shimoga | ಶಿವಮೊಗ್ಗ ನಗರದ ವಿವಿಧೆಡೆ ಧಾರಾಕಾರ ಮಳೆ!
ಶಿವಮೊಗ್ಗ (shivamogga), ಮೇ 13: ಶಿವಮೊಗ್ಗ ನಗರದ ವಿವಿಧೆಡೆ ಮೇ 13 ರ ಸಂಜೆ ಗುಡುಗು ಸಹಿತ ಧಾರಾಕಾರ ಮಳೆಯಾಯಿತು. ಬಿಸಿಲ ಬೇಗೆಗೆ ಕಾದ ಕಾವಲಿಯಂತಾಗಿದ್ದ ಇಳೆಯು ತಂಪಾಯಿತು.
ಕಳೆದ ಕೆಲ ದಿನಗಳಿಂದ ಮುಂಗಾರು ಪೂರ್ವ ಮಳೆ ಕಣ್ಮರೆಯಾಗಿತ್ತು. ಮತ್ತೊಂದೆಡೆ ಬಿಸಿಲ ಬೇಗೆಯ ಪ್ರಮಾಣ ಹೆಚ್ಚಾಗಿತ್ತು. ಈ ನಡುವೆ ಮಂಗಳವಾರ ಸಂಜೆ ಬಿದ್ದ ಧಾರಾಕಾರ ಮಳೆ ನಾಗರಿಕರಲ್ಲಿ ನೆಮ್ಮದಿಯ ನಿಟ್ಟಿಸಿರು ಬಿಡುವಂತೆ ಮಾಡಿತು.
ಸರಿಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬಿದ್ದ ಭಾರಿ ಮಳೆಯಿಂದ ನಗರದ ಹಲವೆಡೆ ರಸ್ತೆಯ ಮೇಲೆಯೇ ಮಳೆ ನೀರು ಹರಿದು ಹೋಯಿತು. ಇದರಿಂದ ಜನ – ವಾಹನ ಸಂಚಾರಕ್ಕೆ ಧಕ್ಕೆಯಾಗುವಂತಾಯಿತು.
ಮತ್ತೊಂದೆಡೆ ಭಾರತೀಯ ಹವಾಮಾನ ಇಲಾಖೆಯು ಮುಂದಿನ ಕೆಲ ದಿನಗಳವರೆಗೆ ಮಲೆನಾಡಿನ ಪ್ರದೇಶಗಳು ಸೇರಿದಂತೆ ರಾಜ್ಯದ ವಿವಿಧೆಡೆ ಮುಂಗಾರು ಪೂರ್ವ ಮಳೆ ಮುಂದುವರೆಯುವ ಮುನ್ಸೂಚನೆ ನೀಡಿದೆ.
Shivamogga, May 13: Heavy rain accompanied by thunder and lightning lashed various parts of Shivamogga city on the evening of May 13.
The pre-monsoon rains had disappeared for the past few days. On the other hand, the scorching heat had increased. Meanwhile, the torrential rains that fell on Tuesday evening brought a sigh of relief among the citizens.
More Stories
shimoga news | ಶಿವಮೊಗ್ಗ : ಸಿನಿಮಾ ಕಲಾವಿದೆ, ವಕೀಲೆ ಪೂರ್ಣಿಮಾ ಪ್ರಸನ್ನರಿಗೆ ‘ಮಾನವ ರತ್ನ ಶ್ರೇಷ್ಠ’ ರಾಜ್ಯ ಪ್ರಶಸ್ತಿ ಗೌರವ
Shivamogga: Film artist and lawyer Purnima Prasanna honoured with ‘Manava Ratna Shrestha’ state award
ಶಿವಮೊಗ್ಗ : ಸಿನಿಮಾ ಕಲಾವಿದೆ, ವಕೀಲೆ ಪೂರ್ಣಿಮಾ ಪ್ರಸನ್ನರಿಗೆ ‘ಮಾನವ ರತ್ನ ಶ್ರೇಷ್ಠ’ ರಾಜ್ಯ ಪ್ರಶಸ್ತಿ ಗೌರವ
hosanagara news | ಶಿವಮೊಗ್ಗ | ಹೊಸನಗರ | ವಿದ್ಯುತ್ ಶಾಕ್ ನಿಂದ ಅಡಕೆ ತೋಟದಲ್ಲಿ ಕಾರ್ಮಿಕ ಸಾವು : ಮತ್ತೋರ್ವರಿಗೆ ಗಂಭೀರ ಗಾಯ!
Worker dies in a coconut plantation due to electric shock; another seriously injured!
ಶಿವಮೊಗ್ಗ | ಹೊಸನಗರ | ವಿದ್ಯುತ್ ಶಾಕ್ ನಿಂದ ಅಡಕೆ ತೋಟದಲ್ಲಿ ಕಾರ್ಮಿಕ ಸಾವು : ಮತ್ತೋರ್ವರಿಗೆ ಗಂಭೀರ ಗಾಯ!
railway news | ಪ್ರಮುಖ ರೈಲುಗಳ ಸಂಚಾರ ನಿಯಂತ್ರಣ : ಯಾವಾಗ? ಕಾರಣವೇನು?
Traffic control of important trains : When? What is the reason?
ಪ್ರಮುಖ ರೈಲುಗಳ ಸಂಚಾರ ನಿಯಂತ್ರಣ : ಯಾವಾಗ? ಕಾರಣವೇನು?
shimoga news | ಶಿವಮೊಗ್ಗ : ಸಿಲಿಂಡರ್ ಸ್ಫೋಟದಿಂದ ಮನೆಗಳಿಗೆ ಹಾನಿ – ಶಾಸಕರ ಭೇಟಿ
Shivamogga: Houses damaged due to cylinder explosion – MLA visits
ಶಿವಮೊಗ್ಗ : ಸಿಲಿಂಡರ್ ಸ್ಫೋಟದಿಂದ ಮನೆಗಳಿಗೆ ಹಾನಿ – ಶಾಸಕರ ಭೇಟಿ
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಡಿಸೆಂಬರ್ 26 ರ ತರಕಾರಿ ಬೆಲೆಗಳ ವಿವರ
shimoga APMC vegetable prices | Details of vegetable prices for December 26 in shimoga APMC wholesale market
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಡಿಸೆಂಬರ್ 26 ರ ತರಕಾರಿ ಬೆಲೆಗಳ ವಿವರ
shimoga | ಶಿವಮೊಗ್ಗದ ಜೆಪಿಎನ್ ರಸ್ತೆ ನಿವಾಸಿ ಸುಲೋಚನಮ್ಮ ವಿಧಿವಶ
Sulochanamma a resident of JPN Road Shimoga passed away
ಶಿವಮೊಗ್ಗದ ಜೆಪಿಎನ್ ರಸ್ತೆ ನಿವಾಸಿ ಸುಲೋಚನಮ್ಮ ವಿಧಿವಶ
