shimoga rain | ಶಿವಮೊಗ್ಗ : ಭಾರೀ ಮಳೆ ಮುಂದುವರಿಕೆ ಮುನ್ಸೂಚನೆ!

low pressure drop in bey of bengal : Rains intensify again in various places in Shivamogga district! ವಾಯುಭಾರ ಕುಸಿತ : ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮತ್ತೆ ಮಳೆ ಚುರುಕು!

ಶಿವಮೊಗ್ಗ (shivamogga), ಮೇ 3: ಶಿವಮೊಗ್ಗ ನಗರ ಸೇರಿದಂತೆ ತಾಲೂಕಿನ ವಿವಿಧೆಡೆ, ಶನಿವಾರ ಮುಂಜಾನೆ ಗುಡುಗು ಸಹಿತ ಮಳೆಯಾಯಿತು. ಇದರಿಂದ ಬಿಸಿಲ ಬೇಗೆಗೆ ಕಾದ ಕಾವಲಿಯಂತಾಗಿದ್ದ ನಗರದಲ್ಲಿ ತಣ್ಣನೆಯ ವಾತಾವರಣ ನೆಲೆಸುವಂತಾಗಿತ್ತು.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತ ಪರಿಚಲನೆ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ, ರಾಜ್ಯದ ಮಲೆನಾಡು ಭಾಗ ಸೇರಿದಂತೆ ವಿವಿಧೆಡೆ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದೆ. ವ್ಯಾಪಕ ಮಳೆಯಾಗುತ್ತಿದೆ.

ಮೇ 7 ರವರೆಗೆ ಮಳೆ ಮುಂದುವರಿಯುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮತ್ತೊಂದೆಡೆ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಬೇಸಿಗೆ ತಾಪ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಈ ನಡುವೆ ಮುಂಗಾರು ಪೂರ್ವ ಮಳೆ ಚುರುಕುಗೊಂಡಿರುವುದು ನಾಗರೀಕರಲ್ಲಿ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಜಾನುವಾರುಗಳ ಮೇವು – ನೀರಿಗೆ ಸಾಕಷ್ಟು ಅನುಕೂಲಕರವಾಗಿ ಪರಿಣಮಿಸಿದೆ.

Shivamogga, May 3: Various parts of the taluk, including Shivamogga city, received thundershowers since early Saturday morning. This brought cool weather to the city, which had been reeling under the scorching heat.

In the wake of the severe weather conditions caused by the cyclonic circulation in the Bay of Bengal, pre-monsoon rains have intensified in various parts of the state, including the Malnad region. Widespread rainfall is occurring.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →