shimoga rain | Shivamogga | Heavy rain in Malnad even before the start of monsoon! shimoga rain | ಶಿವಮೊಗ್ಗ | ಮುಂಗಾರು ಆರಂಭಕ್ಕೂ ಮುನ್ನವೇ ಮಲೆನಾಡಲ್ಲಿ ಭರ್ಜರಿ ಮಳೆ!

shimoga rain | ಶಿವಮೊಗ್ಗ : ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ!

ಶಿವಮೊಗ್ಗ (shivamogga), ಏ. 16: ರಾಜ್ಯದ ವಿವಿಧೆಡೆ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದೆ. ಹಾಗೆಯೇ ಕೆಲ ದಿನಗಳಿಂದ ಶಿವಮೊಗ್ಗ ಜಿಲ್ಲೆಯ ವಿವಿಧೆಡೆಯೂ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದೆ!

ಈ ನಡುವೆ ಏ. 16 ರಂದು ಕೂಡ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ಈ ಹಿನ್ನೆಲೆಯಲ್ಲಿ, ಬುಧವಾರ ಶಿವಮೊಗ್ಗ ಜಿಲ್ಲೆಗೆ ಯೆಲ್ಲೋ ಅಲರ್ಟ್ ಮುನ್ಸೂಚನೆ ಕೂಡ ನೀಡಲಾಗಿದೆ. ಏ. 15 ರಂದು ಶಿವಮೊಗ್ಗ ತಾಲೂಕಿನ ಕೆಲ ಗ್ರಾಮಗಳು ಸೇರಿದಂತೆ ಜಿಲ್ಲೆಯ ಹಲವೆಡೆ ಗುಡುಗು, ಬಿರುಗಾಳಿ ಸಹಿತ ವ್ಯಾಪಕ ಮಳೆಯಾಗಿತ್ತು.

ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರಸ್ತುತ ವರ್ಷ ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಿಲ ಬೇಗೆಯ ಪ್ರಮಾಣ ಹೆಚ್ಚಿದೆ. ಇದರಿಂದ ಅಂತರ್ಜಲ ಮಟ್ಟ ಕುಸಿತವಾಗಲಾರಂಭಿಸಿತ್ತು. ಜೊತೆಗೆ ಕೆರೆಕಟ್ಟೆ ಸೇರಿದಂತೆ ವಿವಿಧ ಜಲಮೂಲಗಳು ಒಣಗಲಾರಂಭಿಸಿದ್ದವು.

ಪ್ರಸ್ತುತ ರಣ ಬಿಸಿಲಿನ ವೇಳೆ ಬೀಳುತ್ತಿರುವ ಮುಂಗಾರು ಪೂರ್ವ ಮಳೆಯಿಂದ ಜನ – ಜಾನುವಾರುಗಳಿಗೆ ಸಾಕಷ್ಟು ಅನುಕೂಲವಾಗಿದೆ. ಬಿಸಿಲ ತಾಪಕ್ಕೆ ಕಾದಿದ್ದ ಭೂಮಿ ತಂಪಾಗುವಂತೆ ಮಾಡಿದೆ.

Shivamogga, Apr. 16: Pre-monsoon rains have intensified in various parts of the state. Similarly, for the past few days, various parts of Shivamogga district have also been receiving heavy rains accompanied by thunder and lightning!

Meanwhile, the Indian Meteorological Department has forecast heavy rains with thunderstorms in various places in Shivamogga district on April 16th as well.

In this context, a yellow alert has also been issued for Shivamogga district on Wednesday. On April 15, there was widespread rain accompanied by thunder and lightning in many parts of the district, including some villages in Shivamogga taluk. #ಮಳೆ, #ಶಿವಮೊಗ್ಗಮಳೆ, #ಮಳೆಮುನ್ಸೂಚನೆ, #ಭಾರೀಮಳೆ, #shimogarain, #shimogarainalert, #rainalert, #rain, #shimogarainnews,

shimoga APMC vegetable prices | Details of vegetable prices for September 19 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 19 ರ ತರಕಾರಿ ಬೆಲೆಗಳ ವಿವರ Previous post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಏ. 16 ರ ತರಕಾರಿ ಬೆಲೆಗಳ ವಿವರ
Shivamogga: Youth Congress protests against the Centre - Attempt to siege the post office! ಶಿವಮೊಗ್ಗ : ಕೇಂದ್ರದ ವಿರುದ್ದ ಯುವ ಕಾಂಗ್ರೆಸ್ ಪ್ರತಿಭಟನೆ - ಅಂಚೆ ಕಚೇರಿಗೆ ಮುತ್ತಿಗೆ ಯತ್ನ! Next post ಶಿವಮೊಗ್ಗ : ಕೇಂದ್ರದ ವಿರುದ್ದ ಯುವ ಕಾಂಗ್ರೆಸ್ ಪ್ರತಿಭಟನೆ – ಅಂಚೆ ಕಚೇರಿಗೆ ಮುತ್ತಿಗೆ ಯತ್ನ!