Shivamogga: Houses damaged due to cylinder explosion – MLA visits ಶಿವಮೊಗ್ಗ : ಸಿಲಿಂಡರ್ ಸ್ಫೋಟದಿಂದ ಮನೆಗಳಿಗೆ ಹಾನಿ – ಶಾಸಕರ ಭೇಟಿ

shimoga news | ಶಿವಮೊಗ್ಗ : ಸಿಲಿಂಡರ್ ಸ್ಫೋಟದಿಂದ ಮನೆಗಳಿಗೆ ಹಾನಿ – ಶಾಸಕರ ಭೇಟಿ

ಶಿವಮೊಗ್ಗ (shivamogga), ಡಿಸೆಂಬರ್ 26: ಅಡುಗೆ ಮಾಡಲು ಬಳಸುವ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಹಾನಿಗೀಡಾದ ನಗರದ ಸಿದ್ದೇಶ್ವರ ನಗರದಲ್ಲಿರುವ ಮನೆಗಳಿಗೆ,  ಶಾಸಕ ಎಸ್ ಎನ್ ಚನ್ನಬಸಪ್ಪ ಅವರು ಡಿಸೆಂಬರ್ 26 ರಂದು ಭೇಟಿಯಿತ್ತು ಪರಿಶೀಲಿಸಿದರು.

ಡಿಸೆಂಬರ್ 25 ರಂದು ಧರ್ಮಪ್ಪ ಎಂಬುವರು ವಾಸವಿದ್ದ ಬಾಡಿಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ, ಇಡೀ ಮನೆ ಹಾನಿಗೀಡಾಗಿತ್ತು. ಮನೆಯಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿದ್ದವು. ಹಾಗೆಯೇ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿತ್ತು.

ಶಾಸಕ ಚನ್ನಬಸಪ್ಪ ಅವರು ಸದರಿ ಮನೆಗಳಿಗೆ ಭೇಟಿಯಿತ್ತು ಹಾನಿಯ ಪ್ರಮಾಣ ವೀಕ್ಷಿಸಿದರು. ಕುಟುಂಬ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು. ಅಗತ್ಯ ನೆರವಿನಹಸ್ತ ಕಲ್ಪಿಸುವ ಭರವಸೆ ನೀಡಿದ್ದಾರೆ.

ಸಿಲಿಂಡರ್ ಸ್ಫೋಟದಿಂದ ಹಾನಿಗೀಡಾದ ಮನೆಗಳ ಸದಸ್ಯರಿಗೆ ಸರ್ಕಾರದಿಂದ ದೊರಕಬಹುದಾದ ನೆರವಿನ ಹಸ್ತವನ್ನು ಕಾಲಮಿತಿಯೊಳಗೆ ಕಲ್ಪಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಶಾಸಕರು ಸೂಚಿಸಿದ್ದಾರೆ.

Shivamogga, December 26: MLA SN Channabasappa visited and inspected the houses in Siddeshwara Nagar of the city, which were damaged due to the explosion of a gas cylinder used for cooking, on December 26.

Bengaluru | Good news for residents of Thanda – Hatti - Gollarahatti : Title deeds for 1.10 lakh families in February - a significant step by the Revenue Department! ಬೆಂಗಳೂರು | ತಾಂಡ –ಹಟ್ಟಿ - ಗೊಲ್ಲರಹಟ್ಟಿ ನಿವಾಸಿಗಳಿಗೆ ಸಿಹಿ ಸುದ್ದಿ : ಫೆಬ್ರವರಿ Previous post bengaluru news | ಬೆಂಗಳೂರು | ತಾಂಡ, ಹಟ್ಟಿ, ಗೊಲ್ಲರಹಟ್ಟಿ ನಿವಾಸಿಗಳಿಗೆ ಸಿಹಿ ಸುದ್ದಿ : ಫೆಬ್ರವರಿ ತಿಂಗಳಲ್ಲಿ1.10 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ – ಕಂದಾಯ ಇಲಾಖೆಯ ಮಹತ್ವದ ಕ್ರಮ!