ ಸಂಜೆ 5 ಗಂಟೆಗೆ ಪಶುಸಂಗೋಪನಾ ಹಾಗೂ ರೇಷ್ಮೆ ಸಚಿವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ವರ್ಚುವಲ್ ಸಭೆಯಲ್ಲಿ ಅವರ ಮಾತನಾಡಿದರು.

ಜಿಲ್ಲೆಯಲ್ಲಿ ಒಟ್ಟು 332 ಕೋಳಿ ಫಾರಂಗಳಿವೆ. ಈ ಫಾರಂಗಳಲ್ಲಿ ಒಟ್ಟು 1741650 ಕೋಳಿಗಳ ಸಾಕಾಣಿಕ ಮಾಡಲಾಗಿದೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ ಯಾವುದೇ ಹಕ್ಕಿಜ್ವರ ಪ್ರಕರಣ ವರದಿಯಾಗಿಲ್ಲ. ಈಗಾಗಲೇ ಹಕ್ಕಿಜ್ವರ ಸಂಬಂಧಿಸಿದಂತೆ ಕಣ್ಗಾವಲು ಕಾರ್ಯಕ್ರಮ ನಡೆಸುತ್ತಿದ್ದು, ಈ ವರ್ಷದಲ್ಲಿ 476 ಕೋಳಿಗಳ ಮಾದರಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ.

ಜಿಲ್ಲೆಯಾದ್ಯಂತ 29 ರ‍್ಯಾಪಿಡ್ ರೆಸ್ಪಾನ್ಸ್ ಟೀಮ್‌ಗಳನ್ನು ಮಾಡಿದ್ದು, ಎಲ್ಲಾ ಕೋಳಿ ಫಾರಂಗಳ ಮೇಲೆ ನಿಗಾ ವಹಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು. ಅಸಹಜ ಹಾಗೂ ಸಾಮೂಹಿಕ ಕೋಳಿಗಳು ಸಾವನ್ನಪ್ಪಿದ ಕೂಡಲೇ ಸಮೀಪದ ಪಶುವೈದ್ಯ ಸಂಸ್ಥೆಗೆ ಮಾಹಿತಿ ನೀಡುವಂತೆ ಕೋಳಿ ಫಾರಂ ಮಾಲೀಕರಿಗೆ ಹಾಗೂ ಸಾರ್ವಜನಿಕರಿಗೆ ಸೂಚಿಸಲಾಗಿದೆ.

ಈ ರೀತಿಯ ಪ್ರಕರಣಗಳು ಕಂಡಬಂದಲ್ಲಿ ತಕ್ಷಣವೇ ವೈಜ್ಞಾನಿಕ ವಿಲೇವಾರಿಗೂ ಕೂಡ ತಯಾರಿ ಮಾಡಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Shimoga, May 4: Dr. A. Baburathna, Administrative Deputy Director of Animal Husbandry and Veterinary Services Department, said that extensive precautionary measures have been taken in Shimoga district in view of the appearance of bird flu in Bellary and Chikkaballapur districts of the state.

shimoga | Shivamogga: In which areas will there be no electricity on March 17? shimoga | ಶಿವಮೊಗ್ಗ : ಯಾವೆಲ್ಲ ಪ್ರದೇಶಗಳಲ್ಲಿ ಮಾ. 17 ರಂದು ವಿದ್ಯುತ್ ಇರಲ್ಲ? Previous post ಶಿವಮೊಗ್ಗ : ಮಾರ್ಚ್ 6 ರಂದು ಹರಕೆರೆ, ನ್ಯೂಮಂಡ್ಲಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ
Shimoga: Water supply workers' protest for 3rd day - Officials not visiting the place! shimoga | ಶಿವಮೊಗ್ಗ : ಅಹೋರಾತ್ರಿ ಪ್ರತಿಭಟನೆ 3 ನೇ ದಿನಕ್ಕೆ – ಸ್ಥಳಕ್ಕೆ ಭೇಟಿ ನೀಡದ ಅಧಿಕಾರಿಗಳು! Next post shimoga | ಶಿವಮೊಗ್ಗ : ಅಹೋರಾತ್ರಿ ಪ್ರತಿಭಟನೆ 3 ನೇ ದಿನಕ್ಕೆ – ಸ್ಥಳಕ್ಕೆ ಭೇಟಿ ನೀಡದ ಅಧಿಕಾರಿಗಳು!